ಚುನಾವಣಾ ಆಯೋಗ
azadi ka amrit mahotsav

ಮೊದಲ ನಾಲ್ಕು ಹಂತಗಳಲ್ಲಿ ಮತದಾನ ಪ್ರಮಾಣ 66.95%.


ಈವರೆಗೆ 451 ದಶಲಕ್ಷ ಮತದಾರರಿಂದ ಮತದಾನ 

ಮುಂಬರುವ ಹಂತಗಳಲ್ಲಿ ಮತದಾರರು ಮನೆಯಿಂದ ಹೊರ ಬರಬೇಕು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದು ಆಯೋಗ ಕರೆ 

ಬಾಕಿ ಉಳಿದಿರುವ ಮೂರು ಹಂತಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಮತದಾರರಿಗೆ ಮಾಹಿತಿ, ಪ್ರೇರಣೆ ಮತ್ತು ಸೌಲಭ್ಯ ಹೆಚ್ಚಳಕ್ಕೆ ಕ್ರಮ: ಈ ನಿಟ್ಟಿನಲ್ಲಿ ಉಪಕ್ರಮಗಳನ್ನು ಹೆಚ್ಚಿಸುವಂತೆ ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚನೆ 

ದೊಡ್ಡ ಪ್ರಮಾಣದ ಮತದಾನದ ಮೂಲಕ ಭಾರತೀಯ ಮತದಾರರು ಜಗತ್ತಿಗೆ ಸಂದೇಶ ನೀಡಬೇಕು : ಕೇಂದ್ರ ಚುನಾವಣಾ ಆಯೋಗ 

ಮತದಾನ ಕುರಿತಂತೆ ಜಾಗೃತಿ ಮೂಡಿಸಲು ಸರ್ಕಾರಿ/ಖಾಸಗಿ ಸಂಘಟನೆಗಳು, ಗಣ್ಯ ವ್ಯಕ್ತಿಗಳು ಅಭಿಯಾನದಲ್ಲಿ ಕೈಜೋಡಿಸುವಂತೆ ಕರೆ 

Posted On: 16 MAY 2024 1:28PM by PIB Bengaluru

ಹಾಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕ್ರಿಕೆಟ್ ದಂತ ಕಥೆ ಮತ್ತು ಕೇಂದ್ರ ಚುನಾವಣಾ ಆಯೋಗದ ರಾಷ್ಟ್ರೀಯ ರಾಯಭಾರಿ ಸಚಿನ್ ತೆಂಡೂಲ್ಕರ್ ನಿಮಗೆ ಕರೆ ಮಾಡಿ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಹೇಳಿದರೆ ನೀವು ಅಚ್ಚರಿ ಪಡಬೇಕಿಲ್ಲ. ಮತದಾನದ ಪ್ರಮಾಣ ಹೆಚ್ಚಿಸಲು ತನ್ನ ಪ್ರೇರಣೆಯ ಭಾಗವಾಗಿ, ಹಾಲಿ ನಡೆಯುತ್ತಿರುವ ಚುನಾವಣೆಗಳ ಸಮಯದಲ್ಲಿ ಮತದಾರರನ್ನು ತಮ್ಮ ಮತವನ್ನು ಚಲಾಯಿಸಲು ಮನವಿ ಮಾಡಲು ಮತ್ತು ಪ್ರೇರೇಪಿಸಲು ಇಸಿಐ ವಿವಿಧ ಮಧ್ಯಸ್ಥಿಕೆಗಳ ಒಂದು ಶ್ರೇಣಿಯನ್ನೇ ಪರಿಚಯಿಸಿದೆ. ಲೋಕಸಭಾ ಚುನಾವಣೆ – 2024 ರಲ್ಲಿ ಈ ವರೆಗೆ ಒಟ್ಟಾರೆ ಮತದಾನದ ಪ್ರಮಾಣ 66.95% ರಷ್ಟು ದಾಖಲಾಗಿದ್ದು, ಸಾಮಾನ್ಯ ಸಾರ್ವತ್ರಿಕ ಚುನಾವಣೆಯಲ್ಲಿ ಈವರೆಗೆ ಮೊದಲ ನಾಲ್ಕು ಹಂತಗಳಲ್ಲಿ ಸುಮಾರು 451 ದಶಲಕ್ಷ ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 

ಪ್ರತಿಯೊಬ್ಬ ಅರ್ಹ ಮತದಾರರನ್ನು ತಲುಪಲು ಇಸಿಐ ತನ್ನ ಮಧ್ಯಸ್ಥಿಕೆ ಕ್ರಮಗಳನ್ನು ಹೆಚ್ಚಿಸಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ಸಾರಥ್ಯವಹಿಸಿರುವ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ಅವರೊಂದಿಗೆ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖ್ ಬೀರ್ ಸಿಂಗ್ ಸಂಧು ಅವರು 5, 6 ಮತ್ತು 7 ನೇ ಹಂತದ ಮತದಾನದ ಹಿನ್ನೆಲೆಯಲ್ಲಿ ಮತದಾರರಿಗೆ ಸೂಕ್ತ ಸಮಯದಲ್ಲಿ ಮತದಾರರ ಮಾಹಿತಿ ಚೀಟಿಯನ್ನು ವಿತರಿಸುವಂತೆ ಮತ್ತು ಚುನಾವಣಾ ಜನಜಾಗೃತಿ ಅಭಿಯಾನವನ್ನು ತೀವ್ರಗೊಳಿಸುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 

“ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಸಹಭಾಗಿತ್ವ ಮತ್ತು ಸಹಯೋಗ ಅತ್ಯಂತ ಬಲಿಷ್ಠವಾದ ಆಧಾರ ಸ್ತಂಭಗಳು ಎಂಬುದನ್ನು ಚುನಾವಣಾ ಆಯೋಗ ನಂಬಿದೆ. ವಿವಿಧ ಸಂಸ್ಥೆಗಳು, ಗಣ್ಯ ವ್ಯಕ್ತಿಗಳು ಮತ್ತು ಸಮಾಜದ ಮೇಲೆ ಪ್ರಭಾವಿಗಳು ಉತ್ಸಾಹಭರಿತವಾಗಿ ಮತದಾರರ ಮೇಲೆ ಮತದಾನ ಮಾಡಲು ಪ್ರಭಾವ ಬೀರುತ್ತಿದ್ದಾರೆ” ಎಂದು ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ಹೇಳಿದ್ದಾರೆ. ದೊಡ್ಡ ಪ್ರಮಾಣದ ಮತದಾನದ ಮೂಲಕ ಭಾರತೀಯ ಮತದಾರರು ಜಗತ್ತಿಗೆ ಭಾರತೀಯ ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಸಂದೇಶ ನೀಡಬೇಕು ಎಂಬುದು ಕೇಂದ್ರ ಚುನಾವಣಾ ಆಯೋಗದ ಆಶಯವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮತದಾರರು ಮತಗಟ್ಟಗೆ ಆಗಮಿಸಿ ಮತದಾನ ಮಾಡಬೇಕು. ಮತದಾನದ ದಿನ ಕೇವಲ ರಜಾ ದಿನವಲ್ಲ. ಬದಲಿಗೆ ಪ್ರಜಾತಂತ್ರದ ಉತ್ಸವದಲ್ಲಿ ಭಾಗಿಯಾಗಲು ನಮಗೆಲ್ಲರಿಗೂ ಹೆಮ್ಮೆಯ ದಿನವಾಗಿದೆ ಎಂದು ಹೇಳಿದೆ. 

ಆಯೋಗದ ಜೊತೆಗೂಡಿರುವ ಪಾಲುದಾರರು ಮತದಾನ ಕುರಿತು ಜನಜಾಗೃತಿ ಮತ್ತು ಪ್ರಚಾರ ಅಭಿಯಾನಗಳಲ್ಲಿ ಈ ಕೆಳಕಂಡಂತೆ ಭಾಗಿಯಾಗುತ್ತಿದ್ದಾರೆ: 

1.  ದೂರ ಸಂಪರ್ಕ ಸೇವಾ ಪೂರೈಕೆದಾರರಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್, ಭಾರ್ತಿ ಸೇವಾ ಲಿಮಿಟೆಡ್, ಜಿಯೋ ಟೆಲಿ ಕಮ್ಯುನಿಕೇಶನ್, ವಡಾಫೋನ್ – ಐಡಿಯಾ ಲಿಮಿಟೆಡ್ ಸಂಸ್ಥೆಗಳು ಪ್ರತಿಯೊಂದು ಸಂಸತ್ ಕ್ಷೇತ್ರಗಳಲ್ಲಿ ಪ್ರತಿಯೊಬ್ಬ ಮೊಬೈಲ್ ಬಳಕೆದಾರರಿಗೆ ಎಸ್.ಎಂ.ಎಸ್/ ಫ್ಲಾಶ್ ಎಸ್.ಎಂ.ಎಸ್ ಮೂಲಕ, ಕರೆ ಮಾಡುವಾಗ ಆರ್.ಸಿ.ಎಸ್ [ರಿಚ್ ಕಮ್ಯುನಿಕೇಶನ್ ಸರ್ವೀಸ್] ಸಂದೇಶಗಳ ಮೂಲಕ ಮತ್ತು ವಾಟ್ಸ್ ಅಪ್ ಸಂದೇಶಗಳು/ಎಚ್ಚರಿಕೆ ಸಂದೇಶಗಳ ಮೂಲಕ ತಲುಪುತ್ತಿದೆ. ಮತದಾನಕ್ಕೂ ಮುನ್ನ ಎರಡು ಅಥವಾ ಮೂರು ದಿನಗಳ ಮುಂಚೆ ಮತ್ತು ಮತದಾನದ ದಿನದಂದು ಪ್ರಾದೇಶಿಕ ಭಾಷೆಗಳಲ್ಲಿ ಮತದಾನದಲ್ಲಿ ಭಾಗವಹಿಸುವಂತೆ ಮನವಿ ಸಂದೇಶಗಳನ್ನು ಬಿತ್ತರಿಸುತ್ತಿವೆ. 

2. ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಕ್ರಮ: ಹಾಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಋತುವಿನಲ್ಲಿ ಇಸಿಐ - ಬಿಸಿಸಿಐ ಜೊತೆಗೂಡಿ ಜನಜಾಗೃತಿ ಚಟುವಟಿಕೆ ಕೈಗೊಳ್ಳುತ್ತಿದೆ. ಕ್ರಿಕೆಟ್ ಪಂದ್ಯ ನಡೆಯುವ ವಿವಿಧ ಕ್ರೀಡಾಂಗಣಗಳಲ್ಲಿ ಮತದಾರರಿಗೆ ಸಂದೇಶ ಮತ್ತು ಚುನಾವಣಾ ಗೀತೆಯನ್ನು ಸಹ ಪ್ರಸಾರ ಮಾಡಲಾಗುತ್ತಿದೆ. ಜಾಗೃತಿ ಅಭಿಯಾನದಲ್ಲಿ ಅತ್ಯಂತ ವಿನೂತನ ಆಯಾಮವೆಂದರೆ ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರ ಮುದ್ರಿತ ವಿಡಿಯೋ ಸಂದೇಶಗಳನ್ನು ಐಪಿಎಲ್ ಕ್ರಿಕೆಟ್ ನಡೆಯುವ ಸ್ಥಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಕ್ರಿಕೆಟ್ ವೀಕ್ಷಕ ವಿವರಣೆ ನೀಡುವಾಗ ಮತದಾನದ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ. ಐಪಿಎಲ್ ನಲ್ಲಿ ಭಾಗಿಯಾಗಿರುವ 10 ತಂಡಗಳ ಆಟಗಾರರಿಂದ ಲೋಕಸಭಾ ಚುನಾವಣೆ -2024 ಕ್ಕಾಗಿ ಮುದ್ರಿತ ಸಂದೇಶಗಳನ್ನು ಸಹ ಪ್ರಸಾರ ಮಾಡಲಾಗುತ್ತಿದೆ. 

3. ಮತದಾನದ ದಿನದಂದು ಫೇಸ್ ಬುಕ್ ಮೂಲಕ ಫೇಸ್ ಬುಕ್ ಬಳಕೆದಾರರಿಗೆ ಪ್ಯಾನ್ ಇಂಡಿಯಾ ವೇದಿಕೆಯಿಂದ ಸಂದೇಶವನ್ನು ರವಾನಿಸಲಾಗುತ್ತಿದೆ ಮತ್ತು ಸಾಮಾನ್ಯ ಚುನಾವಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಹಾಗೂ ಪ್ರಜಾತಂತ್ರದ ಹಬ್ಬದಲ್ಲಿ ಭಾಗವಹಿಸುವಂತೆ ಮತದಾರರನ್ನು ಪ್ರೇರೇಪಿಸಲಾಗುತ್ತಿದೆ.  

4. ಮತದಾನದ ದಿನದಂದು ವಾಟ್ಸ್ ಅಪ್ ಮೂಲಕ ಸಂದೇಶ ಬಿತ್ತರಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಮತದಾನದ ದಿನಗಳಲ್ಲಿ ಗೂಗಲ್ ಡೂಡಲ್‌ನ ಐಕಾನಿಕ್ ವೈಶಿಷ್ಟ್ಯದ ಮೂಲಕ ಗೂಗಲ್ ಇಂಡಿಯಾ ಕೊಡುಗೆ ನೀಡುತ್ತಿದೆ ಮತ್ತು ಯೂಟ್ಯೂಬ್, ಗೂಗಲ್ ಪೇ ಮತ್ತು ಇತರೆ ಗೂಗಲ್ ಪ್ಲಾಟ್ ಫಾರ್ಮ್ ಮೂಲಕ ಸಂದೇಶ ನೀಡಲಾಗುತ್ತಿದೆ.  

5.   ರೀಟೇಲ್ ಅಸೋಸಿಯೇಷನ್ ಆಫ್ ಇಂಡಿಯಾ ಮತದಾರರ ಜಾಗೃತಿ ಕುರಿತು ಸಕ್ರಿಯವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ತನ್ನ ಚಿಲ್ಲರೆ ಸಂಪರ್ಕ ಜಾಲ ಮತ್ತಿತರೆ ವಲಯಗಳಲ್ಲಿ ಚುನಾವಣೆ ಒಂದು ಉತ್ಸವವಾಗಿದ್ದು, ಸಕ್ರಿಯವಾಗಿ ಭಾಗವಹಿಸುವಂತೆ ಅರಿವು ಮೂಡಿಸುತ್ತಿದೆ. 

6. ಇಸಿಐನ ಉದ್ದೇಶಗಳನ್ನು ಸಾಕಾರಗೊಳಿಸಲು ಅಂಚೆ ಕಚೇರಿಗಳು ಮತ್ತು ಬ್ಯಾಂಕಿಂಗ್ ಸಂಸ್ಥೆಗಳ ವ್ಯಾಪಕ ಜಾಲವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಮತ್ತು ದೇಶದ ಉದ್ದಗಲಕ್ಕೂ ವೈವಿಧ್ಯಮಯ ಪ್ರೇಕ್ಷಕರನ್ನು ತಲುಪುತ್ತಿದೆ. 
   ಎ. ಅಂಚೆ ಇಲಾಖೆ 1.6 ಲಕ್ಷ ಅಂಚೆ ಕಚೇರಿಗಳನ್ನು ಮತ್ತು 1,000 ಎಟಿಎಂಗಳನ್ನು ಹೊಂದಿದ್ದು, ಡಿಜಿಟಲ್ ಸ್ಕ್ರೀನ್ ಗಳಲ್ಲಿ ಸಂದೇಶ ಪ್ರಸಾರವಾಗುತ್ತಿದೆ.

     ಬಿ. ದೇಶದಲ್ಲಿ 1.63 ಲಕ್ಷ ಬ್ಯಾಂಕ್ ಶಾಖೆಗಳು ಮತ್ತು 2.2 ಲಕ್ಷ ಎಟಿಎಂಗಳಿವೆ ಮತ್ತು ಖಾಸಗಿ ಬ್ಯಾಂಕಿಂಗ್ ಜಾಲವೂ ಸಹ ಒಳಗೊಂಡಿದೆ.  

7.  ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗದಲ್ಲಿ ಸಂಸತ್ ಚುನಾವಣೆಗಾಗಿ “ಚುನಾವಣೆಯ ಪರ್ವ, ದೇಶಕ್ಕೆ ಗರ್ವ” ಎಂಬ ಸಂದೇಶವನ್ನು ಐಆರ್ ಸಿಟಿಸಿ ಪೋರ್ಟಲ್ ಮತ್ತು ಟಿಕೆಟ್ ಗಳಲ್ಲೂ   ಎಲ್ಲೆಡೆ ಮೊಳಗಿಸಲಾಗುತ್ತಿದೆ. 

8. ಎಲ್ಲಾ ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕ ವಿಳಾಸ ವ್ಯವಸ್ಥೆಯಲ್ಲಿ ಮತದಾರರ ಜಾಗೃತಿ ಪ್ರಕಟಣೆಗಳನ್ನು ಸಂಯೋಜಿಸಲಾಗಿದೆ. ಲೋಗೋ, ಸ್ಟಿಕ್ಕರ್‌ಗಳನ್ನು ಸೂಪರ್‌ಫಾಸ್ಟ್ ರೈಲುಗಳ ಕೋಚ್‌ಗಳಲ್ಲಿ ಬಳಸಲಾಗುತ್ತದೆ.

9. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗದೊಂದಿಗೆ, ಸುಮಾರು 16,000 ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮತದಾರರ ಜಾಗೃತಿಗಾಗಿ ಹೋರ್ಡಿಂಗ್‌ಗಳನ್ನು ಸ್ಥಾಪಿಸಲಾಗಿದೆ.

10. ನಾಗರಿಕ ವಿಮಾನಯಾನ ಸಚಿವಾಲಯದ ಸಹಯೋಗದೊಂದಿಗೆ, ವಿಮಾನಯಾನ ಸಂಸ್ಥೆಗಳು ಮುಂದಿನ ಚುನಾವಣೆಗಳಲ್ಲಿ ಭಾಗವಹಿಸಲು ಮನವಿ ಸಂದೇಶದೊಂದಿಗೆ ಘೋಷಣೆ ಮಾಡುತ್ತಿವೆ. ಮತದಾರರ ಮಾರ್ಗದರ್ಶಿ, ವಿಮಾನದ ಸೀಟ್ ಪಾಕೆಟ್‌ಗಳಲ್ಲಿ ಸಂದೇಶಗಳನ್ನು ಇರಿಸಲಾಗುತ್ತಿದೆ.  ಇದಲ್ಲದೆ, ಅನೇಕ ವಿಮಾನ ನಿಲ್ದಾಣಗಳು ಮತದಾರರ ಜಾಗೃತಿ ಸಂದೇಶಗಳ  ಪ್ರದರ್ಶನಕ್ಕೆ ಸ್ಥಳಾವಕಾಶ ಒದಗಿಸುತ್ತಿವೆ. ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಲಕ್ನೋ, ಪಾಟ್ನಾ, ಚಂಡೀಗಢ, ಪುಣೆ ಸೇರಿ 10 ಪ್ರಮುಖ ನಗರಗಳ ವಿಮಾನ ನಿಲ್ದಾಣಗಳಲ್ಲಿ ಸೆಲ್ಫಿ-ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ.  

11. ದೇಶಾದ್ಯಂತ ಸಿನೆಮಾ ಮಂದಿರಗಳಲ್ಲಿ ಇಸಿಐನ ನಾವು ಭಾರತೀಯರು, “ಹಮ್ ಭಾರತ್ ಕೆ ಮತದಾತಹೈ” ಇಸಿಐ ಮತದಾರರ ಜಾಗೃತಿ ಚುನಾವಣಾ ಗೀತೆಗಳನ್ನು ನಿಯಮಿತವಾಗಿ ಸಾರ್ವಜನಿಕ ಜನ ಜಾಗೃತಿ ಚಿತ್ರಗಳ ಪ್ರದರ್ಶನ ಭಾಗವಾಗಿ [ಪಿಎಸ್ಎ]  ಪ್ರಸಾರ ಮಾಡಲಾಗುತ್ತಿದೆ. 

12. ಕೊನೆಯ ಮೈಲಿನಲ್ಲಿ ಮತದಾನವನ್ನು ಖಚಿತಪಡಿಸಿಕೊಳ್ಳುವಲ್ಲಿನ ಸವಾಲುಗಳನ್ನು ಪ್ರದರ್ಶಿಸಲು ಕಷ್ಟಕರವಾದ ಭೂಪ್ರದೇಶಗಳನ್ನು ನ್ಯಾವಿಗೇಟ್ ಮಾಡಿದ ನಂತರ ಚುನಾವಣಾ ಯಂತ್ರದ ಮೂಲಕ ದೇಶದ ದೂರದ ಮೂಲೆಗಳಲ್ಲಿ ವಿಶಿಷ್ಟವಾದ ಮತಗಟ್ಟೆಗಳ ಸೆಟಪ್ ಕುರಿತು ಸಂಸದ್ ಟಿವಿ ಕಿರುಚಿತ್ರಗಳನ್ನು ರಚಿಸಿದೆ.

13. ಅಮುಲ್, ಮದರ್ ಡೈರಿ ಮತ್ತು ಇತರ ಹಾಲಿನ ಸಹಕಾರಿ ಸಂಸ್ಥೆಗಳು ತಮ್ಮ ಹಾಲಿನ ಪಾಕೇಟ್ ಗಳಲ್ಲಿ ‘ಚುನಾವ್ ಕಾ ಪರ್ವ್, ದೇಶ್ ಕಾ ಗರ್ವ್’ ಎಂಬ ಸಂದೇಶದೊಂದಿಗೆ ಬ್ರ್ಯಾಂಡ್ ಮಾಡಲು ಪ್ರಾರಂಭಿಸಿವೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮತದಾರರನ್ನು ಪ್ರೋತ್ಸಾಹಿಸುತ್ತಿವೆ. ಪತ್ರಿಕೆಗಳಲ್ಲಿ ಅಮುಲ್ ಗರ್ಲ್ ಜಾಹೀರಾತಿನ ಮೂಲಕ ಅಮುಲ್ ತನ್ನ ವಿಶಿಷ್ಟ ಸಂದೇಶದೊಂದಿಗೆ ಮತದಾರರನ್ನು ಪ್ರೋತ್ಸಾಹಿಸುತ್ತಿದೆ.  

14. ಪ್ರಸಾರ ಭಾರತಿ: ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು, ಭಾರತದ ಉಪರಾಷ್ಟ್ರಪತಿಗಳು, ಭಾರತದ ಮುಖ್ಯ ನ್ಯಾಯಮೂರ್ತಿಗಳಂತಹ ಸಾಂವಿಧಾನಿಕ ಗಣ್ಯರ ಮನವಿ ಸೇರಿದಂತೆ ವಿವಿಧ ಕಿರುಚಿತ್ರಗಳನ್ನು ದೂರದರ್ಶನ ನಿರ್ಮಿಸಿದೆ. ಇದಲ್ಲದೆ, ವಿಶಿಷ್ಟವಾದ ಮತಗಟ್ಟೆಗಳನ್ನು ಪ್ರಾದೇಶಿಕ ಕೇಂದ್ರವು ಅದರ ಆಡಿಯೋ-ದೃಶ್ಯ ದಾಖಲಾತಿಗಳನ್ನು ಸಹ ಮಾಡುತ್ತಿದೆ. 

15. ಮ್ಯೂಸಿಕ್ ಆ್ಯಪ್ ಸ್ಪಾಟಿಫೈ ‘ಪ್ಲೇ ಯುವರ್ ಪಾರ್ಟ್’ ಅಭಿಯಾನವನ್ನು ನಡೆಸುತ್ತಿದೆ ಮತ್ತು ಅವರು ತಮ್ಮ ಆ್ಯಪ್‌ನಲ್ಲಿ ಮುದ್ರಿತ ಜಾಹೀರಾತುಗಳನ್ನು ನೀಡಿದ್ದಾರೆ ಮತ್ತು ಚುನಾವಣೆಗಳಿಗಾಗಿ ಪ್ಲೇಪಟ್ಟಿಗಳನ್ನು ಸಂಗ್ರಹಿಸಿವೆ.

16. ಬೈಕ್ ಆಫ್ ರಾಪಿಡೋ ಮತದಾನ ಮಾಡಿದರೆ ಉಚಿತ ರೈಡ್ ಗೆ ಅವಕಾಶ ನೀಡಿದೆ.

17. ಪೇಮೆಂಟ್ ಆಪ್ ಆದ ಫೋನ್ ಪೇ ಮತದಾರರ ಜಾಗೃತಿ ಸಂದೇಶಗಳನ್ನು ನೀಡುತ್ತಿದೆ ಮತ್ತು ಸಕ್ರಿಯವಾಗಿ ಮತದಾರರನ್ನು ಜಾಗೃತಗೊಳಿಸುತ್ತಿದೆ. 

18. ಗ್ರೇಸರಿ ಆಪ್ ಬ್ಲಿಂಕಿಟ್ ತನ್ನ ಲೋಗೋ ಬದಲಾವಣೆ ಮಾಡಿದ್ದು, ಚುನಾವಣೆಗಾಗಿ “ಇಂಕಿತ್” “ಮನೆಯಿಂದ ಹೊರ ಬನ್ನಿ ಮತ್ತು ಮತದಾನ ಮಾಡಿ” ಎಂಬ ಟ್ಯಾಗ್ ಲೈನ್ ಮೂಲಕ ಮತದಾನ ಜನ ಜಾಗೃತಿ ಮೂಡಿಸುತ್ತಿದೆ. 

19. ಬುಕ್ ಮೈ ಶೋ “ಆಜ್ ಫಿಚ್ಚರ್ ನಹಿ, ಬಿಗ್ಗರ್ ಪಿಚ್ಚರ್ ದೋಖೋ” ಎಂದು ಮತದಾರರ ಜನ ಜಾಗೃತಿ ಸಂದೇಶ ಬಿತ್ತರಿಸುತ್ತಿದೆ. 

20. ಮೇಕ್ ಮೈ ಟ್ರಿಪ್ ಸಂಸ್ಥೆ “ವೈವೋಟ್ ವಾಲಾ ಟ್ರಿಪ್” ಎಂಬ ಅಭಿಯಾನದ ಮೂಲಕ ಮತದಾನ ಮಾಡುವ  ಗ್ರಾಹಕರಿಗೆ ರಿಯಾಯಿತಿ ನೀಡುತ್ತಿದೆ. 

21. ಆಹಾರ ಪೂರೈಸುವ ಝೊಮಾಟೋ ಮತ್ತು ಸ್ವಿಗ್ಗಿ ತನ್ನ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೂಲಕ ಮತದಾರರ ಜನ ಜಾಗೃತಿ ಸಂದೇಶಗಳನ್ನು ಪಸರಿಸುತ್ತಿವೆ.  

22. ಟಾಟಾ ಗ್ರೂಪ್ ತನ್ನ ಗ್ರಾಹಕರನ್ನು ವ್ಯಾಪಕವಾಗಿ ತಲುಪುವ ಟಾಟಾ ನೆವು ಆಪ್ ತನ್ನ ಮೊಬೈಲ್ ಆಫ್ ಮೂಲಕ ಹೋಂ ಪೇಜ್ ನಲ್ಲಿ “ನೀವು ಮತದಾನ ಮಾಡಿ” ಎಂಬ ಸಂದೇಶದೊಂದಿಗೆ ಅನಿಮೇಟೆಡ್ ಬ್ಯಾನರ್ ಮೂಲಕ ಹೆಚ್ಚುವರಿ ಪ್ರೋತ್ಸಾಹ ನೀಡುತ್ತಿವೆ. 

23. ಉಬರ್ ಇಂಡಿಯಾ ತನ್ನ ಬಹುಹಂತದ ವಾಹಿನಿಗಳ [ಆಪ್, ಇಮೇಲ್, ಸೂಚನೆಗಳನ್ನು ಹೊರಡಿಸುವ] ಮೂಲಕ ಜಾಗೃತಿ ಮೂಡಿಸುತ್ತಿವೆ. ಮತದಾನಕ್ಕಾಗಿ ತೆರಳುವ ಮತದಾರರಿಗೆ ರಿಯಾಯಿತಿ ನೀಡುತ್ತಿವೆ ಮತ್ತು ಸಾಮಾಜಿಕ ವೇದಿಕೆಗಳಲ್ಲಿ ಮತದಾರರ ಜಾಗೃತಿ ಸಂದೇಶಗಳನ್ನು ಪ್ರಸಾರ ಮಾಡುತ್ತಿದೆ.

24.  ಮತದಾರರ ಜಾಗೃತಿ ಭಾಗವಾಗಿ ಅರ್ಬನ್ ಕಂಪೆನಿ “ನಾನು ಮತದಾನ ಮಾಡಿದ್ದೇನೆ ಅಭಿಯಾನ” ಹಮ್ಮಿಕೊಂಡಿದೆ. 

25. ಹೊರಹೋಗುವ ಕರೆಗಳ ಸಮಯದಲ್ಲಿ ಮತದಾರರ ಜಾಗೃತಿ ಸಂದೇಶವನ್ನು ಪ್ರದರ್ಶಿಸುವ ಮೂಲಕ ಟ್ರೂಕಾಲರ್ಸ್ ತನ್ನ ವಿನ್ಯಾಸವನ್ನು ಹೆಚ್ಚಿಸುತ್ತಿದೆ.

26. ಇತರ ಕೆಲವು ಸ್ವತಂತ್ರ ಉಪಕ್ರಮಗಳು ಮ್ಯಾನ್‌ಕೈಂಡ್ ಫಾರ್ಮಾ #ನೈಜ ಮತದಾನ ಅಭಿಯಾನ, ಬಟ್ಟೆ, ಬ್ರಾಂಡ್ ನೀರು, “ವೋಟ್ ಕಿ ತಯಾರಿ” ಟಿವಿಸಿ ಟಿಂಡರ್‌ನ “ಪ್ರತಿ ಏಕ ಮತ ಎಣಿಕೆಗಳು” ಅಭಿಯಾನ, ಜೀವನಸಾಥಿ.ಕಾಮ್‌ನಂತಹ ಮ್ಯಾಟ್ರಿಮೋನಿಯಲ್ ಸೈಟ್‌ಗಳಿಂದ ಸೃಜನಾತ್ಮಕವಾಗಿ ಕ್ಯುರೇಟೆಡ್ ಸಾಮಾಜಿಕ ಮಾಧ್ಯಮ ಪೋಸ್ಟ್ ಮತ್ತು ಜನಪ್ರಿಯ ಬ್ರಾಂಡ್‌ಗಳಿಂದ ಮತದಾನಕ್ಕಾಗಿ ರಿಯಾಯಿತಿಗಳು ಉದಾಹರಣೆಗೆ ಶಾಪರ್ಸ್ ಸ್ಟಾಪ್, ಮೇಕ್‌ಮೈಟ್ರಿಪ್, ಕ್ರೋಮಾ ಮತ್ತು ಇನ್ನೂ ಹಲವು ಬ್ರ್ಯಾಂಡ್‌ಗಳು ಸಹ ತನ್ನದೇ Sada ರೀತಿಯಲ್ಲಿ ಜನ ಜಾಗೃತಿ ಮೂಡಿಸುತ್ತಿವೆ. 

******


(Release ID: 2020842) Visitor Counter : 150