ಹಣಕಾಸು ಸಚಿವಾಲಯ
ಕರಡು ‘ಕೇಂದ್ರ ಅಬಕಾರಿ ಮಸೂದೆ, 2024’ ರ ಕುರಿತು ಪೂರ್ವ-ನಿರ್ಧರಿತ ಮಾದರಿಯಲ್ಲಿ ಸಲಹೆಗಳನ್ನು ಜೂನ್ 26 , 2024ರೊಳಗೆ ನೀಡುವಂತೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸುಂಕಗಳ ಕೇಂದ್ರ ಮಂಡಳಿಯು (ಸಿಬಿಐಸಿ) ಮಧ್ಯಸ್ಥಗಾರರನ್ನು ಕೋರಿದೆ
Posted On:
04 JUN 2024 2:36PM by PIB Bengaluru
ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯಡಿ ಬರುವ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸುಂಕಗಳ ಕೇಂದ್ರ ಮಂಡಳಿಯು (ಸಿಬಿಐಸಿ) ಮಧ್ಯಸ್ಥಗಾರರಿಂದ ಕರಡು ‘ಕೇಂದ್ರ ಅಬಕಾರಿ ಮಸೂದೆ, 2024’ ಕುರಿತು ಸಲಹೆಗಳನ್ನು ಆಹ್ವಾನಿಸಿದೆ. ಸಲಹೆ ಕಳುಹಿಸಿಕೊಡಲು 26ನೇ ಜೂನ್ 2024 ರಂದು ಕೊನೆಯ ದಿನಾಂಕವಾಗಿದೆ.
ಸಿಬಿಐಸಿ ಈಗಾಗಲೇ ಒಂದು ಕರಡು ' ಕೇಂದ್ರ ಅಬಕಾರಿ ಮಸೂದೆ, 2024' ಅನ್ನು ಸಿದ್ಧಪಡಿಸಿದೆ. ಇದು ಜಾರಿಗೆ ಬಂದ ನಂತರ, ಪ್ರಸ್ತುತ ಇರುವ ಮಸೂದೆಯು ಕೇಂದ್ರೀಯ ಅಬಕಾರಿ ಮಸೂದೆ, 1944 ಅನ್ನು ಬದಲಿಸುತ್ತದೆ. ಈ ಮಸೂದೆಯು ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಹಳೆಯ ಮತ್ತು ಅನಗತ್ಯ ನಿಬಂಧನೆಗಳನ್ನು ರದ್ದುಗೊಳಿಸುವುದಕ್ಕೆ ಒತ್ತು ನೀಡುವ ಮೂಲಕ ಸಮಗ್ರವಾಗಿ ಆಧುನಿಕ ಕೇಂದ್ರ ಅಬಕಾರಿ ಕಾನೂನನ್ನು ಜಾರಿಗೊಳಿಸುವ ಗುರಿಯನ್ನು ಹೊಂದಿದೆ. ಮಸೂದೆಯು ಹನ್ನೆರಡು ಅಧ್ಯಾಯಗಳು, 114 (ನೂರಾ ಹದಿನಾಲ್ಕು) ವಿಭಾಗಗಳು ಮತ್ತು ಎರಡು ಅನುಬಂಧಗಳನ್ನು ಒಳಗೊಂಡಿದೆ.
ಶಾಸಕಾಂಗ ಪೂರ್ವ ಸಲಹಾ ಪ್ರಕ್ರಿಯೆಯ ಭಾಗವಾಗಿ, ಕ್ಷೇತ್ರದ ಮಧ್ಯಸ್ಥಗಾರರಿಂದ ಸಲಹೆಗಳನ್ನು 21 ದಿನಗಳಲ್ಲಿ ಆಹ್ವಾನಿಸಲು ' ಕೇಂದ್ರ ಅಬಕಾರಿ ಮಸೂದೆ, 2024' ರ ಕರುಡು ಪ್ರತಿಯನ್ನು ಸಿಬಿಐಸಿ [ https://www.cbic.gov.in] ವೆಬ್‌ಸೈಟ್‌ನಲ್ಲಿ ಈಗಾಗಲೇ ಅಪ್‌ಲೋಡ್ ಮಾಡಲಾಗಿದೆ:
ಸಲಹೆಗಳು/ ಅಭಿಪ್ರಾಯಗಳು/ ವೀಕ್ಷಣೆಗಳನ್ನು ಕಳುಹಿಸಲು ಮಾದರಿ ಈ ಕಳಗಿನಂತಿದೆ
ಕ್ರ.ಸಂ |
ಕರುಡು ಮಸೂದೆಯ ವಿಭಾಗದ ಸಂಖ್ಯೆ |
ವಿಭಾಗದ ಹೆಸರು |
ಯಾವುದೇ ಸಲಹೆಗಳಿದ್ದರೆ, ಪ್ರಸ್ತಾವಿತ ಮಾರ್ಪಾಡಿನ ವಿವರಗಳು |
ಸಲಹೆಗಳು/ ಅಭಿಪ್ರಾಯಗಳು/ ವೀಕ್ಷಣೆಗಳು |
ಮೇಲಿನ ಮಾದರಿಯಲ್ಲಿ ಕರುಡು ಮಸೂದೆಯ ಕುರಿತು ಸಲಹೆಗಳು/ಅಭಿಪ್ರಾಯಗಳನ್ನು ಇಮೇಲ್ ಮೂಲಕ cx.stwing[at]gov[dot]in ಗೆ ಎಂ ಎಸ್ ವರ್ಡ್ (ಅಥವಾ ಹೊಂದಿಕೆಯಾಗುವ ಕಡತ ಸ್ವರೂಪದಲ್ಲಿ) ಅಥವಾ ಯಂತ್ರ-ಓದಬಲ್ಲ ಪಿಡಿಎಫ್ ಮಾದರಿಯಲ್ಲಿ ಕಳುಹಿಸಿಕೊಡಬಹುದು.
*****
(Release ID: 2022745)
Visitor Counter : 114
Read this release in:
Bengali
,
English
,
Urdu
,
Hindi
,
Hindi_MP
,
Marathi
,
Assamese
,
Punjabi
,
Gujarati
,
Tamil
,
Telugu
,
Malayalam