ಚುನಾವಣಾ ಆಯೋಗ
ಲೋಕಸಭಾ ಚುನಾವಣೆಯ 5ನೇ ಹಂತದಲ್ಲಿ 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 49 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಕಳೆದ 35 ವರ್ಷಗಳಲ್ಲಿ ಅತಿ ಹೆಚ್ಚು ಮತದಾನವಾಗಿದೆ
5ನೇ ಹಂತ-ಸಂಜೆ 7:45 ಕ್ಕೆ 57.47 ರಷ್ಟುಮತದಾನ
2024ರ ಸಾರ್ವತ್ರಿಕ ಚುನಾವಣೆಯಲ್ಲಿ 25 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 428 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದೆ; ಅಲ್ಲದೆ, ಒಡಿಶಾದ 63 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಮುಕ್ತಾಯವಾಗಿದೆ
ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಮತದಾರರಿಂದ ಉತ್ಸಾಹಭರಿತ ಪ್ರತಿಕ್ರಿಯೆ ದೊರೆತಿದೆ
Posted On:
20 MAY 2024 9:00PM by PIB Bengaluru
ಸಾರ್ವತ್ರಿಕ ಚುನಾವಣೆ 2024 ರ ಐದನೇ ಹಂತದ ಮತದಾನವು 49 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಏಕಕಾಲದಲ್ಲಿ ಪ್ರಾರಂಭವಾಯಿತು, ಸಂಜೆ 7:45 ರ ಹೊತ್ತಿಗೆ ಅಂದಾಜು ಶೇ.57.47 ರಷ್ಟು ಮತದಾನವಾಗಿದೆ. ಇಂದು ಮತದಾನ ನಡೆದ ರಾಜ್ಯಗಳ ಹಲವೆಡೆ ಬಿಸಿಲಿನ ತಾಪದ ನಡುವೆಯೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಂಜೆ 6 ಗಂಟೆಗೆ ಮತದಾನವನ್ನು ಮುಕ್ತಾಯಗೊಳಿಸಲಾಯಿತು, ಆದರೆ ಹೆಚ್ಚಿನ ಸಂಖ್ಯೆಯ ಮತದಾರರು ಇನ್ನೂ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸಂಜೆ 7.45 ಕ್ಕೆ ಶೇ.54.49 ರಷ್ಟು ಮತದಾನವಾಗಿದ್ದು, ಇದು 35 ವರ್ಷಗಳಲ್ಲೇ ಅತಿ ಹೆಚ್ಚು ಮತದಾನವಾಗಿದೆ. ಮತದಾನ ಸಂಪೂರ್ಣ ಶಾಂತಿಯುತವಾಗಿತ್ತು. ಬಿಹಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಈ ಹಂತದಲ್ಲಿ ಚುನಾವಣೆ ನಡೆದ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಾಗಿವೆ. ಒಟ್ಟು 695 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸರತಿ ಸಾಲಿನಲ್ಲಿ ತಾಳ್ಮೆಯಿಂದ ಕಾಯುತ್ತಿರುವ ಮತದಾರರು
ಎಲ್ಲಾ ಕ್ಷೇತ್ರಗಳಲ್ಲಿ ಮತದಾನ ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆದಿದೆ. ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ನೇತೃತ್ವದ ಆಯೋಗವು ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖಬೀರ್ ಸಿಂಗ್ ಸಂಧು ಅವರೊಂದಿಗೆ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಅಂಶಗಳ ಮೇಲೆ ನಿಕಟ ನಿಗಾ ಇರಿಸಿತು ಮತ್ತು ಅಗತ್ಯ ನಿರ್ದೇಶನಗಳನ್ನು ನೀಡಿತು. ಕಟ್ಟುನಿಟ್ಟಿನ ಭದ್ರತಾ ಕ್ರಮಗಳು ಮತದಾರರಿಗೆ ಭಯ ಅಥವಾ ಬೆದರಿಕೆ ಇಲ್ಲದೆ ಮತ ಚಲಾಯಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದವು. ಕೆಲವು ಸ್ಥಳಗಳಲ್ಲಿ ಬಿಸಿಲಿ ತಾಪಮಾನವನ್ನು ಹೊರತುಪಡಿಸಿ ಹವಾಮಾನವು ಬಹುತೇಕ ಸಾಮಾನ್ಯವಾಗಿತ್ತು.
5ನೇ ಹಂತದಲ್ಲಿ ಮಹಿಳಾ ಮತದಾರರು ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು
ಇನ್ನೂ ತಾತ್ಕಾಲಿಕವಾಗಿರುವ ನವೀಕರಿಸಿದ ಮತದಾನದ ಅಂಕಿಅಂಶಗಳು ಚುನಾವಣಾ ಆಯೋಗದ ಮತದಾನದ ಪ್ರಮಾಣ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ. ಇದು ರಾಜ್ಯ/ಲೋಕಸಭಾ ಕ್ಷೇತ್ರ/ವಿಧಾನಸಭಾ ಕ್ಷೇತ್ರವಾರು ಅಂಕಿಅಂಶಗಳಿಗೆ ಹೆಚ್ಚುವರಿಯಾಗಿ ಒಟ್ಟು ಹಂತವಾರು ಅಂಕಿಅಂಶಗಳನ್ನು ನೀಡುತ್ತದೆ. ಆಯೋಗವು ಭಾಗೀದಾರರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ, 23.45 ಗಂಟೆಗೆ ಮತದಾನದ ಅಂಕಿಅಂಶಗಳೊಂದಿಗೆ ಮತ್ತೊಂದು ಪತ್ರಿಕಾ ಟಿಪ್ಪಣಿಯನ್ನು ಬಿಡುಗಡೆ ಮಾಡುತ್ತದೆ.
5ನೇ ಹಂತದಲ್ಲಿ ರಾಜ್ಯವಾರು ಅಂದಾಜು ಮತದಾನದ ಪ್ರಮಾಣ (7:45 ರಾತ್ರಿ)
ಕ್ರ.ಸಂ
|
ರಾಜ್ಯ/ಕೇಂದ್ರಾಡಳಿತ ಪ್ರದೇಶ
|
ಲೋಕಸಭಾ ಕ್ಷೇತ್ರಗಳ ಸಂಖ್ಯೆ
|
ಅಂದಾಜು ಶೇಕಡಾವಾರು ಮತದಾನ
|
1
|
ಬಿಹಾರ
|
05
|
52.60
|
2
|
ಜಮ್ಮು ಮತ್ತು ಕಾಶ್ಮೀರ
|
01
|
54.49
|
3
|
ಜಾರ್ಖಂಡ್
|
03
|
63.00
|
4
|
ಲಡಾಖ್
|
01
|
67.15
|
5
|
ಮಹಾರಾಷ್ಟ್ರ
|
13
|
48.88
|
6
|
ಒಡಿಶಾ
|
05
|
60.72
|
7
|
ಉತ್ತರ ಪ್ರದೇಶ
|
14
|
57.79
|
8
|
ಪಶ್ಚಿಮ ಬಂಗಾಳ
|
07
|
73.00
|
|
8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 49 ಲೋಕಸಭಾ ಕ್ಷೇತ್ರಗಳು
|
49
|
57.47
|
ನಿಗದಿತ ವಿಧಾನದ ಪ್ರಕಾರ, ಚುನಾವಣಾ ಪೇಪರ್‌ಗಳ ಪರಿಶೀಲನೆಯು ಮತದಾನದ ದಿನದ ನಂತರ ಅಭ್ಯರ್ಥಿಗಳು ಅಥವಾ ಅವರ ಅಧಿಕೃತ ಪೋಲಿಂಗ್ ಏಜೆಂಟರ ಸಮ್ಮುಖದಲ್ಲಿ ನಡೆಯುತ್ತದೆ. ಯಾವುದಾದರೂ ಮರುಮತದಾನವನ್ನು ನಡೆಸುವ ನಿರ್ಧಾರವನ್ನು ಸಹ ನಂತರ ತೆಗೆದುಕೊಳ್ಳಲಾಗುತ್ತದೆ. ಕೆಲವು ಮತಗಟ್ಟೆ ಸಿಬ್ಬಂದಿಯು ಮತದಾನ ದಿನದ ನಂತರ ಭೌಗೋಳಿಕ/ವ್ಯವಸ್ಥಾಪನಾ ಪರಿಸ್ಥಿತಿಗಳನ್ನು ಅವಲಂಬಿಸಿ ಹಿಂತಿರುಗುತ್ತಾರೆ.
ಆಯೋಗವು ಪರಿಶೀಲನೆಯ ನಂತರ ಮತ್ತು ಮರುಮತದಾನದ ಸಂಖ್ಯೆ/ವೇಳಾಪಟ್ಟಿಯನ್ನು ಅವಲಂಬಿಸಿ, ನವೀಕರಿಸಿದ ಮತದಾನದ ಪ್ರಮಾಣವನ್ನು 24.05.2024 ರೊಳಗೆ ಲಿಂಗವಾರು ಅಂಕಿಅಂಶಗಳೊಂದಿಗೆ ಪ್ರಕಟಿಸುತ್ತದೆ.
ವಯೋಮಾನದ ಮತದಾರರು ಮತದಾನ ಕೇಂದ್ರಗಳಲ್ಲಿ ತಮ್ಮ ಬೆರಳಿನ ಶಾಯಿ ತೋರಿಸಿ ಮುಗುಳ್ನಗುತ್ತಿದ್ದಾರೆ.
ಕಳೆದ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಗಮನಿಸಿದಂತೆ ಮುಂಬೈ, ಥಾಣೆ, ನಾಸಿಕ್ ಮತ್ತು ಲಕ್ನೋದಂತಹ ವಿವಿಧ ನಗರಗಳಲ್ಲಿನ ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರ ನಿರಾಸಕ್ತಿಯ ಪ್ರವೃತ್ತಿಯು ಮುಂದುವರೆದಿದೆ. ಮುಂಬೈನಲ್ಲಿ ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ನಾಗರಿಕರು ತಮ್ಮ ಮತವನ್ನು ಚಲಾಯಿಸಲು ತಾಳ್ಮೆಯಿಂದ ಕಾಯುತ್ತಿದ್ದರು ಮತ್ತು ಹೆಮ್ಮೆಯಿಂದ ತಮ್ಮ ಶಾಯಿಯ ಬೆರಳುಗಳನ್ನು ಪ್ರದರ್ಶಿಸಿದರು. . 2024 ರ ಸಾರ್ವತ್ರಿಕ ಚುನಾವಣೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲು ಮತದಾರರನ್ನು ಪ್ರೇರೇಪಿಸಲು ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಆಯೋಗದೊಂದಿಗೆ ಭಾಗಿಯಾಗಿದ್ದಾರೆ. ಅಂತಹ ವಿವಿಧ ಪ್ರೇರಣಾದಾಯಕ ವೀಡಿಯೊಗಳನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.
SVEEP ರಾಷ್ಟ್ರೀಯ ಐಕಾನ್ ರಾಜಕುಮಾರ್ ರಾವ್ ಸೇರಿದಂತೆ ಇತರ ಸೆಲೆಬ್ರಿಟಿಗಳು ತಮ್ಮ ಶಾಯಿಯ ಬೆರಳುಗಳನ್ನು ತೋರಿಸುತ್ತಿದ್ದಾರೆ.
ಬಿಹಾರ ಮತ್ತು ಒಡಿಶಾದಲ್ಲಿ ಹಿರಿಯ ಮತದಾರರು
5ನೇ ಹಂತದ ಮುಕ್ತಾಯದೊಂದಿಗೆ, ಸಾರ್ವತ್ರಿಕ ಚುನಾವಣೆ 2024 ರ ಮತದಾನವು ಈಗ 25 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 428 ಲೋಕಸಭಾ ಕ್ಷೇತ್ರಗಳಲ್ಲಿ ಪೂರ್ಣಗೊಂಡಿದೆ.
ಪಶ್ಚಿಮ ಬಂಗಾಳದ ಬೊಂಗಾವ್ (ಎಸ್ ಸಿ) ಲೋಕಸಭಾ ಕ್ಷೇತ್ರದ ಮಾದರಿ ಮತದಾನ ಕೇಂದ್ರದಲ್ಲಿ ಮೊದಲ ಬಾರಿಯ ಮತದಾರರು ಮತ್ತು ಲೇಹ್ ನ ಯುವರ್ತುಂಗ್ ಮತಗಟ್ಟೆಯಲ್ಲಿ 85 ವರ್ಷ ವಯಸ್ಸಿನ ಮತದಾರರಾದ ಸೋನಮ್ ಗೊನ್ಬೊ
ಅರುಣಾಚಲ ಪ್ರದೇಶ, ಸಿಕ್ಕಿಂ, ಆಂಧ್ರ ಪ್ರದೇಶ ರಾಜ್ಯಗಳ ವಿಧಾನಸಭೆ ಮತ್ತು ಒಡಿಶಾ ವಿಧಾನಸಭೆಯ 63 ವಿಧಾನಸಭಾ ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿದೆ. ಹೆಚ್ಚಿನ ರೆಸಲ್ಯೂಶನ್ ಇರುವ ಮತದಾನ ದಿನದ ಛಾಯಾತ್ರಗಳನ್ನು ಇಲ್ಲಿ ನೋಡಬಹುದು: https://www.eci.gov.in/ge-2024-photogallery
ಮುಂದಿನ ಹಂತದ (ಹಂತ 6) ಮತದಾನವು ಮೇ 25, 2024 ರಂದು 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 58 ಲೋಕಸಭಾ ಕ್ಷೇತ್ರಗಳಲ್ಲಿ (ಅನಂತನಾಗ್-ರಾಜೌರಿ ಲೋಕಸಭಾ ಕ್ಷೇತ್ರದಲ್ಲಿ ಮುಂದೂಡಲ್ಪಟ್ಟ ಮತದಾನ ಸೇರಿದಂತೆ) ನಿಗದಿಯಾಗಿದೆ.
*****
(Release ID: 2021198)
Visitor Counter : 119
Read this release in:
Assamese
,
Tamil
,
English
,
Urdu
,
Hindi
,
Hindi_MP
,
Punjabi
,
Gujarati
,
Odia
,
Telugu
,
Malayalam