ಚುನಾವಣಾ ಆಯೋಗ

ಸುಪ್ರೀಂ ಕೋರ್ಟ್‌ ಆದೇಶದನ್ವಯ ಸಿಂಬಲ್‌ ಲೋಡಿಂಗ್ ಯೂನಿಟ್‌ ಗಳ ನಿರ್ವಹಣೆ ಮತ್ತು ಭದ್ರತೆಗೆ ಚುನಾವಣಾ ಆಯೋಗದಿಂದ ನಿರ್ದೇಶನ

Posted On: 01 MAY 2024 4:18PM by PIB Bengaluru

ಮಾನ್ಯ ಸರ್ವೋಚ್ಚ ನ್ಯಾಯಾಲಯ, ರಿಟ್‌ ಅರ್ಜಿ (ಸಿವಿಲ್)‌ ಸಂಖ್ಯೆ 434/2024 ರಲ್ಲಿ ನೀಡಿರುವ ತೀರ್ಪಿನ ಅನ್ವಯ ಸಿಂಬಲ್‌ ಲೋಡಿಂಗ್‌ ಯೂನಿಟ್‌ (ಎಸ್‌ ಎಲ್‌ ಯು – ಅಭ್ಯರ್ಥಿಗಳ ಸಂಕೇತಗಳನ್ನು ವಿವಿಪ್ಯಾಟ್‌ ಗೆ ರವಾನಿಸುವ ಘಟಕ) ಗಳ ನಿರ್ವಹಣೆ ಮತ್ತು ಸುಭದ್ರ ಸಂಗ್ರಹದ ಸಂಬಂಧ ಭಾರತೀಯ ಚುನಾವಣಾ ಆಯೋಗ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ಎಲ್ಲಾ ಮುಖ್ಯ ಚುನಾವಣಾಧಿಕಾರಿಗಳು ಈ ಎಸ್ ಎಲ್‌ ಯು ಗಳನ್ನು ನಿರ್ವಹಿಸಲು ಮತ್ತು ಭದ್ರವಾಗಿ ಇರಿಸಲು ಪ್ರಕಟಿಸಿರುವ ಹೊಸ ಮಾರ್ಗಸೂಚಿಗನುಗುಣವಾಗಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ  ಸೂಚಿಸಲಾಗಿದೆ. 

ಸುಪ್ರೀಂ ಕೋರ್ಟ್ ನಿರ್ದೇಶನದ ಈ ಕಡ್ಡಾಯ ಪರಿಷ್ಕೃತ ನಿಯಮಗಳು 2024ರ ಮೇ 1 ಮತ್ತು ನಂತರ ವಿವಿಪ್ಯಾಟ್‌ ಗಳಲ್ಲಿ ಸಂಕೇತಗಳನ್ನು ತುಂಬಿಸುವ ಪ್ರಕ್ರಿಯೆ ಪೂರ್ಣಗೊಳ್ಳುವ ಎಲ್ಲಾ ಪ್ರಕರಣಗಳಿಗೂ ಅನ್ವಯವಾಗಲಿದೆ. 

ಎಸ್‌ ಒ ಪಿ (ಕಾರ್ಯವಿಧಾನ ಮಾನದಂಡಗಳು)/ ನಿಯಮಗಳು ಇಲ್ಲಿ ಲಭ್ಯ:

https://www.eci.gov.in/eci-backend/public/api/download



(Release ID: 2019375) Visitor Counter : 39