ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿ ಅಧಿಕಾರ ವಹಿಸಿಕೊಂಡ ಡಾ ಮನ್ಸುಖ್ ಮಾಂಡವಿಯಾ 

प्रविष्टि तिथि: 11 JUN 2024 2:24PM by PIB Bengaluru

ನವದೆಹಲಿಯಲ್ಲಿರುವ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಕಚೇರಿಯಲ್ಲಿ ಡಾ. ಮನ್ಸುಖ್ ಮಾಂಡವಿಯಾ ಅವರು ಇಂದು ಅಧಿಕಾರ ವಹಿಸಿಕೊಂಡರು. ಅವರು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರ ಖಾತೆಯನ್ನೂ ಕೂಡಾ  ಹೊಂದಿದ್ದಾರೆ.

 


 

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ  ಕಾರ್ಯದರ್ಶಿ ಶ್ರೀಮತಿ ಸುಮಿತಾ ದಾವ್ರಾ  ಹಾಗೂ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ  ಕಾರ್ಯದರ್ಶಿ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಕೇಂದ್ರ ಸಚಿವರನ್ನು ಸ್ವಾಗತಿಸಿದರು.

ಡಾ. ಮಾಂಡವಿಯಾ ಅವರು ಈ ಹಿಂದಿನ ಸರ್ಕಾರದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರ ಇಲಾಖೆಗಳ ಸಚಿವರಾಗಿದ್ದರು.

 

ಡಾ. ಮಾಂಡವಿಯಾ ಅವರು ಗುಜರಾತ್ ನ ಪೋರಬಂದರ್ನಿಂದ ಲೋಕಸಭಾ ಸ್ಥಾನವನ್ನು ಗೆದ್ದಿದ್ದಾರೆ. ಈ ಹಿಂದೆ, 2012-2024ರ ಅವಧಿಯಲ್ಲಿ ಅವರು ರಾಜ್ಯಸಭಾ ಸದಸ್ಯರಾಗಿದ್ದರು ಹಾಗೂ 2002-2007ರ ಅವಧಿಯಲ್ಲಿ ಅವರು ಪಾಲಿಟಾನಾ ಕ್ಷೇತ್ರದಿಂದ ಗುಜರಾತ್ ವಿಧಾನಸಭೆಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. 

 
*****


(रिलीज़ आईडी: 2024157) आगंतुक पटल : 104
इस विज्ञप्ति को इन भाषाओं में पढ़ें: English , Urdu , Marathi , हिन्दी , Hindi_MP , Bengali , Punjabi , Gujarati , Odia , Tamil , Telugu , Malayalam