ವಾರ್ತಾ ಮತ್ತು ಪ್ರಸಾರ ಸಚಿವಾಲಯ

18ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024ರ ಜೂನ್ 15ರಿಂದ 21ರವರೆಗೆ ನಡೆಯಲಿದೆ


ದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಪುಣೆಯಲ್ಲಿಯೂ ಪ್ರದರ್ಶನಗಳೊಂದಿಗೆ ಮುಂಬೈನಲ್ಲಿ ಚಲನಚಿತ್ರೋತ್ಸವ ನಡೆಯಲಿದೆ

59 ದೇಶಗಳಿಂದ 61 ಭಾಷೆಗಳ ದಾಖಲೆಯ 1000 ಕ್ಕೂ ಹೆಚ್ಚು ಚಲನಚಿತ್ರಗಳು ಸಲ್ಲಿಕೆಯಾಗಿವೆ

2024 ರ ಆವೃತ್ತಿಯು ಸಾಕ್ಷ್ಯಚಿತ್ರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಡಾಕ್ ಫಿಲ್ಮ್ ಬಜಾರ್‌ ಅನ್ನು ಪರಿಚಯಿಸುತ್ತಿದೆ

ನಿಗದಿತ ವಿಷಯಗಳನ್ನು ಕುರಿತು 25 ಕ್ಕೂ ಹೆಚ್ಚು ಮಾಸ್ಟರ್‌ ಕ್ಲಾಸ್‌ ಗಳು, ಪ್ಯಾನಲ್ ಚರ್ಚೆಗಳು ಮತ್ತು ಮುಕ್ತ ವೇದಿಕೆಗಳಲ್ಲಿ ಪ್ರಸಿದ್ಧ ಚಲನಚಿತ್ರ ನಿರ್ಮಾತೃಗಳು ಭಾಗವಹಿಸುತ್ತಾರೆ

ಅಂತಾರಾಷ್ಟ್ರೀಯ ಚಲನಚಿತ್ರ ನಿರ್ದೇಶಕರಾದ ಆಡ್ರಿಯಸ್ ಸ್ಟೋನಿಸ್, ಭರತ್ ಬಾಲಾ, ಡಾ. ಬಾಬಿ ಶರ್ಮಾ ಬರುವಾ, ಅನ್ನಾ ಹೆನ್ಕೆಲ್-ಡೊನ್ನರ್ಸ್‌ಮಾರ್ಕ್ ಮತ್ತು ನಿರ್ಮಾಪಕರಾದ ಅಪೂರ್ವ ಬಕ್ಷಿ, ಅಡೆಲೆ ಸೀಲ್‌ಮನ್-ಎಗ್‌ಬರ್ಟ್, ಕೀಕೊ ಬ್ಯಾಂಗ್ ಮತ್ತು ಬಾರ್ತೆಲೆಮಿ ಫೌಗಿಯಾ ಅವರು ಗೌರವಾನ್ವಿತ ತೀರ್ಪುಗಾರ ಸದಸ್ಯರ ತಂಡಲ್ಲಿದ್ದಾರೆ

Posted On: 07 JUN 2024 4:10PM by PIB Bengaluru

ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 18 ನೇ ಆವೃತ್ತಿಯು 2024 ರ ಜೂನ್ 15 ರಿಂದ ಜೂನ್ 21 ರವರೆಗೆ ಮುಂಬೈನಲ್ಲಿ ನಡೆಯಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಇಂದು ಪ್ರಕಟಿಸಿದರು. ಚಲನಚಿತ್ರೋತ್ಸವವು ಮುಂಬೈನ ಎಫ್‌ ಡಿ-ಎನ್‌ ಎಫ್‌ ಡಿ ಸಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ, ಹಾಗೆಯೇ ದೆಹಲಿ (ಸಿರಿಫೋರ್ಟ್ ಆಡಿಟೋರಿಯಂ), ಚೆನ್ನೈ (ಟ್ಯಾಗೋರ್ ಫಿಲ್ಮ್ ಸೆಂಟರ್), ಪುಣೆ (ಎನ್‌ ಎಫ್‌ ಎ ಐ ಆಡಿಟೋರಿಯಂ) ಮತ್ತು ಕೋಲ್ಕತ್ತಾ (ಎಸ್‌ ಆರ್‌ ಎಫ್‌ ಟಿ ಐ ಆಡಿಟೋರಿಯಂ) ಗಳಲ್ಲಿಯೂ ಎಂ ಐ ಎಫ್‌ ಎಫ್ ಪ್ರದರ್ಶನಗಳು ನಡೆಯಲಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ಶ್ರೀಮತಿ ನೀರ್ಜಾ ಶೇಖರ್, ಪಿಐಬಿಯ ಪ್ರಧಾನ ಮಹಾನಿರ್ದೇಶಕಿ ಶ್ರೀಮತಿ ಶೇಫಾಲಿ ಬಿ. ಶರಣ್ ಮತ್ತು ಎನ್‌ ಎಫ್‌ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪೃಥುಲ್ ಕುಮಾರ್ ಉಪಸ್ಥಿತರಿದ್ದರು.

ಎಂ ಐ ಎಫ್‌ ಎಫ್ ಚಲನಚಿತ್ರ ಕಾರ್ಯಕ್ರಮಗಳು

1.     59 ದೇಶಗಳಿಂದ 61 ಭಾಷೆಗಳಲ್ಲಿ ಸ್ಪರ್ಧಾತ್ಮಕ ವಿಭಾಗಗಳಿಗಾಗಿ ಈ ವರ್ಷ ದಾಖಲೆಯ 1018 ಚಲನಚಿತ್ರಗಳ ಸಲ್ಲಿಕೆಯಾಗಿದೆ.

2.  ಅಂತಾರಾಷ್ಟ್ರೀಯ (25) ಮತ್ತು ರಾಷ್ಟ್ರೀಯ (77) ಸ್ಪರ್ಧಾ ವಿಭಾಗಗಳಿಗೆ ಖ್ಯಾತ ಚಲನಚಿತ್ರ ತಜ್ಞರ 3 ಆಯ್ಕೆ ಸಮಿತಿಗಳಿಂದ 118 ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಈ ವರ್ಷ ಉತ್ತಮ ಗುಣಮಟ್ಟದ ಚಲನಚಿತ್ರ ಸಲ್ಲಿಕೆಗಳನ್ನು ಸ್ವೀಕರಿಸಲಾಗಿದ್ದು, ಇದು ಆಯ್ಕೆಗಳನ್ನು ಕಠಿಣಗೊಳಿಸಿತು ಎಂದು ಆಯ್ಕೆ ಸಮಿತಿಯು ಸರ್ವಾನುಮತದಿಂದ ತಿಳಿಸಿದೆ, 

3.   ಈ ವರ್ಷ ಎಂ ಐ ಎಫ್‌ ಎಫ್ ನಲ್ಲಿ ಒಟ್ಟು 314 ಚಲನಚಿತ್ರಗಳು

4.   8 ವಿಶ್ವ ಪ್ರೀಮಿಯರ್‌ ಗಳು, 6 ಅಂತಾರಾಷ್ಟ್ರೀಯ ಪ್ರೀಮಿಯರ್‌ ಗಳು, 17 ಏಷ್ಯಾ ಪ್ರೀಮಿಯರ್‌ ಗಳು ಮತ್ತು 15 ಇಂಡಿಯಾ ಪ್ರೀಮಿಯರ್‌ ಗಳು ಇರುತ್ತವೆ.

5.     ಈ ಆವೃತ್ತಿಯಲ್ಲಿ ವಿಶೇಷ ಪ್ಯಾಕೇಜ್‌ ಗಳನ್ನು ಮಾಡಲಾಗಿದೆ, ಅವುಗಳೆಂದರೆ:

          ಎ.     ಆಸ್ಕರ್ ಮತ್ತು ಬರ್ಲಿನೇಲ್ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ಯಾಕೇಜ್ (ತಲಾ 12 ಕಿರುಚಿತ್ರಗಳು)

       ಬಿ. 7 ದೇಶಗಳ - ರಷ್ಯಾ, ಜಪಾನ್, ಬೆಲಾರಸ್, ಇಟಲಿ, ಇರಾನ್, ವಿಯೆಟ್ನಾಂ ಮತ್ತು ಮಾಲಿ - ಸಹಯೋಗದೊಂದಿಗೆ 'ಸ್ಪೆಷಲ್‌ ಕಂಟ್ರಿ ಫೋಕಸ್‌ʼಪ್ಯಾಕೇಜ್‌ ಗಳು'

          ಸಿ. ಫ್ರಾನ್ಸ್, ಸ್ಲೊವೇನಿಯಾ, ಅರ್ಜೆಂಟೀನಾ ಮತ್ತು ಗ್ರೀಸ್ ದೇಶಗಳ ಆನಿಮೇಷನ್ ಪ್ಯಾಕೇಜ್ 

          ಡಿ. ದೇಶದಾದ್ಯಂತದ ಪ್ರತಿಷ್ಠಿತ ಸಂಸ್ಥೆಗಳ ವಿದ್ಯಾರ್ಥಿ ಚಲನಚಿತ್ರಗಳು (45 ಚಲನಚಿತ್ರಗಳು)

          ಇ. ಎನ್‌ ಎಫ್‌ ಡಿ ಸಿ-ನ್ಯಾಷನಲ್ ಫಿಲ್ಮ್ ಆರ್ಕೈವ್ಸ್ ಆಫ್ ಇಂಡಿಯಾದಿಂದ ಕ್ಲಾಸಿಕ್ಸ್ ಪ್ಯಾಕೇಜ್ 

       ಎಫ್.  ಅಮೃತ ಕಾಲದಲ್ಲಿ ಭಾರತ ಕುರಿತ ವಿಶೇಷ ವಿಷಯದ ಮೇಲೆ ಸ್ಪರ್ಧೆಯ ಚಲನಚಿತ್ರಗಳು ದೇಶದ ಬೆಳವಣಿಗೆ, ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಪ್ರದರ್ಶಿಸುತ್ತವೆ
   ಜಿ. ಆಡಿಯೋ ವಿವರಣೆ ಮತ್ತು ಸಂಕೇತ ಭಾಷೆಯ ವಿವರಣೆಗಳೊಂದಿಗೆ ದೃಷ್ಟಿದೋಷವುಳ್ಳರಿಗೆ ಮತ್ತು ಶೀರ್ಷಿಕೆಗಳೊಂದಿಗೆ ಶ್ರವಣದೋಷವುಳ್ಳವರಿಗೆ ದಿವ್ಯಾಂಗರ ಪ್ಯಾಕೇಜ್‌ ಚಲನಚಿತ್ರಗಳು

       ಎಚ್.   ಈ ವಿಷಯಗಳ ಮೇಲೂ ಚಲನಚಿತ್ರಗಳ ಆಯ್ದ ಪ್ಯಾಕೇಜ್‌ ಗಳು -
                                 i.   ವನ್ಯಜೀವಿ
                                 ii   ಮಿಷನ್ ಲೈಫ್
                                iii   ಏಷ್ಯನ್ ಮಹಿಳಾ ಚಲನಚಿತ್ರ ನಿರ್ದೇಶಕರ ಚಲನಚಿತ್ರಗಳು

ಎಂ ಐ ಎಫ್‌ ಎಫ್ ನ ಉದ್ಘಾಟನಾ ಮತ್ತು ಸಮಾರೋಪದ ಚಲನಚಿತ್ರ

6.  18 ನೇ ಎಂ ಐ ಎಫ್‌ ಎಫ್ ನ ಉದ್ಘಾಟನಾ ಚಲನಚಿತ್ರವು "ಬಿಲ್ಲಿ & ಮೊಲ್ಲಿ, ಆನ್‌ ಒಟ್ಟರ್ ಲವ್ ಸ್ಟೋರಿ" ಆಗಿರುತ್ತದೆ, 15 ಜೂನ್, 2024 ರಂದು ಮುಂಬೈ, ದೆಹಲಿ, ಕೋಲ್ಕತ್ತಾ, ಪುಣೆ ಮತ್ತು ಚೆನ್ನೈನಲ್ಲಿ ಪ್ರದರ್ಶನಗಳೊಂದಿಗೆ ಉತ್ಸವವು ಆರಂಭವಾಗುತ್ತದೆ.

7.   ಚಿತ್ರೋತ್ಸವದ ಸಮಾರೋಪದ ಚಲನಚಿತ್ರವು ಸುವರ್ಣ ಶಂಖವನ್ನು ಗೆದ್ದ ಚಲನಚಿತ್ರವಾಗಿರುತ್ತದೆ ಮತ್ತು 21 ಜೂನ್, 2024 ರಂದು ಅದನ್ನು ಪ್ರದರ್ಶಿಸಲಾಗುತ್ತದೆ.

ತೀರ್ಪುಗಾರರು ಮತ್ತು ಪ್ರಶಸ್ತಿಗಳು

8.  ಅಂತಾರಾಷ್ಟ್ರೀಯ ತೀರ್ಪುಗಾರರ ತಂಡವು ಪ್ರಪಂಚದಾದ್ಯಂತದ ಪ್ರಸಿದ್ಧ ಚಲನಚಿತ್ರ ವ್ಯಕ್ತಿಗಳನ್ನು ಒಳಗೊಂಡಿದೆ - ಕೀಕೊ ಬ್ಯಾಂಗ್, ಬಾರ್ತೆಲೆಮಿ ಫೌಜಿಯಾ, ಆಡ್ರಿಯಸ್ ಸ್ಟೋನಿಸ್, ಭರತ್ ಬಾಲಾ ಮತ್ತು ಮಾನಸ್ ಚೌಧರಿಯವರನ್ನು ಹೊಂದಿದೆ. ಇವರು ಸುವರ್ಣ ಶಂಖ ಪ್ರಶಸ್ತಿಗಾಗಿ ಅತ್ಯುತ್ತಮ ಸಾಕ್ಷ್ಯಚಿತ್ರವನ್ನು, ಬೆಳ್ಳಿ ಶಂಖ ಪ್ರಶಸ್ತಿಗಾಗಿ ಅತ್ಯುತ್ತಮ ಅಂತಾರಾಷ್ಟ್ರೀಯ ಕಿರು ಚಿತ್ರ ಮತ್ತು ಅತ್ಯುತ್ತಮ ಅನಿಮೇಷನ್ ಚಿತ್ರ ಹಾಗೂ ಪ್ರಮೋದ್ ಪತಿ ಪ್ರಶಸ್ತಿಗಾಗಿ ಅತ್ಯಂತ ನವೀನ/ಪ್ರಾಯೋಗಿಕ ಚಿತ್ರವನ್ನು ಆಯ್ಕೆ ಮಾಡುತ್ತಾರೆ.

9.     18ನೇ ಎಂ ಐ ಎಫ್‌ ಎಫ್‌ ಗಾಗಿ ರಾಷ್ಟ್ರೀಯ ತೀರ್ಪುಗಾರರಾಗಿ ಅಡೆಲೆ ಸೀಲ್‌ಮನ್-ಎಗ್‌ಬರ್ಟ್, ಡಾ. ಬಾಬಿ ಶರ್ಮಾ ಬರುವಾ, ಅಪೂರ್ವ ಬಕ್ಷಿ, ಮುಂಜಾಲ್ ಶ್ರಾಫ್ ಮತ್ತು ಅನ್ನಾ ಹೆನ್‌ಕೆಲ್-ಡಾನ್ ನೆರ್ಸ್‌ಮಾರ್ಕ್‌ ನಂತಹ ಹೆಸರಾಂತರು ಇರುತ್ತಾರೆ. ಅವರು ಅತ್ಯುತ್ತಮ ಭಾರತೀಯ ಸಾಕ್ಷ್ಯಚಿತ್ರ, ಕಿರುಚಿತ್ರ, ಆನಿಮೇಷನ್, ಅತ್ಯುತ್ತಮ ಚೊಚ್ಚಲ ಚಲನಚಿತ್ರ (ಮಹಾರಾಷ್ಟ್ರದ ಸರ್ಕಾರದಿಂದ ಪ್ರಾಯೋಜಿಸಲ್ಪಟ್ಟಿದೆ) ಮತ್ತು ಅತ್ಯುತ್ತಮ ವಿದ್ಯಾರ್ಥಿ ಚಲನಚಿತ್ರ (ಐಡಿಪಿಎ ಪ್ರಾಯೋಜಿತ) ವನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡುತ್ತಾರೆ. ಇವುಗಳ ಜೊತೆಗೆ ತಾಂತ್ರಿಕ ಪ್ರಶಸ್ತಿಗಳು ಮತ್ತು "ಇಂಡಿಯಾ ಇನ್ ಅಮೃತ್ ಕಾಲ್" ಕುರಿತ ಅತ್ಯುತ್ತಮ ಕಿರುಚಿತ್ರಕ್ಕಾಗಿ ವಿಶೇಷ ಪ್ರಶಸ್ತಿಗಳಿಗೂ ಆಯ್ಕೆ ಮಾಡುತ್ತಾರೆ.

10.     1) ಛಾಯಾಗ್ರಹಣ, 2) ಸಂಕಲನ ಮತ್ತು 3) ಧ್ವನಿ ವಿನ್ಯಾಸಕ್ಕಾಗಿ 3 ತಾಂತ್ರಿಕ ಪ್ರಶಸ್ತಿಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಯಿಂದ ನೀಡಲಾಗುತ್ತದೆ.

11. ಮೂವರು ಪ್ರಖ್ಯಾತ ಚಲನಚಿತ್ರ ವಿಮರ್ಶಕರ FIPRESCI ತೀರ್ಪುಗಾರರ ತಂಡವು ರಾಷ್ಟ್ರೀಯ ಸ್ಪರ್ಧೆಯ ಸಾಕ್ಷ್ಯಚಿತ್ರಕ್ಕಾಗಿ ಪ್ರಶಸ್ತಿಯನ್ನು ಪ್ರಕಟಿಸುತ್ತಾರೆ

12.     ಪ್ರಶಸ್ತಿಗಳ ಒಟ್ಟು ಮೌಲ್ಯ ರೂ 42 ಲಕ್ಷ.
ಸುಗಮ ಪ್ರವೇಶದ ಉತ್ಸವ

13. ಆಡಿಯೋ ವಿವರಣೆ ಮತ್ತು ಸಂಕೇತ ಭಾಷೆಯ ವಿವರಣೆಯೊಂದಿಗೆ ದೃಷ್ಟಿದೋಷವಿರುವವರಿಗೆ ಮತ್ತು ಶೀರ್ಷಿಕೆಗಳೊಂದಿಗೆ ಶ್ರವಣದೋಷವುಳ್ಳವರಿಗೆ ಚಲನಚಿತ್ರಗಳು.

14.   ವಿಶೇಷ ಚೇತನರಿಗಾಗಿ ವಿಶೇಷ ಚಲನಚಿತ್ರಗಳ ಜೊತೆಗೆ, ಎನ್‌ ಎಫ್‌ ಡಿ ಸಿ, ಎನ್‌ ಎಫ್‌ ಡಿ ಸಿ –ಎಫ್‌ ಡಿ ಆವರಣದಲ್ಲಿನ ಎಂ ಐ ಎಫ್‌ ಎಫ್ ಉತ್ಸವದ ಸ್ಥಳವನ್ನು ವಿಶೇಷ ಚೇತನರು ಸುಗಮವಾಗಿ ಪ್ರವೇಶಿಸಲು ಅನುಕೂಲ ಕಲ್ಪಿಸಲು ಲಾಭರಹಿತ ಸಂಸ್ಥೆಯಾದ ʼಸ್ವಯಂʼ ಜೊತೆ ಪಾಲುದಾರಿಕೆ ಹೊಂದಲಾಗಿದೆ. ಸುಗಮ ಪ್ರವೇಶಿಸುವಿಕೆಯ ಸಹಭಾಗಿತ್ವವು ಪ್ರವೇಶಿಸುವಿಕೆಯ ಸಮಸ್ಯೆಗಳಿರುವ ಪ್ರತಿನಿಧಿಗಳಿಗೆ ಅನುಕೂಲವಾಗುವಂತೆ ಸಂವೇದನಾಶೀಲರಾಗಿರುವುದನ್ನು ಖಚಿತಪಡಿಸುತ್ತದೆ, ಇದರಿಂದಾಗಿ ಚಿತ್ರೋತ್ಸವಕ್ಕೆ ಭೇಟಿ ನೀಡುವ ಪ್ರತಿನಿಧಿಗಳ ಅನುಭವವನ್ನು ತಡೆರಹಿತವಾಗಿಸುತ್ತದೆ.

ಅದ್ದೂರಿ ಉದ್ಘಾಟನೆ / ಸಮಾರೋಪ ಸಮಾರಂಭ ಮತ್ತು ರೆಡ್ ಕಾರ್ಪೆಟ್‌ ಗಳು

15. ಅದ್ದೂರಿ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳು ಮುಂಬೈನ ನಾರಿಮನ್ ಪಾಯಿಂಟ್‌ ನಲ್ಲಿರುವ ಎನ್‌ ಸಿ ಪಿ ಎ ಯಲ್ಲಿ ನಡೆಯಲಿವೆ. ಈ ಸಮಾರಂಭಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಕಲಾತ್ಮಕ ಸಮ್ಮಿಲನವಾಗಿರುತ್ತವೆ. ಇದರಲ್ಲಿ ಭಾರತೀಯ ಅನಿಮೇಷನ್‌ ಪಯಣವನ್ನು ಬಿಂಬಿಸುವ ಪ್ರದರ್ಶನ, ಉದ್ಘಾಟನಾ ಸಮಾರಂಭದಲ್ಲಿ ಶ್ರೀಲಂಕಾದಿಂದ ಮತ್ತು ಸಮಾರೋಪ ಸಮಾರಂಭದಲ್ಲಿ ಅರ್ಜೆಂಟೀನಾದಿಂದ ಸಾಂಸ್ಕೃತಿಕ ಪ್ರದರ್ಶನ ಮತ್ತು ಈ ವರ್ಷ 77 ನೇ ಕಾನ್‌ ಚಲನಚಿತ್ರೋತ್ಸವದಲ್ಲಿ ಲಾ ಸಿನೆಫ್ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಎಫ್‌ ಟಿ ಐ ಐ ವಿದ್ಯಾರ್ಥಿ ಕಿರುಚಿತ್ರ “Sunflowers were the first ones to know” ಪ್ರದರ್ಶನ ಇರುತ್ತದೆ. 

16.     ಜೂನ್ 15 ರಂದು ಉದ್ಘಾಟನಾ ಚಿತ್ರದಿಂದ ಪ್ರತಿದಿನ ಮುಂಬೈನ ಎನ್‌ ಎಫ್‌ ಡಿ ಸಿ –ಎಫ್‌ ಡಿ ಸಂಕೀರ್ಣದಲ್ಲಿ ಗಾಲಾ ರೆಡ್ ಕಾರ್ಪೆಟ್ ಸ್ಕ್ರೀನಿಂಗ್ ನಡೆಯಲಿದೆ. ಪ್ರಖ್ಯಾತ ಚಲನಚಿತ್ರ ಸೆಲೆಬ್ರಿಟಿಗಳೊಂದಿಗೆ ಯೋಜಿಸಲಾದ ಇತರ ರೆಡ್ ಕಾರ್ಪೆಟ್‌ ಗಳೆಂದರೆ ಪೋಚರ್, ಇನ್‌ಸೈಡ್ ಔಟ್ -2, ದಿ ಕಮಾಂಡ್‌ಮೆಂಟ್ಸ್ ಶಾಡೋ, ಮೈ ಮರ್ಕ್ಯುರಿ, ಶ್ರೀಕಾಂತ್, ಬ್ರಾಂಡ್ ಬಾಲಿವುಡ್, ಇತ್ಯಾದಿ.

17.     ವಿಶೇಷವಾದ ರೆಡ್ ಕಾರ್ಪೆಟ್‌ ಗಳು ದೆಹಲಿ (ಜೂನ್ 17), ಚೆನ್ನೈ (ಜೂನ್ 18), ಕೋಲ್ಕತ್ತಾ (ಜೂನ್ 19) ಮತ್ತು ಪುಣೆ (ಜೂನ್ 20) ಯಲ್ಲಿ ಚಲನಚಿತ್ರೋದ್ಯಮದ ಗಣ್ಯ ವ್ಯಕ್ತಿಗಳ ಭಾಗವಹಿಸುವಿಕೆಯೊಂದಿಗೆ ನಡೆಯಲಿವೆ.

ಮಾಸ್ಟರ್‌ ಕ್ಲಾಸ್ ಮತ್ತು ಪ್ಯಾನಲ್ ಚರ್ಚೆಗಳು:

18.     ಉದ್ಯಮದ ದಿಗ್ಗಜರಾದ ಸಂತೋಷ್ ಶಿವನ್, ಆಡ್ರಿಯಸ್ ಸ್ಟೋನಿಸ್, ಕೇತನ್ ಮೆಹ್ತಾ, ರಿಚಿ ಮೆಹ್ತಾ, ಟಿ ಎಸ್ ನಾಗಾಭರಣ, ಜಾರ್ಜಸ್ ಶ್ವಿಜ್‌ಗೆಬೆಲ್ ಮತ್ತು ಇನ್ನೂ ಅನೇಕರೊಂದಿಗೆ ತೊಡಗಿಸಿಕೊಳ್ಳುವ 20 ಮಾಸ್ಟರ್‌ಕ್ಲಾಸ್‌ ಗಳು, ಸಂವಾದಗಳು ಮತ್ತು ಪ್ಯಾನಲ್ ಚರ್ಚೆಗಳನ್ನು 18ನೇ ಎಂ ಐ ಎಫ್‌ ಎಫ್ ಆಯೋಜಿಸುತ್ತದೆ.
19.     ಭಾರತೀಯ ಸಾಕ್ಷ್ಯಚಿತ್ರ ನಿರ್ಮಾಪಕರ ಸಂಘದ (ಐಡಿಪಿಎ) ಸಹಯೋಗದೊಂದಿಗೆ ಪ್ರತಿದಿನ ಚಲನಚಿತ್ರೋದ್ಯಮದ ಗಣ್ಯ ವ್ಯಕ್ತಿಗಳೊಂದಿಗೆ ರೋಮಾಂಚಕ ಆಂಫಿಥಿಯೇಟರ್ ಸ್ಥಳದಲ್ಲಿ ಮುಕ್ತ ವೇದಿಕೆ ಚರ್ಚೆಗಳನ್ನು ನಡೆಸಲಾಗುತ್ತದೆ.
20.     ನೋಂದಾಯಿತ ಭಾಗವಹಿಸುವವರಿಗೆ ಅನಿಮೇಷನ್ ಮತ್ತು VFX ಕುರಿತು ಕ್ರ್ಯಾಶ್ ಕೋರ್ಸ್ ಅನ್ನು ಆಯೋಜಿಸಲಾಗಿದೆ.

 

ಡಾಕ್ ಫಿಲ್ಮ್ ಬಜಾರ್:

21. ಡಾಕ್‌ ಫಿಲ್ಮ್ ಬಜಾರ್ ಅನ್ನು ಮೊದಲ ಬಾರಿಗೆ ಆಯೋಜಿಸಲಾಗಿದೆ, ಚಲನಚಿತ್ರ ನಿರ್ಮಾಪಕರಿಗೆ ತಮ್ಮ ಯೋಜನೆಗಳಿಗೆ ಖರೀದಿದಾರರು, ಪ್ರಾಯೋಜಕರು ಮತ್ತು ಸಹಯೋಗಿಗಳನ್ನು ಹುಡುಕಲು ವೇದಿಕೆಯನ್ನು ಒದಗಿಸುವ ಮೂಲಕ ಚಲನಚಿತ್ರ ನಿರ್ಮಾಣವನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ.

22.     10 ದೇಶಗಳಿಂದ 27 ಭಾಷೆಗಳ ಸುಮಾರು 200 ಯೋಜನೆಗಳನ್ನು ಸ್ವೀಕರಿಸಲಾಗಿದೆ.

23.  ಡಾಕ್ ಫಿಲ್ಮ್ ಬಜಾರ್‌ ನಲ್ಲಿ 3 ಕ್ಯುರೇಟೆಡ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು - 'ಸಹ-ನಿರ್ಮಾಣ ಮಾರುಕಟ್ಟೆ' (16 ಯೋಜನೆಗಳು), 'ವರ್ಕ್-ಇನ್-ಪ್ರೋಗ್ರೆಸ್‌ (WIP) ಲ್ಯಾಬ್' (6 ಯೋಜನೆಗಳು) ಮತ್ತು 'ವೀಕ್ಷಣಾ ಕೊಠಡಿ' (106 ಯೋಜನೆಗಳು).

24.  ಆಯ್ದ ಯೋಜನೆಗಳಿಗೆ ಈ ಅವಕಾಶಗಳ ಜೊತೆಗೆ, ಚಲನಚಿತ್ರ ನಿರ್ಮಾಪಕರು ಖರೀದಿದಾರರು ಮತ್ತು ಕಾರ್ಪೊರೇಟ್‌ ಗಳೊಂದಿಗೆ ನಿರ್ಮಾಣ, ಸಿಂಡಿಕೇಶನ್, ಸ್ವಾಧೀನ, ವಿತರಣೆ ಮತ್ತು ಮಾರಾಟ ಕ್ಷೇತ್ರದಲ್ಲಿ ಸಹಕರಿಸಲು ಸಹಾಯ ಮಾಡುವ 'ಓಪನ್ ಬೈಯರ್-ಸೆಲ್ಲರ್ ಮೀಟ್' ಸಹ ಇರುತ್ತದೆ.

25.  ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ಕಾರ್ಪೊರೇಟ್ ಬ್ರ್ಯಾಂಡಿಂಗ್ ನಡುವಿನ ಸಂಬಂಧವನ್ನು ಅನ್ವೇಷಿಸಲು ಮೀಸಲಾದ ಅಧಿವೇಶನ ಇರುತ್ತದೆ. FICCI ನಂತಹ ವಿವಿಧ ಉದ್ಯಮದ ಪ್ರಮುಖರೊಂದಿಗೆ, ಬ್ರ್ಯಾಂಡ್ ವರ್ಧನೆಗಾಗಿ ಮತ್ತು ಧನಾತ್ಮಕ ಸಾಮಾಜಿಕ ಪ್ರಭಾವಕ್ಕೆ ವೇಗವರ್ಧಕವಾಗಿ ಸಾಕ್ಷ್ಯಚಿತ್ರಗಳಿಗೆ ಸಿ ಎಸ್‌ ಆರ್ ನಿಧಿಯನ್ನು ಪರಿಶೋಧಿಸುತ್ತದೆ.

ಎಂ ಐ ಎಫ್‌ ಎಫ್‌ ಗಾಗಿ ಮೀಸಲಾದ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್

26.  ಚಲನಚಿತ್ರೋತ್ಸವದಲ್ಲಿ ಯೋಜಿಸಲಾದ ಚಲನಚಿತ್ರಗಳು, ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ವಿವರಗಳನ್ನು ಒದಗಿಸಲು http://www.miff.in ವೆಬ್‌ ಸೈಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

27. ಚಲನಚಿತ್ರ ಪ್ರದರ್ಶನಗಳ ಪೂರ್ವ ಬುಕಿಂಗ್, ಮಾಸ್ಟರ್‌ ಕ್ಲಾಸ್‌ ಗಳಿಗೆ ಹಾಜರಾಗುವುದು, ಮುಕ್ತ ವೇದಿಕೆಗಳು ಮುಂತಾದ ವಿವಿಧ ಚಟುವಟಿಕೆಗಳಲ್ಲಿ ಪ್ರತಿನಿಧಿಗಳು ಭಾಗವಹಿಸಲು ಅನುಕೂಲವಾಗುವಂತೆ ಮೀಸಲಾದ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಉತ್ಸವವನ್ನು ಕುರಿತು ಪ್ರತಿನಿಧಿಗಳಿಂದ ಅಮೂಲ್ಯವಾದ ಪ್ರತಿಕ್ರಿಯೆಯನ್ನು ಪಡೆಯಲು ಸಹಾಯ ಮಾಡುತ್ತದೆ.

ಪ್ರತಿನಿಧಿ ನೋಂದಣಿಗಳು

28.  ಪ್ರತಿನಿಧಿ ನೋಂದಣಿ ಸರಳವಾಗಿದೆ, ಆದರೆ ಕಡ್ಡಾಯವಾಗಿದೆ. ವೆಬ್‌ಸೈಟ್ ಅಥವಾ ಎಂ ಐ ಎಫ್‌ ಎಫ್ ನ ಪ್ರಚಾರ ಸಾಮಗ್ರಿಗಳಲ್ಲಿ ಒದಗಿಸಲಾದ QR ಕೋಡ್ ಮೂಲಕ ನೋಂದಣಿ ಮಾಡಬಹುದು.

29.     ಬುಕ್ ಮೈ ಶೋ ಮೂಲಕ ಪ್ರತಿನಿಧಿ ನೋಂದಣಿಯನ್ನು ಸಹ ಒದಗಿಸಲಾಗುತ್ತಿದೆ.

30.  ಯಾವುದೇ ಸಂಖ್ಯೆಯ ಚಲನಚಿತ್ರ ಪ್ರದರ್ಶನಗಳು ಅಥವಾ ಮಾಸ್ಟರ್‌ ಕ್ಲಾಸ್‌ ಗಳು ಅಥವಾ ಡಾಕ್ ಫಿಲ್ಮ್ ಬಜಾರ್‌ ಗೆ ಹಾಜರಾಗಲು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ.

31.     ಪ್ರತಿನಿಧಿ ನೋಂದಣಿ ಶುಲ್ಕ-

                 ಎ. ಮುಂಬೈ - ಇಡೀ ಉತ್ಸವದಲ್ಲಿ ಭಾಗವಹಿಸಲು 500 ರೂ
                 ಬಿ. ದೆಹಲಿ, ಚೆನ್ನೈ, ಕೋಲ್ಕತ್ತಾ ಮತ್ತು ಪುಣೆ - ಉಚಿತ
                 ಸಿ. ವಿದ್ಯಾರ್ಥಿ ಮತ್ತು ಮಾಧ್ಯಮ - ಉಚಿತ
                 ಡಿ. ಎಲ್ಲಾ ಪ್ರತಿನಿಧಿ ನೋಂದಣಿಗಳು ಮುಂದಿನ ಮೂರು ದಿನಗಳವರೆಗೆ 'ಉಚಿತ'

ಪಾಲುದಾರಿಕೆಗಳು

32.  ಈ ವರ್ಷ ಮೊದಲ ಬಾರಿಗೆ, ಎಂ ಐ ಎಫ್‌ ಎಫ್ 20 ಕ್ಕೂ ಹೆಚ್ಚು ಬ್ರಾಂಡ್‌ ಗಳಿಂದ ಕಾರ್ಪೊರೇಟ್ ಸಹಯೋಗಗಳನ್ನು ಪಡೆದುಕೊಂಡಿದೆ. ಬ್ರಾಂಡ್‌ ಗಳು - ಉತ್ಸವದ ವಿವಿಧ ಅಂಶಗಳನ್ನು ಪ್ರಾಯೋಜಿಸುವುದರಿಂದ ಹಿಡಿದು ಉತ್ಸವವನ್ನು ಬಲಪಡಿಸಲು ಪರಿಣತಿಯನ್ನು ತರುವವರೆಗೆ- ವಿವಿಧ ಹಂತಗಳಲ್ಲಿ ಉತ್ಸವದೊಂದಿಗೆ ಸಹಕರಿಸಿವೆ.

ಹಿನ್ನೆಲೆ

ಎಂ ಐ ಎಫ್‌ ಎಫ್ ದಕ್ಷಿಣ ಏಷ್ಯಾದಲ್ಲಿ ನಾನ್-ಫೀಚರ್ ಫಿಲ್ಮ್‌ಗಳಿಗಾಗಿ (ಡಾಕ್ಯುಮೆಂಟರಿ, ಶಾರ್ಟ್ ಫಿಕ್ಷನ್ ಮತ್ತು ಅನಿಮೇಷನ್) ಅತ್ಯಂತ ಹಳೆಯ ಮತ್ತು ದೊಡ್ಡ ಚಲನಚಿತ್ರೋತ್ಸವವಾಗಿದೆ ಮತ್ತು ಇದು 1990 ರಲ್ಲಿ ಪ್ರಾರಂಭವಾದಾಗಿನಿಂದ ಸಾಕ್ಷ್ಯಚಿತ್ರ ಪ್ರಪಂಚದ ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಇದು ದ್ವೈವಾರ್ಷಿಕವಾಗಿ ಆಯೋಜಿಸುವ ಕಾರ್ಯಕ್ರಮವಾಗಿದೆ. 

ಎಂ ಐ ಎಫ್‌ ಎಫ್ ಪ್ರಪಂಚದಾದ್ಯಂತದ ಸಾಕ್ಷ್ಯಚಿತ್ರ ನಿರ್ಮಾಪಕರನ್ನು ಭೇಟಿ ಮಾಡಲು, ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು, ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್ ಚಲನಚಿತ್ರಗಳ ಸಹ-ನಿರ್ಮಾಣ ಮತ್ತು ಮಾರುಕಟ್ಟೆಯ ಸಾಧ್ಯತೆಗಳನ್ನು ಅನ್ವೇಷಿಸಲು ಮತ್ತು ಚಲನಚಿತ್ರ ನಿರ್ಮಾಪಕರ ವಿಶ್ವ ಸಿನಿಮಾದ ದೃಷ್ಟಿಕೋನವನ್ನು ವಿಸ್ತರಿಸಲು ವೇದಿಕೆಯನ್ನು ಒದಗಿಸುತ್ತದೆ. ಸಾಕ್ಷ್ಯಚಿತ್ರ, ಅನಿಮೇಷನ್ ಮತ್ತು ಕಿರುಚಿತ್ರಗಳನ್ನು ಕುರಿತು ಹೆಚ್ಚಿನ ಸಂವಾದಗಳು ಮತ್ತು ಚರ್ಚೆಗಳಿಗೆ ಉತ್ಸವವು ವೇದಿಕೆಯನ್ನು ಒದಗಿಸುತ್ತದೆ; ಕಲಾತ್ಮಕ ಅಭಿವ್ಯಕ್ತಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ ಮತ್ತು ಚಲನಚಿತ್ರ ನಿರ್ಮಾತೃಗಳು ಮತ್ತು ಪಾಲ್ಗೊಳ್ಳುವವರಿಗೆ ಸೃಜನಾತ್ಮಕ ವೇಗವರ್ಧಕವೆಂದು ಸಾಬೀತುಪಡಿಸುತ್ತದೆ.

 

*****

 



(Release ID: 2023546) Visitor Counter : 31