ರೈಲ್ವೇ ಸಚಿವಾಲಯ

ಶ್ರೀ ಅಶ್ವಿನಿ ವೈಷ್ಣವ್ ಅವರು ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿ ಅಧಿಕಾರ ವಹಿಸಿಕೊಂಡರು


ರೈಲ್ವೆಯನ್ನು ಕೈಗೆಟುಕುವ ಮತ್ತು ಅನುಕೂಲಕರವಾದ ಸಾರಿಗೆಯನ್ನು ಮಾಡುವುದು ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿಜಿಯವರ ದೂರದೃಷ್ಟಿ - ಶ್ರೀ ಅಶ್ವಿನಿ ವೈಷ್ಣವ್

ರೈಲ್ವೆಯು ಅಪಾರ ಪರಿವರ್ತನೆಯನ್ನು ಸಾಧಿಸಿದೆ: ಕಳೆದ 10 ವರ್ಷಗಳಲ್ಲಿ ಆಧುನೀಕರಣ, ಹೊಸ ರೈಲುಗಳು, ನಿಲ್ದಾಣದ ಪುನರಾಭಿವೃದ್ಧಿ ಮತ್ತು ವಿದ್ಯುದೀಕರಣ - ಶ್ರೀ ವೈಷ್ಣವ್

Posted On: 11 JUN 2024 3:25PM by PIB Bengaluru

ರೈಲ್ವೆ, ಮಾಹಿತಿ ಮತ್ತು ಪ್ರಸಾರ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನದ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ರೈಲ್ವೆ ಭವನದಲ್ಲಿ ಅಧಿಕಾರ ವಹಿಸಿಕೊಂಡರು. ರೈಲ್ವೇ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ  ಆದ ಶ್ರೀಮತಿ ಜಯವರ್ಮ ಸಿನ್ಹಾ ಅವರು ರೈಲ್ವೇ ಹಿರಿಯ ಅಧಿಕಾರಿಗಳೊಂದಿಗೆ ರೈಲ್ ಭವನದಲ್ಲಿ ಅವರನ್ನು ಸ್ವಾಗತಿಸಿದರು.   ನಿರ್ವಹಣಾ ಸಿಬ್ಬಂದಿ ಮತ್ತು ರೈಲ್ವೆಯ ಇತರ ಅಧಿಕಾರಿಗಳು ಸಹ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಕ್ಕಾಗಿ ಹಾರೈಸಿ ಅಭಿನಂದಿಸಿದರು.

 

WhatsApp Image 2024-06-11 at 14.14.14.jpeg

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ವೈಷ್ಣವ್ ಅವರು ಪ್ರಧಾನಮಂತ್ರಿ ಮೋದಿಯವರ ದೀರ್ಘಾವಧಿಯ ದೃಷ್ಟಿಕೋನವನ್ನು ಸಾಕಾರಗೊಳಿಸುವ ಅವರ ಅಚಲ ಬದ್ಧತೆಯನ್ನು ಒತ್ತಿ ಹೇಳಿದರು. "ಪ್ರಧಾನಮಂತ್ರಿ ಮೋದಿ ಅವರು ರೈಲ್ವೆಯೊಂದಿಗೆ ವಿಶೇಷ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ ಮತ್ತು ಭಾರತೀಯ ರೈಲ್ವೆಯು ಸಾರ್ವಜನಿಕರಿಗೆ ಕೈಗೆಟುಕುವ ಮತ್ತು ಅನುಕೂಲಕರವಾದ ಸಾರಿಗೆ ವಿಧಾನವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಅವರ   ಉದ್ದೇಶದ ಕಾರ್ಯವನ್ನು ಮತ್ತಷ್ಟು ಹೆಚ್ಚಿಸುವ ಜವಾಬ್ದಾರಿಯನ್ನು ಅವರು ನನಗೆ ವಹಿಸಿದ್ದಾರೆ" ಎಂದು ಅವರು ಹೇಳಿದರು.

 

WhatsApp Image 2024-06-11 at 10.21.35.jpeg

ಜುಲೈ 8, 2021 ರಂದು ಮೊದಲಿಗೆ ರೈಲ್ವೆ ಸಚಿವರಾಗಿದ್ದ ಶ್ರೀ ವೈಷ್ಣವ್ ಅವರು ನಿರೀಕ್ಷೆ ಮತ್ತು ಆಶಾವಾದದೊಂದಿಗೆ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಿದರು. ಅವರ ಹಿಂದಿನ ಅಧಿಕಾರಾವಧಿಯಲ್ಲಿ, ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿಗದಿಪಡಿಸಿದ ದೂರದೃಷ್ಟಿಯ ಕಾರ್ಯಸೂಚಿಯೊಂದಿಗೆ ಹಲವಾರು ಪರಿವರ್ತನಾ ಯೋಜನೆಗಳನ್ನು ಪ್ರಾರಂಭಿಸಿದರು ಮತ್ತು ಕಾರ್ಯಗತಗೊಳಿಸಿದರು. ಈ ಉಪಕ್ರಮಗಳು ರೈಲ್ವೆ ಮೂಲಸೌಕರ್ಯಗಳ ಆಧುನೀಕರಣ ಮತ್ತು ಪುನರುಜ್ಜೀವನವನ್ನು ಒಳಗೊಂಡಿದ್ದವು, ಇದರಲ್ಲಿ ನಿಲ್ದಾಣಗಳ ರೂಪಾಂತರ, ಹೊಸ ರೈಲುಗಳ ಪರಿಚಯ, ಸಮಗ್ರ ನಿಲ್ದಾಣದ ಪುನರಾಭಿವೃದ್ಧಿ ಕಾರ್ಯಕ್ರಮಗಳು, ಹೊಸ ರೈಲು ಮಾರ್ಗಗಳ ಕಾರ್ಯಾರಂಭ ಮತ್ತು ವ್ಯಾಪಕ ವಿದ್ಯುದ್ದೀಕರಣ ಪ್ರಯತ್ನಗಳು ಸೇರಿವೆ.

 

ಶ್ರೀ ಅಶ್ವಿನಿ ವೈಷ್ಣವ್ (ಜನನ 1970) ಒಡಿಶಾದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅವರು ಮಾಜಿ ಐಎಎಸ್  ಅಧಿಕಾರಿಯಾಗಿದ್ದಾರೆ ಮತ್ತು ಸುಂದರ್ ಗಢ್, ಬಾಲಸೋರ್ ಮತ್ತು ಕಟಕ್ ನ ಜನರಿಗೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಐಐಟಿ ಕಾನ್ಪುರದಿಂದ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ವಾರ್ಟನ್ ನಿಂದ ಎಂಬಿಎ ಪದವಿಯನ್ನು ಪಡೆದಿರುವರು.

 

ಟ್ವಿಟರ್: https://twitter.com/AshwiniVaishnaw?s=08

 

ಇನ್ಸ್ಟಾ ಗ್ರಾಮ್: https://www.instagram.com/ashwini.vaishnaw/

 

*****



(Release ID: 2024633) Visitor Counter : 21