ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿ.ಎಂ.ಎ.ವೈ)ಯಡಿಯಲ್ಲಿ 3 ಕೋಟಿ ಹೆಚ್ಚುವರಿ ಗ್ರಾಮೀಣ ಮತ್ತು ನಗರ ಮನೆಗಳ ನಿರ್ಮಾಣ 'ಜನಜೀವನ ಸುಲಭಗೊಳಿಸಲು' ಮತ್ತು ಕೋಟಿಗಟ್ಟಲೆ ಭಾರತೀಯರ ಘನತೆಗೆ ಉತ್ತೇಜನ ನೀಡುವುದು: ಪ್ರಧಾನಮಂತ್ರಿ 

Posted On: 10 JUN 2024 9:54PM by PIB Bengaluru

"ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿ.ಎಂ.ಎ.ವೈ)ಯಡಿಯಲ್ಲಿ  3 ಕೋಟಿ ಹೆಚ್ಚುವರಿ ಗ್ರಾಮೀಣ ಮತ್ತು ನಗರ ಮನೆಗಳ ನಿರ್ಮಾಣ ನಿರ್ಧಾರವು ನಮ್ಮ ರಾಷ್ಟ್ರದ ವಸತಿ ಅಗತ್ಯಗಳನ್ನು ಪರಿಹರಿಸಲು ಮತ್ತು ಪ್ರತಿಯೊಬ್ಬ ನಾಗರಿಕರು ಉತ್ತಮ ಗುಣಮಟ್ಟದ ಜೀವನವನ್ನು ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಹೊಂದಿರುವ ಬದ್ಧತೆಯನ್ನು ಒತ್ತಿಹೇಳುತ್ತದೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. 

ಪ್ರಧಾನಮಂತ್ರಿಯವರು ತಮ್ಮ "ಎಕ್ಸ್" ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ: 

"ಕೋಟಿಗಟ್ಟಲೆ ಭಾರತೀಯರಿಗೆ ‘ಜೀವನ ಸುಲಭಗೊಳ್ಳುವ ವ್ಯವಸ್ಥೆ’ ಮತ್ತು ಘನತೆ ಗೌರವಗಳಿಗೆ ಉತ್ತೇಜನ ಸಿಗಲಿದೆ!

ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಮತ್ತು 3 ಕೋಟಿ ಹೆಚ್ಚುವರಿ ಗ್ರಾಮೀಣ ಮತ್ತು ನಗರ ಮನೆಗಳನ್ನು ನಿರ್ಮಿಸಲು ಕೇಂದ್ರ ಸಂಪುಟ ಸಭೆ ನಿರ್ಧರಿಸಿದೆ.  ಈ ನಿರ್ಧಾರವು ನಮ್ಮ ರಾಷ್ಟ್ರದ ವಸತಿ ಅಗತ್ಯಗಳನ್ನು ಪರಿಹರಿಸಲು ಮತ್ತು ಪ್ರತಿಯೊಬ್ಬ ನಾಗರಿಕರು ಉತ್ತಮ ಗುಣಮಟ್ಟದ ಜೀವನವನ್ನು ನಡೆಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ಹೊಂದಿರುವ ಬದ್ಧತೆಯನ್ನು ತೋರಿಸಿಕೊಡುತ್ತದೆ. ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿ.ಎಂ.ಎ.ವೈ)ಯಡಿಯಲ್ಲಿ ವಸತಿ  ನಿರ್ಮಾಣ ಕಾರ್ಯ ವಿಸ್ತರಣೆಯು ಎಲ್ಲರ ಅಂತರ್ಗತ ಅಭಿವೃದ್ಧಿಗೆ ಮತ್ತು ಸಾಮಾಜಿಕ ಕಲ್ಯಾಣ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

 

 *****



(Release ID: 2023967) Visitor Counter : 30