ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ, ಕೇಂದ್ರ ಆರೋಗ್ಯ ಸಚಿವಾಲಯವು ಹೀಟ್‌ವೇವ್ (ಬಿಸಿ ಹವೆ) ಅನ್ನು ಎದುರಿಸಾಲು ಮಾಡಿಕೊಂಡಿರುವ ಸಿದ್ಧತೆ ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಆಸ್ಪತ್ರೆಗಳಲ್ಲಿ ಬೆಂಕಿ ಅವಘಡಗಳನ್ನು ತಡೆಗಟ್ಟುವ ಕ್ರಮಗಳ ಕುರಿತು ರಾಜ್ಯಗಳೊಂದಿಗೆ ಪರಿಶೀಲನಾ ಸಭೆ ನಡೆಸಿತು
ಹೀಟ್ ಸ್ಟ್ರೋಕ್ ಚಿಕಿತ್ಸೆಗೆ ಪ್ರತ್ಯೇಕ ಕೊಠಡಿಗಳು, ORS ಕೇಂದ್ರಗಳನ್ನು ತೆರೆಯುವಂತೆ ಮತ್ತು IHIP ಮೂಲಕ ಕಣ್ಗಾವಲನ್ನು ಬಲಪಡಿಸುವ ಕುರಿತು ಪರಿಶೀಲಿಸುವಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಲಾಯಿತು.
ಎಲ್ಲಾ ಆಸ್ಪತ್ರೆಗಳಲ್ಲಿ ಅಗ್ನಿ ಮತ್ತು ವಿದ್ಯುತ್ ಸುರಕ್ಷತಾ ಕ್ರಮಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಯಿತು.
Posted On:
06 JUN 2024 11:19AM by PIB Bengaluru
ಕೇಂದ್ರ ಆರೋಗ್ಯ ಸಚಿವಾಲಯದ DGHS ಡಾ ಅತುಲ್ ಗೋಯೆಲ್ ಅವರು ದೇಶಾದ್ಯಂತ ಆರೋಗ್ಯ ಕೇಂದ್ರಗಳಲ್ಲಿ ಹೀಟ್ ವೇವ್ ನಿಂದ ಬಾಧಿತರಾಗುವ ಜನರ ಚಿಕಿತ್ಸೆ ಮತ್ತು ಅಗ್ನಿ ಮತ್ತು ವಿದ್ಯುತ್ ಸುರಕ್ಷತಾ ಕ್ರಮಗಳ ಕುರಿತು ಮಾಡಿಕೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಲು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ವರ್ಚುವಲ್ ಸಭೆಯನ್ನು ನಡೆಸಿದರು.
ಭಾರತೀಯ ಹವಾಮಾನ ಇಲಾಖೆ ಮೇ 27, 2024 ರಂದು ನೀಡಿದ ದೀರ್ಘ-ಶ್ರೇಣಿಯ ಮುನ್ಸೂಚನೆ ಪ್ರಕಾರ, ಜೂನ್ ತಿಂಗಳಿನಲ್ಲಿ ದಕ್ಷಿಣ ಪೆನಿನ್ಸುಲಾರ್ ಕೆಲವು ಭಾಗಗಳನ್ನು ಹೊರತುಪಡಿಸಿ, ದೇಶಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವು ದಾಖಲಾಗಲಿದೆ. ಜೂನ್‌ನಲ್ಲಿ ವಾಯುವ್ಯ ಭಾರತದ ಬಹುತೇಕ ಪ್ರದೇಶಗಳಲ್ಲಿ ಮತ್ತು ಪಕ್ಕದ ಮಧ್ಯ ಭಾರತದ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಇರಲಿದೆ.
ರಾಜ್ಯದ ಆರೋಗ್ಯ ಇಲಾಖೆಗಳಿಗೆ ಈ ಕೆಳಗಿನ ನಿರ್ದೇಶನಗಳನ್ನು ಕಳುಹಿಸಲಾಗಿದೆ:
ರಾಜ್ಯ ಆರೋಗ್ಯ ಇಲಾಖೆಗಳಿಗೆ ಸಲಹೆ, ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಕುರಿತು ಮಾರ್ಗಸೂಚಿಗಳು ಮತ್ತು ಶಾಖ-ಸಂಬಂಧಿತ ಖಾಯಿಲೆಗಳ (HRI) ಕುರಿತು ಸಿದ್ಧತೆ.
ವಹಿಸಬೇಕಾದ ಎಚ್ಚರಿಕೆಗಳ ಕುರಿತು ಸಾರ್ವಜನಿಕರಿಗೆ ಸಲಹೆ ಮತ್ತು IEC ಪೋಸ್ಟರ್ ಟೆಂಪ್ಲೇಟ್‌ಗಳು
ತೀವ್ರ ಶಾಖ-ಸಂಬಂಧಿತ ಕಾಯಿಲೆಗಳಿಗೆ ತುರ್ತು ಕೂಲಿಂಗ್‌ನ ಕುರಿತು ಮಾರ್ಗಸೂಚಿಗಳು.
ಶಾಖ ಸಂಬಂಧಿತ ಸಾವುಗಳಲ್ಲಿ ಶವಪರೀಕ್ಷೆಯ ಸಂಶೋಧನೆಗಳ ಕುರಿತ ಮಾರ್ಗಸೂಚಿಗಳನ್ನು ದೇಶಾದ್ಯಂತ ಎಲ್ಲಾ AIIMS ಮತ್ತು ವೈದ್ಯಕೀಯ ಕಾಲೇಜುಗಳಿಗೆ ಕಳುಹಿಸಲಾಗಿದೆ.
ಕಾರ್ಯದರ್ಶಿ (ಆರೋಗ್ಯ), MoHFW ಮತ್ತು NDMA ಅವರಿಂದ ಜಂಟಿ ಸಂವಹನ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದಿಂದ ಸಂವಹನ.
ಹೆಚ್ಚಿನ ತಾಪಮಾನದಿಂದಾಗಿ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಆಸ್ಪತ್ರೆಗಳು ಮತ್ತು ಆಂಬ್ಯುಲೆನ್ಸ್ ಸಿದ್ಧತೆಯ ಮೌಲ್ಯಮಾಪನಕ್ಕಾಗಿ ಪರಿಶೀಲನಾಪಟ್ಟಿ.
ಮಾರ್ಚ್ 23, 2024 ರಂದು ಕಳುಹಿಸಲಾದ ಪತ್ರದ ಮೂಲಕ, ತೀವ್ರತರವಾದ ಶಾಖದಿಂದ ಉಂಟಾಗುವ ವಿನಾಶಕಾರಿ ಘಟನೆಗಳನ್ನು ತಡೆಗಟ್ಟಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿನಂತಿಸಲಾಗಿದೆ. ಇದರ ನಂತರ ಮೇ 29, 2024 ರಂದು ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಮತ್ತೊಂದು ಪತ್ರವನ್ನು ಬರೆಯಲಾಗಿದೆ.
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳಬೇಕಾದ ಕೆಳಗಿನ ವಿವರವಾದ ಕ್ರಮಗಳ ಕುರಿತು ಸಭೆಯಲ್ಲಿ ಪುನರುಚ್ಚರಿಸಲಾಯಿತು:
• ತಾಪಮಾನದಿಂದಾಗುವ ಆರೋಗ್ಯ ಸಮಸ್ಯೆಗಳ ನಿಯಂತ್ರಣಕ್ಕೆ ಕ್ರಿಯಾ ಯೋಜನೆಯ ಅನುಷ್ಠಾನ
• ಭಾರತೀಯ ಹವಾಮಾನ ಇಲಾಖೆ (IMD) ಹೊರಡಿಸಿದ ಶಾಖದ ಅಲೆಗಳ ಮುಂಚಿನ ಎಚ್ಚರಿಕೆಯ ಪ್ರಸಾರ
• ಶಾಖ-ಸಂಬಂಧಿತ ಖಾಯಿಲೆಗಳ (HRI) ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ಎಲ್ಲಾ ಆರೋಗ್ಯ ರಕ್ಷಣಾ ಸೌಲಭ್ಯಗಳು ಮತ್ತು ಆಂಬ್ಯುಲೆನ್ಸ್ ಸನ್ನದ್ಧತೆಯ ಮೌಲ್ಯಮಾಪನ
• IHIP ನಲ್ಲಿ ಶಾಖ-ಸಂಬಂಧಿತ ಅನಾರೋಗ್ಯ ಮತ್ತು ಸಾವುಗಳ ಕಣ್ಗಾವಲನ್ನು ಬಲಪಡಿಸುವುದು
• ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಪ್ರತ್ಯೇಕ ಹೀಟ್ ಸ್ಟ್ರೋಕ್ ಕೊಠಡಿ
• ಆರೋಗ್ಯ ಸಲಹೆಗಳನ್ನು ನೀಡಿ ಮತ್ತು IEC ಚಟುವಟಿಕೆಗಳನ್ನು ಯೋಜಿಸಿ
• ಶಾಖ-ಸಂಬಂಧಿತ ಖಾಯಿಲೆಗಳ ಲಕ್ಷಣಗಳು, ಕೇಸ್ ಐಡೆಂಟಿಫಿಕೇಶನ್, ಕ್ಲಿನಿಕಲ್ ಮ್ಯಾನೇಜ್‌ಮೆಂಟ್, ಎಮರ್ಜೆನ್ಸಿ ಕೂಲಿಂಗ್ ಕುರಿತು ಆರೋಗ್ಯ ಸೌಲಭ್ಯಗಳ ವೈದ್ಯಕೀಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸೇಸ್ನಿಟೈಸ್ ಗೊಳಿಸುವುದು ಮತ್ತು ಅವರ ಸಾಮರ್ಥ್ಯ ವೃದ್ಧಿ.
• ತೀವ್ರ ಶಾಖದ ಪರಿಸ್ಥಿತಿಯನ್ನು ಎದುರಿಸಲು ಆರೋಗ್ಯ ಸೌಲಭ್ಯಗಳನ್ನು ಸಜ್ಜುಗೊಳಿಸುವುದು.
• ಶಾಖ-ಸಂಬಂಧಿತ ಖಾಯಿಲೆ-ಕೇಂದ್ರಿತ ಸಾಮೂಹಿಕ ಕೂಟ/ಕ್ರೀಡಾ ಕಾರ್ಯಕ್ರಮಗಳನ್ನೂ ಆಯೋಜಿಸುವುದು.
• ಬೆಂಕಿ ಅವಘಡ ಸಂಭವಿಸಬಹುದಾದ ಪ್ರದೇಶಗಳನ್ನು ಗುರುತಿಸಲು ನಿಯಮಿತವಾಗಿ ಬೆಂಕಿಯ ಅಪಾಯದ ಮೌಲ್ಯಮಾಪನ ಡ್ರಿಲ್ ಗಳನ್ನು ನಡೆಸುವುದು
• ಸುಡುವ ವಸ್ತುಗಳ ಸುರಕ್ಷಿತ ಸಂಗ್ರಹಣೆ ಮತ್ತು ವಿದ್ಯುತ್ ಸರ್ಕ್ಯೂಟ್‌ಗಳು ಮತ್ತು ವ್ಯವಸ್ಥೆಗಳ ನಿಯಮಿತ ಪರೀಕ್ಷಣೆಯಂತಹ ಬೆಂಕಿಯ ತಡೆಗಟ್ಟುವ ಕ್ರಮಗಳನ್ನು ಅಳವಡಿಸುವುದು.
• ಅಗ್ನಿ ಸುರಕ್ಷತಾ ಪ್ರೋಟೋಕಾಲ್‌ಗಳು, ಬಾಧಿತ ಜನರನ್ನು ಸ್ಥಳಾಂತರಿಸುವ ಕಾರ್ಯವಿಧಾನಗಳು ಮತ್ತು ಅಗ್ನಿಶಾಮಕ ಉಪಕರಣಗಳ ಬಳಕೆಯ ಕುರಿತು ಸಿಬ್ಬಂದಿಗೆ ತರಬೇತಿ ನೀಡುವುದು.
• ಸ್ಮೋಕ್ ಅಲಾರಾಂ ಗಳು, ಅಗ್ನಿಶಾಮಕಗಳು ಮತ್ತು ಸ್ಪ್ರಿಂಕ್ಲರ್‌ಗಳು ಸೇರಿದಂತೆ ಬೆಂಕಿ ಪತ್ತೆ ಮಾಡುವ ಮತ್ತು ನಿಗ್ರಹಿಸುವ ವ್ಯವಸ್ಥೆಗಳ ಸ್ಥಾಪನೆ ಮತ್ತು ಅತ್ಯುತ್ತಮ ನಿರ್ವಹಣೆ.
• ಬೆಂಕಿಯ ಅವಘಡದಂತಹ ಘಟನೆಗಳಲ್ಲಿ ಸಿಬ್ಬಂದಿ ಮತ್ತು ಸಂದರ್ಶಕರನ್ನು ಸ್ಥಳಾಂತರಿಸಲು SOP ಗಳೊಂದಿಗೆ ತುರ್ತು ಪ್ರತಿಕ್ರಿಯೆ ಯೋಜನೆಯನ್ನು ಸ್ಥಾಪಿಸುವುದು.
• ಬಹು ಮುಖ್ಯವಾಗಿ, ಯಾವುದೇ ರಾಜಿ ಇಲ್ಲದಂತೆ ತುರ್ತು ಅಭ್ಯಾಸಗಳ ನಿಯಮಿತ ವಹನ.
ರಾಜ್ಯ ಮಟ್ಟದ ಸಿದ್ಧತೆ:
ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಉನ್ನತ ಮಟ್ಟದ ಅಧಿಕಾರಿಗಳು ಪರಿಸ್ಥಿತಿಯನ್ನು ಕಟ್ಟುನಿಟ್ಟಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಲಾಯಿತು. ಮಧ್ಯಪ್ರದೇಶದಂತಹ ರಾಜ್ಯಗಳು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಗ್ನಿ-ಸುರಕ್ಷತಾ ಅಪಘಾತಗಳ ಬಗ್ಗೆ ಅಣಕು-ಡ್ರಿಲ್ ಗಳನ್ನು ಕೈಗೊಂಡಿವೆ. ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ಅಣಕು ಡ್ರಿಲ್‌ಗಳನ್ನು ನಡೆಸಲು ನಗರ ಆಡಳಿತ ಮತ್ತು ಎಂಜಿನಿಯರಿಂಗ್ ವಿಭಾಗಗಳಿಗೆ ಜವಾಬ್ದಾರಿ ವಹಿಸಲಾಗಿತ್ತು. ಕೋಡ್ ರೆಡ್ ಪ್ರೋಟೋಕಾಲ್ ಅನ್ನು ಸಹ ನೀಡಲಾಯಿತು. ಒಡಿಶಾದಲ್ಲಿ ರಾಜ್ಯದಾದ್ಯಂತ ಹೀಟ್ ವೇವ್ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತು ಅರಿವು ಮೂಡಿಸಲು ದಸ್ತಕ್ (ಮನೆ-ಮನೆ) ಅಭಿಯಾನವನ್ನು ನಡೆಸಲಾಗುತ್ತಿದೆ. ಈ ರಾಜ್ಯದ ಬಹುತೇಕ ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಅಗ್ನಿಶಾಮಕ ಸುರಕ್ಷತಾ ಅಧಿಕಾರಿಗಳನ್ನು ಗುರುತಿಸಲಾಗಿದೆ. ಹರಿಯಾಣವು ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು ಮತ್ತು ಲಾಜಿಸ್ಟಿಕ್ಸ್ ಅನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಹಣಕಾಸಿನ ಹಂಚಿಕೆಯನ್ನು ಮಾಡಿದೆ. ರಾಜಸ್ಥಾನದಲ್ಲಿ, 104 ಮತ್ತು 108 ಗೆ ಲಿಂಕ್ ಮಾಡಲಾದ ಆಂಬ್ಯುಲೆನ್ಸ್‌ಗಳಲ್ಲಿ ಕೂಲಿಂಗ್ ಉಪಕರಣಗಳನ್ನು ಅಳವಡಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ, ಅಗ್ನಿಶಾಮಕ ಇಲಾಖೆಗಳಿಂದ ಎಲ್ಲ ಕಟ್ಟಡಗಳು ಅಗ್ನಿಶಾಮಕ ಸುರಕ್ಷತಾ ಪ್ರಮಾಣಪತ್ರಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲಾಗಿದ್ದು ಅಣಕು ಡ್ರಿಲ್ ಗಳನ್ನೂ ನಡೆಸಲಾಗುತ್ತಿದೆ. ಬಿಹಾರದಲ್ಲಿ, ಆರೋಗ್ಯ ರಕ್ಷಣಾ ಸೌಲಭ್ಯಗಳಲ್ಲಿ ಅಗ್ನಿ ಅವಘಡಗಳನ್ನು ತಡೆಗಟ್ಟಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಸಮನ್ವಯ ಸಾಧಿಸಲಾಗಿದೆ. ದೆಹಲಿ ಸರಕಾರವು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಅಗ್ನಿಶಾಮಕ ವ್ಯವಸ್ಥೆಗಾಗಿ ನಿರ್ದೇಶನಗಳನ್ನು ಮತ್ತು SOP ಅನ್ನು ನೀಡಿದೆ.
ಸಣ್ಣ ಸಣ್ಣ ಕಚೇರಿಗಳು ಮತ್ತ್ತು ಇತರೆ ಕಟ್ಟಡಗಳಲ್ಲಿಯೂ ಸಹ ಅಗ್ನಿಶಾಮಕ ಎನ್ಒಸಿ ಲಭ್ಯವಿಲ್ಲದಿದ್ದರೆ, ಅವಘಡ ಸಂಭವಿಸಿದ ಸಂದರ್ಭದಲ್ಲಿ ಜನರನ್ನು ತೆರವುಗೊಳಿಸುವ ಕುರಿತ ಯೋಜನೆಗಳು ಮತ್ತು ಬೆಂಕಿ ನಂದಿಸಲು ಬೇಕಾದ ವ್ಯವಸ್ಥೆಯನ್ನು ಸಿದ್ಧವಾಗಿರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
*****
(Release ID: 2023427)
Visitor Counter : 73
Read this release in:
Odia
,
English
,
Urdu
,
Hindi
,
Hindi_MP
,
Marathi
,
Bengali
,
Manipuri
,
Punjabi
,
Gujarati
,
Tamil