ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಗಳಿಂದ ಆಸ್ಟ್ರಿಯಾದ ಭಾರತ ಶಾಸ್ತ್ರಜ್ಞರ ಭೇಟಿ

Posted On: 10 JUL 2024 9:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಾಲ್ವರು ಆಸ್ಟ್ರಿಯನ್ ಭಾರತೀಯ ಶಾಸ್ತ್ರಜ್ಞರು ಮತ್ತು ಭಾರತೀಯ ಇತಿಹಾಸ ಮತ್ತು ಚಿಂತನೆಯ ವಿದ್ವಾಂಸರನ್ನು ಭೇಟಿ ಮಾಡಿದರು. ಬೌದ್ಧ ತತ್ವಜ್ಞಾನಿ ಮತ್ತು ಭಾಷಾ ಶಾಸ್ತ್ರಜ್ಞರಾದ ಡಾ. ಬಿರ್ಗಿಟ್ ಕೆಲ್ಲೆನರ್; ಆಧುನಿಕ ದಕ್ಷಿಣ ಏಷ್ಯಾ ವಿದ್ವಾಂಸ ಪ್ರೊಫೆಸರ್ ಮಾರ್ಟಿನ್ ಗೆನ್ಸ್ಲೆ; ವಿಯೆನ್ನಾ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗದ ಪ್ರೊಫೆಸರ್ ಡಾ.ಬೋರಯಿನ್ ಲಾರಿಯೋಸ್; ಮತ್ತು ವಿಯೆನ್ನಾ ವಿಶ್ವವಿದ್ಯಾಲಯದ ಭಾರತ-ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕರಿನ್ ಪ್ರೆಸೆಂಡಾಜ಼್ ಅವರೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಿದರು.

ಭಾರತೀಯ ಇತಿಹಾಸ, ತತ್ವಶಾಸ್ತ್ರ, ಕಲೆ ಮತ್ತು ಸಂಸ್ಕೃತಿಯ ವಿವಿಧ ಆಯಾಮಗಳು ಮತ್ತು ಭಾರತೀಯ ಶಾಸ್ತ್ರದ ಬಗ್ಗೆ ವಿದ್ವಾಂಸರೊಂದಿಗೆ ಪ್ರಧಾನಮಂತ್ರಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು. ಆಸ್ಟ್ರಿಯಾದಲ್ಲಿ ಭಾರತೀಯ ಶಾಸ್ತ್ರದ ಮೂಲದ ಬಗ್ಗೆ ಮತ್ತು ಅದು ಅಲ್ಲಿನ ಬೌದ್ಧಿಕ ಕುತೂಹಲ ಮತ್ತು ವಿದ್ವತ್ತಿನ ಮೇಲೆ ಬೀರಿದ ಪ್ರಭಾವದ ಬಗ್ಗೆ ಪ್ರಧಾನಿ ವಿಚಾರಿಸಿದರು. ಈ ಚರ್ಚೆಯಲ್ಲಿ, ವಿದ್ವಾಂಸರು ಭಾರತದೊಂದಿಗೆ ತಮ್ಮ ಶೈಕ್ಷಣಿಕ ಮತ್ತು ಸಂಶೋಧನಾ ನಂಟಿನ ಬಗ್ಗೆ ತಿಳಿಸಿದರು.

 

*****
 



(Release ID: 2032454) Visitor Counter : 11