ಚುನಾವಣಾ ಆಯೋಗ

ನಾಳೆ ನಾಲ್ಕನೇ ಹಂತದ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ


10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 96 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತದೆ; 1.92 ಲಕ್ಷ ಮತಗಟ್ಟೆಗಳಲ್ಲಿ ಒಟ್ಟು 17.7 ಕೋಟಿ ಮತದಾರರಿದ್ದಾರೆ

ಆಂಧ್ರಪ್ರದೇಶದ 175 ವಿಧಾನಸಭಾ ಸ್ಥಾನಗಳು ಮತ್ತು ಒಡಿಶಾದ 28 ವಿಧಾನಸಭಾ ಕ್ಷೇತ್ರಗಳಿಗೂ ಈ ಹಂತದಲ್ಲಿ ಮತದಾನ ನಡೆಯಲಿದೆ.

ಮತದಾನದ ದಿನದಂದು  ಬಿಸಿಗಾಳಿಯ ಮುನ್ಸೂಚನೆ ಇಲ್ಲ; ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನವನ್ನು (±2 ಡಿಗ್ರಿ) ಊಹಿಸಲಾಗಿದೆ

ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ತೆಲಂಗಾಣದಲ್ಲಿ ಮತದಾನದ ಸಮಯವನ್ನು ಹೆಚ್ಚಿಸಲಾಗಿದೆ

Posted On: 12 MAY 2024 3:43PM by PIB Bengaluru

ನಾಳೆ ಆರಂಭವಾಗಲಿರುವ ಸಾರ್ವತ್ರಿಕ ಚುನಾವಣೆಯ ಹಂತ-ನಾಲ್ಕಕ್ಕೆ ಭಾರತೀಯ ಚುನಾವಣಾ ಆಯೋಗವು ಸಜ್ಜಾಗಿದೆ. 4 ನೇ ಹಂತದಲ್ಲಿ, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 96 ಲೋಕಸಭಾ  ಕ್ಷೇತ್ರಗಳಿಗೆ ಮತದಾನ ನಡೆಯಲಿದೆ; ಆಂಧ್ರಪ್ರದೇಶದ ರಾಜ್ಯ ವಿಧಾನಸಭೆಯ ಎಲ್ಲಾ 175 ಸ್ಥಾನಗಳು ಮತ್ತು ಒಡಿಶಾದ ರಾಜ್ಯ ವಿಧಾನಸಭೆಯ 28 ಸ್ಥಾನಗಳಿಗೆ ಏಕಕಾಲದಲ್ಲಿ ನಡೆಯಲಿವೆ. ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಆಯೋಗವು ತೆಲಂಗಾಣದ 17   ಲೋಕಸಭಾ  ಕ್ಷೇತ್ರಗಳ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಸಮಯವನ್ನು (ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ) ಹೆಚ್ಚಿಸಿದೆ.

ಭಾರತೀಯ ಹವಾಮಾನ ಇಲಾಖೆಯು ನೀಡಿರುವ  ಮುನ್ಸೂಚನೆಯ ಪ್ರಕಾರ 4 ನೇ ಹಂತದ ಮತದಾನಕ್ಕೆ ಬಿಸಿ ಗಾಳಿಯ  ಬಗ್ಗೆ ಯಾವುದೇ ಆತಂಕವಿಲ್ಲ. ಹವಾಮಾನ ಮುನ್ಸೂಚನೆಯು ಚುನಾವಣೆ ಇರುವ   ಲೋಕ ಸಭಾ ಕ್ಷೇತ್ರಗಳು ಸಾಮಾನ್ಯ ತಾಪಮಾನದಿಂದ ಸಾಮಾನ್ಯಕ್ಕಿಂತ‌ ಕಡಿಮೆ  ತಾಪಮಾನವನ್ನು (± 2 ಡಿಗ್ರಿ) ಹೊಂದುವ ಸಾಧ್ಯತೆಯಿದ್ದು  ಅಂದು ಈ ಪ್ರದೇಶಗಳಲ್ಲಿ ಬಿಸಿಗಾಳಿಯಂತಹ ಪರಿಸ್ಥಿತಿ ಇರುವುದಿಲ್ಲ ಎಂದು ಸೂಚಿಸುತ್ತದೆ. ಆದರೂ, ಮತದಾರರ ಅನುಕೂಲಕ್ಕಾಗಿ ಎಲ್ಲ ಮತಗಟ್ಟೆಗಳಲ್ಲಿ ನೀರು, ಶಾಮಿಯಾನ, ಫ್ಯಾನ್‌ ಗಳಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಇಲ್ಲಿಯವರೆಗೆ, 2024 ರ ಸಾರ್ವತ್ರಿಕ ಚುನಾವಣೆಯ ಹಂತ 3 ರವರೆಗೆ, 283 ಲೋಕಸಭಾ ಕ್ಷೇತ್ರಗಳು ಮತ್ತು 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನವು ಸುಗಮವಾಗಿ ನಡೆದು ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಜೂನ್ 4 ರಂದು ಮತ ಎಣಿಕೆಯನ್ನು ನಿಗದಿಪಡಿಸಲಾಗಿದೆ.

ಹಂತ-4 ಕ್ಕೆ ಸಂಬಂಧಿಸಿದ ಮಾಹತಿಗಳು:

1. 2024 ರ ಸಾರ್ವತ್ರಿಕ ಚುನಾವಣೆಯ ಹಂತ-4 ಕ್ಕೆ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 96 ಲೋಕಸಭಾ ಕ್ಷೇತ್ರಗಳಿಗೆ (ಸಾಮಾನ್ಯ-64; ಎಸ್‌ ಟಿ -12; ಎಸ್‌ ಸಿ-20) ಮೇ 13, 2024 ರಂದು ಮತದಾನ ನಡೆಯಲಿದೆ. ಮತದಾನವು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಸಂಜೆ 6 ಗಂಟೆಗೆ ಕೊನೆಗೊಳ್ಳುತ್ತದೆ (ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ  ಮತದಾನದ ಸಮಯವು ಭಿನ್ನವಾಗಿರಬಹುದು) 
 
2. ಆಂಧ್ರಪ್ರದೇಶ ವಿಧಾನಸಭೆಯ ಎಲ್ಲಾ 175 ಸ್ಥಾನಗಳಿಗೆ (ಸಾಮಾನ್ಯ-139; ಎಸ್‌ ಟಿ-7; ಎಸ್‌ ಸಿ-29) ಮತ್ತು ಒಡಿಶಾ ವಿಧಾನಸಭೆಯ 28 ಸ್ಥಾನಗಳಿಗೆ (ಸಾಮಾನ್ಯ-11; ಎಸ್‌ ಟಿ-14; ಎಸ್‌ ಸಿ-3) ಏಕಕಾಲದಲ್ಲಿ  ಮೇ 13 ರಂದು ಈ ಹಂತದಲ್ಲಿ ಮತದಾನ ನಡೆಯಲಿದೆ. 
 
3.  2024ರ ಲೋಕಸಭಾ ಚುನಾವಣೆಯ 4 ನೇ ಹಂತದಲ್ಲಿ ಚುನಾವಣೆಗೆ ಸ್ಪರ್ಧಿಸಲು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ‌ 1717 ಅಭ್ಯರ್ಥಿಗಳು ಇದ್ದಾರೆ. 4 ನೇ ಹಂತಕ್ಕಾಗಿ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸರಾಸರಿ ಸಂಖ್ಯೆ 18 ಆಗಿದೆ.  

4.  ನಾಲ್ಕನೇ ಹಂತದಲ್ಲಿ, ಚುನಾವಣಾ ಮತ್ತು ಭದ್ರತಾ ಸಿಬ್ಬಂದಿಗೆ ಮೂರು ರಾಜ್ಯಗಳಲ್ಲಿ (ಆಂಧ್ರ ಪ್ರದೇಶ-2, ಜಾರ್ಖಂಡ್-108; ಒಡಿಶಾ-12) 122 ವಿಮಾನಯಾನ ಸೇವೆಗಳನ್ನು  ಒದಗಿಸಲಾಗಿದೆ.

5.   19 ಲಕ್ಷಕ್ಕೂ ಹೆಚ್ಚು ಮತಗಟ್ಟೆ ಅಧಿಕಾರಿಗಳು 1.92 ಲಕ್ಷ ಮತಗಟ್ಟೆಗಳಲ್ಲಿ 17.7 ಕೋಟಿ ಮತದಾರರನ್ನು ಸ್ವಾಗತಿಸಲಿದ್ದಾರೆ.
 
6.  8.97 ಕೋಟಿ ಪುರುಷರು ಮತ್ತು 8.73 ಕೋಟಿ ಮಹಿಳೆಯರು ಸೇರಿದಂತೆ ಒಟ್ಟು ಮತದಾರರ ಸಂಖ್ಯೆ  17.70 ಕೋಟಿ.  

7. 4 ನೇ ಹಂತದಲ್ಲಿ 12.49 ಲಕ್ಷಕ್ಕೂ ಹೆಚ್ಚು ನೋಂದಾಯಿತ 85ಕ್ಕೂ ಹೆಚ್ಚು ವರ್ಷ ವಯಸ್ಸಿನವರು ಮತ್ತು 19.99 ಲಕ್ಷ ವಿಶೇಷಚೇತನ  ಮತದಾರರಿಗೆ ತಮ್ಮ ಮನೆಯಿಂದಲೇ ಮತ ಚಲಾಯಿಸುವ ಆಯ್ಕೆಯನ್ನು ಒದಗಿಸಲಾಗಿದೆ. ಐಚ್ಛಿಕ ಮನೆ ಮತದಾನದ ಸೌಲಭ್ಯವು ಈಗಾಗಲೇ  ಅತ್ಯುತ್ತಮ ಮೆಚ್ಚುಗೆ ಮತ್ತು ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. 
 
8. 2024 ರ ಸಾರ್ವತ್ರಿಕ ಚುನಾವಣೆಯ ನಾಲ್ಕನೇ ಹಂತದ 364 ವೀಕ್ಷಕರು (126 ಸಾಮಾನ್ಯ ಪರಿವೀಕ್ಷಕರು, 70 ಪೊಲೀಸ್ ಪರಿವೀಕ್ಷಕರು, 168 ವೆಚ್ಚ ಪರಿವೀಕ್ಷಕರು) ಚುನಾವಣೆಗೆ ಕೆಲವು ದಿನಗಳ ಮೊದಲು ತಮ್ಮ ಕ್ಷೇತ್ರಗಳನ್ನು ತಲುಪಿದ್ದಾರೆ. ಅವರು ಜಾಗರೂಕರಾಗಿದ್ದು ಆಯೋಗದ ಕಣ್ಣು ಮತ್ತು ಕಿವಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ, ಕೆಲವು ರಾಜ್ಯಗಳಲ್ಲಿ ವಿಶೇಷ ಪರಿವೀಕ್ಷಕರನ್ನು ನಿಯೋಜಿಸಲಾಗಿದೆ. 
 
9. ಒಟ್ಟು 4661 ಫ್ಲೈಯಿಂಗ್ ಸ್ಕ್ವಾಡ್‌ಗಳು, 4438 ಸ್ಥಾಯೀ ಕಣ್ಗಾವಲು ತಂಡಗಳು, 1710 ವಿಡಿಯೊ ಕಣ್ಗಾವಲು ತಂಡಗಳು ಮತ್ತು 934 ವಿಡಿಯೋ ವೀಕ್ಷಣಾ ತಂಡಗಳು ಮತದಾರರಿಗೆ ಯಾವುದೇ ರೀತಿಯ ಪ್ರಚೋದನೆಯಾದಾಗ ಕಟ್ಟುನಿಟ್ಟಾಗಿ ಮತ್ತು ತ್ವರಿತವಾಗಿ ನಿರ್ವಹಿಸಲು ಹಗಲು-ರಾತ್ರಿ ಕಣ್ಗಾವಲು ನಡೆಸುತ್ತಿವೆ 
 
10.  ಒಟ್ಟು 1016 ಅಂತರ-ರಾಜ್ಯ ಮತ್ತು 121 ಅಂತಾರಾಷ್ಟ್ರೀಯ ಗಡಿ, ಚೆಕ್ ಪೋಸ್ಟ್‌ಗಳು ಯಾವುದೇ ಅಕ್ರಮ ಮದ್ಯ, ಮಾದಕವಸ್ತು, ನಗದು ಮತ್ತು ಉಚಿತ ಉಡುಗೊರೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸುತ್ತಿವೆ. ಸಮುದ್ರ ಮತ್ತು ವಾಯು ಮಾರ್ಗಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲಾಗಿದೆ. 
 
11. ವೃದ್ಧರು ಮತ್ತು ವಿಶೇಷಚೇತನರು ಸೇರಿದಂತೆ ಪ್ರತಿಯೊಬ್ಬ ಮತದಾರರು ಸುಲಭವಾಗಿ ಮತದಾನ ಮಾಡುವುದನ್ನು ಖಚಿತಪಡಿಸಿಕೊಳ್ಳಲು ನೀರು, ಶೆಡ್, ಶೌಚಾಲಯಗಳು,   ರಾಂಪ್ ಗಳು, ಸ್ವಯಂಸೇವಕರು, ಗಾಲಿಕುರ್ಚಿಗಳು ಮತ್ತು ವಿದ್ಯುತ್‌ನಂತಹ ಅಗತ್ಯ ಕನಿಷ್ಠ ಸೌಲಭ್ಯಗಳನ್ನು ಒದಗಿಸಲಾಗಿದೆ. 
 
12. ಎಲ್ಲಾ ನೋಂದಾಯಿತ ಮತದಾರರಿಗೆ ಮತದಾರರ ಮಾಹಿತಿ ಚೀಟಿಗಳನ್ನು ವಿತರಿಸಲಾಗಿದೆ. ಈ ಚೀಟಿಗಳು ಸುಗಮಗೊಳಿಸುವ ಕ್ರಮವಾಗಿ ಮತ್ತು ಮತದಾನಕ್ಕೆ ಆಯೋಗದ ಆಹ್ವಾನವಾಗಿ ಕಾರ್ಯನಿರ್ವಹಿಸುತ್ತವೆ. 
 
13. ಮತದಾರರು ತಮ್ಮ ಮತದಾನ ಕೇಂದ್ರದ ವಿವರಗಳನ್ನು ಮತ್ತು ಮತದಾನದ ದಿನಾಂಕವನ್ನು ಈ ಲಿಂಕ್ ಮೂಲಕ ಪರಿಶೀಲಿಸಬಹುದು https://electoralsearch.eci.gov.in/  
 
14.    ಮತದಾನ ಕೇಂದ್ರಗಳಲ್ಲಿ ಗುರುತಿನ ಪರಿಶೀಲನೆಗಾಗಿ ಮತದಾರರ ಗುರುತಿನ ಚೀಟಿ (ಇಪಿಐಸಿ) ಹೊರತುಪಡಿಸಿ 12 ಪರ್ಯಾಯ ದಾಖಲೆಗಳ ಪಟ್ಟಿಯನ್ನು ಆಯೋಗವು ಒದಗಿಸಿದೆ. ಮತದಾರರ ಪಟ್ಟಿಯಲ್ಲಿ ಮತದಾರರು ಹೆಸರು ನೋಂದಾಯಿಸಿದ್ದರೆ, ಈ ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ತೋರಿಸಿ ಮತದಾನ ಮಾಡಬಹುದು. ಪರ್ಯಾಯ ಗುರುತಿನ ದಾಖಲೆಗಳಿಗಾಗಿ ಚುನಾವಣಾ ಆಯೋಗದ ಆದೇಶಕ್ಕೆ ಈ ಲಿಂಕ್ಅನ್ನು ನೋಡಿರಿ: https://www.eci.gov.in/eci-backend/public/api/download?url=LMAhAK6sOPBp%2FNFF0iRfXbEB1EVSLT41NNLRjYNJJP1KivrUxbfqkDatmHy12e%2FzBiU51zPFZI5qMtjV1qgjFsi8N4zYcCRaQ2199MM81QYarA39BJWGAJqpL2w0Jta9CSv%2B1yJkuMeCkTzY9fhBvw%3D%3D 
 
15.    ಲೋಕಸಭೆ 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿನ ಮತದಾರರ ಮತದಾನದ ಮಾಹಿತಿಯು ಈ ಕೆಳಗಿನ ಲಿಂಕ್ ಗಳಲ್ಲಿ ಲಭ್ಯವಿದೆ: https://old.eci.gov.in/files/file/13579-13-pc-wise-voters-turn-out/
 
16.    ಮೂರನೇ ಹಂತದಿಂದ, ಪ್ರತಿ ಹಂತದಲ್ಲಿ ಒಟ್ಟಾರೆ ಅಂದಾಜು ಮತದಾನವನ್ನು ನೈಜ-ಸಮಯದಲ್ಲಿ ಪ್ರದರ್ಶಿಸಲು ಮತದಾರರ ಮತದಾನದ ಅಪ್ಲಿಕೇಶನ್-ಅನ್ನು ಹೊಸ ವೈಶಿಷ್ಟ್ಯದೊಂದಿಗೆ ಅಪ್‌ಗ್ರೇಡ್ ಮಾಡಲಾಗಿದೆ. ಹಂತ-ವಾರು / ರಾಜ್ಯವಾರು / ವಿಧಾನಸಭಾ ಕ್ಷೇತ್ರವಾರು / ಲೋಕಸಭಾ ಕ್ಷೇತ್ರವಾರು ಅಂದಾಜು ಮತದಾನದ ಮಾಹಿತಿಯು ಮತದಾನದ ದಿನದಂದು ಸಂಜೆ 7 ಗಂಟೆಯವರೆಗೆ ಎರಡು ಗಂಟೆಗಳ ಆಧಾರದ ಮೇಲೆ VoterPolling App ನಲ್ಲಿ ಲೈವ್ ಆಗಿ ಲಭ್ಯವಿದೆ. ಆ ನಂತರ ಮತಗಟ್ಟೆಗಳ ಆಗಮನದ ನಂತರ  ಅದನ್ನು ನಿರಂತರವಾಗಿ ನವೀಕರಿಸಲಾಗುತ್ತದೆ ಎನ್ನುವುದು ವಿಶೇಷವಾಗಿ ಗಮನಿಸಬಹುದಾಗಿದೆ.


 *****



(Release ID: 2020391) Visitor Counter : 81