ಚುನಾವಣಾ ಆಯೋಗ
azadi ka amrit mahotsav

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲು ಭಾರತವು ಸಜ್ಜಾಗಿದೆ: ಸಾರ್ವತ್ರಿಕ ಚುನಾವಣೆ 2024 ರ ಮತದಾನವು ನಾಳೆ ಪ್ರಾರಂಭವಾಗುತ್ತದೆ


ಎರಡು ವರ್ಷಗಳ ಕಠಿಣ ಸಿದ್ಧತೆಗಳ ಅಂತಿಮ ಘಟ್ಟ

ಮನೆಯಿಂದ ಹೊರಗೆ ಬಂದು ಮತದಾನ ಮಾಡಲು ಮತದಾರರಿಗೆ ಆಯೋಗವು ಕರೆ ನೀಡಿದೆ

ಮೊದಲ ಹಂತದಲ್ಲಿ 102 ಲೋಕಸಭಾ ಸ್ಥಾನಗಳು, 16.63 ಕೋಟಿ ಮತದಾರರು, 1.87 ಲಕ್ಷ ಮತಗಟ್ಟೆಗಳು, 18 ಲಕ್ಷ ಸಿಬ್ಬಂದಿ

Posted On: 18 APR 2024 5:13PM by PIB Bengaluru

ಜಗತ್ತಿನ ಯಾವುದೇ ರಾಷ್ಟ್ರ ಕಂಡಿರದ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾದ 18ನೇ ಲೋಕಸಭೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭೆಗಳಿಗೆ ನಾಳೆಯಿಂದ ಮೊದಲ ಹಂತದಿಂದ  ಆರಂಭವಾಗಲಿರುವ ಚುನಾವಣೆಗೆ ಮತದಾರರನ್ನು ಸ್ವಾಗತಿಸಲು ಭಾರತ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಮುಕ್ತ, ನ್ಯಾಯಯುತ, ಶಾಂತಿಯುತ, ಸುಲಭಲಭ್ಯವಾದ, ಭಾಗವಹಿಸುವ ಮತ್ತು ಪ್ರಚೋದನಾ ಮುಕ್ತ ಚುನಾವಣೆಯನ್ನು ನಡೆಸಲು ಆಯೋಗವು ತನ್ನ ರಾಜಿಯಾಗದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಆಯೋಗ ಮತ್ತು ಅದರ ತಂಡಗಳು, ಕಳೆದ ಎರಡು ವರ್ಷಗಳಲ್ಲಿ ಭಾರತದ ಮತದಾರರಿಗೆ ಅತ್ಯುತ್ತಮವಾದ ಅನುಭವವನ್ನು ನೀಡಲು ಅಗತ್ಯವಾದ ಕಠಿಣ ಪರಿಶ್ರಮ ಮತ್ತು ನಿಖರವಾದ ಮಧ್ಯಸ್ಥಿಕೆಗಳನ್ನು ಮಾಡಿದೆ. ಹಲವಾರು ಸಮಾಲೋಚನೆಗಳು, ವಿಮರ್ಶೆಗಳು, ಕ್ಷೇತ್ರಗಳಿಗೆ ಭೇಟಿಗಳು, ಅಧಿಕಾರಿಗಳ ವ್ಯಾಪಕ ತರಬೇತಿ ಮತ್ತು ಹೊಸ ಮತ್ತು ಸಮಯಕ್ಕೆ ಸೂಕ್ತವಾದ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ನಿರ್ಮಿಸಿದ ನಂತರ ಚುನಾವಣೆಯು ಬಂದಿದೆ. ಇದು ದೇಶಾದ್ಯಂತ ದೊಡ್ಡ ಪ್ರಮಾಣದ ಏಜೆನ್ಸಿಗಳು, ಸಂಸ್ಥೆಗಳೊಂದಿಗೆ ಸಹಯೋಗವನ್ನು ಸಹ ಒಳಗೊಂಡಿದೆ. ಮುಖ್ಯ ಚುನಾವಣಾ ಆಯುಕ್ತರಾದ  ಶ್ರೀ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖಬೀರ್ ಸಿಂಗ್ ಸಂಧು ಅವರನ್ನು ಒಳಗೊಂಡ ಆಯೋಗವು 2024ರ ಸುಗಮವಾದ ಸಾರ್ವತ್ರಿಕ ಚುನಾವಣೆಯ 1 ನೇ ಹಂತಕ್ಕಾಗಿ ಇಂದು ಮಧ್ಯಾಹ್ನ 12 ಗಂಟೆಗೆ ಚುನಾವಣಾ ಸಿದ್ಧತೆಗಳಿಗೆ ಅಂತಿಮ ಸ್ಪರ್ಶ ನೀಡಿತು. ಉಳಿದ 6 ಹಂತದ ಚುನಾವಣೆಗಳು ಜೂನ್ 1 ರ ವರೆಗೆ ಮುಂದುವರಿಯುತ್ತದೆ. ಸುಮಾರು 97 ಕೋಟಿ ಮತದಾರರು ಮತ ಚಲಾಯಿಸಲು ಕಾಯುತ್ತಿದ್ದಾರೆ. ಮತ ಎಣಿಕೆಯು ಜೂನ್ 4ರಂದು ನಿಗದಿಯಾಗಿದೆ.

ಮತದಾರರು  ತಮ್ಮ ಕರ್ತವ್ಯ ನಿರ್ವಹಿಸುವ ಸಮಯ ಇದಾಗಿದೆ ಎಂದು ಆಯೋಗವು ಪರಿಗಣಿಸುತ್ತದೆ. ಮತದಾರರು ತಮ್ಮ ಮನೆಯಿಂದ ಹೊರಬಂದು, ಮತಗಟ್ಟೆಗೆ ತೆರಳಿ ಜವಾಬ್ದಾರಿ ಮತ್ತು ಹೆಮ್ಮೆಯಿಂದ ಮತ ಚಲಾಯಿಸುವಂತೆ   ಮನವಿ ಮಾಡಿದೆ.  ದೇಶದಾದ್ಯಂತ ಪ್ರಸಾರವಾದ  ದೂರದರ್ಶನದ ಸಂದೇಶದಲ್ಲಿ ಮುಖ್ಯ ಚುನಾವಣಾ ಆಯುಕ್ತ  (ಸಿಇಸಿ ) ಶ್ರೀ ರಾಜೀವ್ ಕುಮಾರ್ ಅವರು ಎಲ್ಲಾ ಮತದಾರರಿಗೆ ತಪ್ಪದೆ ಮತ ಚಲಾಯಿಸುವಂತೆ ಮನವಿ ಮಾಡಿದರು. ಸಿಇಸಿ ಶ್ರೀ ರಾಜೀವ್ ಕುಮಾರ್ ಅವರ ಸಂದೇಶವನ್ನು ಇಲ್ಲಿ ಆಲಿಸಬಹುದು -

ಹಿಂದಿಯಲ್ಲಿ: https://www.youtube.com/watch?v=DDdiNLMWnVk

ಇಂಗ್ಲಿಷ್ನಲ್ಲಿ: https://www.youtube.com/watch?v=CIuuKOPPcHU

ಹಂತ 1 ವಿವರಗಳು : 

        1. 2024 ರ ಸಾರ್ವತ್ರಿಕ ಚುನಾವಣೆಯ ಹಂತ-1 ಕ್ಕೆ ಅಂದರೆ ಏಪ್ರಿಲ್ 19, 2024 ರಂದು 102 ಸಂಸದೀಯ ಕ್ಷೇತ್ರಗಳಿಗೆ (ಸಾಮಾನ್ಯ- 73; ಎಸ್ ಟಿ- 11; ಎಸ್ ಸಿ -18) 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು 92 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅರುಣಾಚಲ ಮತ್ತು ಸಿಕ್ಕಿಂನಲ್ಲಿ ರಾಜ್ಯ ವಿಧಾನಸಭೆ ಮತದಾನ   ನಡೆಯಲಿದೆ. ಇದು ಎಲ್ಲಾ ಹಂತಗಳಲ್ಲಿನ ಅತಿ ಹೆಚ್ಚು ಸಂಸದೀಯ ಕ್ಷೇತ್ರಗಳನ್ನು ಹೊಂದಿದೆ. ಮತದಾನವು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಸಂಜೆ 6 ಗಂಟೆಗೆ ಮುಕ್ತಾಯವಾಗುತ್ತದೆ. (ಕೆಲವು ಮತದಾನ ಕೇಂದ್ರಗಳಲ್ಲಿ ಮತದಾನ ಮುಕ್ತಾಯದ ಸಮಯವು  ಭಿನ್ನವಾಗಿರಬಹುದು)
           2. 18 ಲಕ್ಷಕ್ಕೂ ಅಧಿಕ ಮತಗಟ್ಟೆ ಅಧಿಕಾರಿಗಳು 1.87 ಲಕ್ಷ ಮತಗಟ್ಟೆಗಳಲ್ಲಿ 16.63 ಕೋಟಿ ಮತದಾರರನ್ನು ಸ್ವಾಗತಿಸಲಿದ್ದಾರೆ.
           3. ಮತದಾರರಲ್ಲಿ 8.4 ಕೋಟಿ ಪುರುಷರು ಸೇರಿದ್ದಾರೆ; 8.23 ಕೋಟಿ ಮಹಿಳೆಯರು ಮತ್ತು 11,371 ತೃತೀಯ ಲಿಂಗ ಮತದಾರರು.
           4. 35.67 ಲಕ್ಷ ಮೊದಲ ಬಾರಿಗೆ ಮತದಾರರು ತಮ್ಮ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ. ಜೊತೆಗೆ, 20-29 ವರ್ಷ ವಯಸ್ಸಿನ 3.51 ಕೋಟಿ ಯುವ ಮತದಾರರಿದ್ದಾರೆ.
           5. 1625 ಅಭ್ಯರ್ಥಿಗಳು (ಪುರುಷ- 1491 ; ಮಹಿಳೆಯರು-134) ಕಣದಲ್ಲಿದ್ದಾರೆ.
           6. 41 ಹೆಲಿಕಾಪ್ಟರ್ಗಳು, 84 ವಿಶೇಷ ರೈಲುಗಳು ಮತ್ತು ಸುಮಾರು 1 ಲಕ್ಷ ವಾಹನಗಳನ್ನು ಮತದಾನ ಮತ್ತು ಭದ್ರತಾ ಸಿಬ್ಬಂದಿಗೆ ನಿಯೋಜಿಸಲಾಗಿದೆ.

ಶಾಂತಿ ಮತ್ತು ಶುದ್ಧತೆಯನ್ನು ಖಾತರಿಪಡಿಸುವುದು

          7. ಚುನಾವಣೆಯನ್ನು ಶಾಂತಿಯುತವಾಗಿ ಮತ್ತು ಸುಗಮವಾಗಿ ನಡೆಸಲು ಆಯೋಗವು ಹಲವಾರು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ. ಮತದಾನ ಪ್ರಕ್ರಿಯೆಯ ಭದ್ರತೆಗಾಗಿ ಸಾಕಷ್ಟು ಕೇಂದ್ರ ಭದ್ರತಾ ಪಡೆಗಳನ್ನು ಮತಗಟ್ಟೆಗಳಲ್ಲಿ ನಿಯೋಜಿಸಲಾಗಿದೆ.
              8. ಎಲ್ಲಾ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರ್ ಗಳನ್ನು ನಿಯೋಜಿಸುವುದರ ಜೊತೆಗೆ 50% ಕ್ಕಿಂತ ಹೆಚ್ಚು ಮತದಾನ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ.
             9. 361 ವೀಕ್ಷಕರು (127 ಸಾಮಾನ್ಯ ವೀಕ್ಷಕರು, 67 ಪೊಲೀಸ್ ವೀಕ್ಷಕರು, 167 ವೆಚ್ಚ ವೀಕ್ಷಕರು) ಈಗಾಗಲೇ ತಮ್ಮ ಕ್ಷೇತ್ರಗಳನ್ನು ಮತದಾನದ ದಿನಗಳಿಗಿಂತ ಮೊದಲು ತಲುಪಿದ್ದಾರೆ. ಅವರು ಆಯೋಗದ ಕಣ್ಣುಗಳು ಮತ್ತು ಕಿವಿಗಳಾಗಿ ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಾರೆ. ಹೆಚ್ಚುವರಿಯಾಗಿ, ಕೆಲವು ರಾಜ್ಯಗಳಲ್ಲಿ ವಿಶೇಷ ವೀಕ್ಷಕರನ್ನು ನಿಯೋಜಿಸಲಾಗಿದೆ.
           10. ಒಟ್ಟು 4627 ಫ್ಲೈಯಿಂಗ್ ಸ್ಕ್ವಾಡ್ಗಳು, 5208 ಅಂಕಿಅಂಶಗಳ ಕಣ್ಗಾವಲು ತಂಡಗಳು, 2028 ವೀಡಿಯೊ ಕಣ್ಗಾವಲು ತಂಡಗಳು ಮತ್ತು 1255 ವೀಡಿಯೋ ವೀಕ್ಷಣಾ ತಂಡಗಳು ಮತದಾರರಿಗೆ ಯಾವುದೇ ರೀತಿಯ ಪ್ರಚೋದನೆಯನ್ನು ಕಟ್ಟುನಿಟ್ಟಾಗಿ ಮತ್ತು ತ್ವರಿತವಾಗಿ ನಿಭಾಯಿಸಲು ಇಪ್ಪತ್ತನಾಲ್ಕು ತಾಸು ಕಣ್ಗಾವಲು ಇರಿಸುತ್ತಿವೆ.
        11. ಒಟ್ಟು 1374 ಅಂತರ-ರಾಜ್ಯ ಮತ್ತು 162 ಅಂತರಾಷ್ಟ್ರೀಯ ಗಡಿ ಚೆಕ್ ಪೋಸ್ಟ್ಗಳು ಯಾವುದೇ ಅಕ್ರಮ ಮದ್ಯ, ಡ್ರಗ್ಸ್, ನಗದು ಮತ್ತು  ಉಚಿತ ಕೊಡುಗೆಗಳ ಸಾಗಾಟದ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸುತ್ತಿವೆ. ಸಮುದ್ರ ಮತ್ತು ವಾಯು ಮಾರ್ಗಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲಾಗಿದೆ.

ಮತದಾರರ ಅನುಕೂಲ ಮತ್ತು ಬೆಂಬಲ
         12. 14.14 ಲಕ್ಷಕ್ಕೂ ಹೆಚ್ಚು ನೋಂದಾಯಿತ 85+ ವರ್ಷ ವಯಸ್ಸಿನವರು ಮತ್ತು 13.89 ಲಕ್ಷ ವಿಶೇಷಚೇತನ ಮತದಾರರು 102 ಕ್ಷೇತ್ರಗಳಲ್ಲಿ  ತಮ್ಮ ಮನೆಯಿಂದಲೇ ಮತ ಚಲಾಯಿಸುವ ಆಯ್ಕೆಯನ್ನು ಒದಗಿಸಲಾಗಿದೆ.  ಐಚ್ಛಿಕ ಮನೆಯಿಂದಲೇ  ಮತದಾನದ ಸೌಲಭ್ಯಕ್ಕೆ ಈಗಾಗಲೇ ಅಪಾರ ಮೆಚ್ಚುಗೆ ಮತ್ತು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
       13. 85 + ಮತ್ತು ವಿಶೇಷಚೇತನ ಮತದಾರರಲ್ಲಿ ಮತ್ತು ಮತದಾನ ಕೇಂದ್ರಗಳಿಗೆ ಬರಲು ನಿರ್ಧರಿಸಿದವರಿಗೆ ಪಿಕ್ ಮತ್ತು ಡ್ರಾಪ್ ಸೌಲಭ್ಯ, ಸೂಚನಾ ಫಲಕಗಳು, ಇವಿಎಂನಲ್ಲಿ ಬ್ರೈಲ್ ಚಿಹ್ನೆಗಳು, ಸ್ವಯಂಸೇವಕರು ಮುಂತಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಪಿ ಡಬ್ಲ್ಯೂ ಡಿ ಮತದಾರರು ಇಸಿಐ ಸಕ್ಷಮ್ ಆಪ್ ಮೂಲಕ ಗಾಲಿಕುರ್ಚಿಗಳ ಸೌಲಭ್ಯಗಳನ್ನು ಕಾಯ್ದಿರಿಸಬಹುದು.
       14. ವೃದ್ಧರು ಮತ್ತು ವಿಶೇಷಚೇತನರು ಸೇರಿದಂತೆ ಪ್ರತಿಯೊಬ್ಬ ಮತದಾರರು ತಮ್ಮ ಮತವನ್ನು ಸುಲಭವಾಗಿ ಚಲಾಯಿಸುವುದನ್ನು ಖಚಿತಪಡಿಸಲು ನೀರು, ಶೆಡ್, ಶೌಚಾಲಯಗಳು,  ರಾಂಪ್ ಗಳು, ಸ್ವಯಂಸೇವಕರು, ಗಾಲಿಕುರ್ಚಿಗಳು ಮತ್ತು ವಿದ್ಯುಚ್ಛಕ್ತಿಯಂತಹ ಕನಿಷ್ಠ ಸೌಲಭ್ಯಗಳು ಸ್ಥಳದಲ್ಲಿರುತ್ತವೆ.
           15. ಸ್ಥಳೀಯ ವಿಷಯಗಳೊಂದಿಗೆ 102 ಕೇಂದ್ರಗಳಲ್ಲಿ  ಮಾದರಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.   5000 ಕ್ಕೂ ಹೆಚ್ಚು ಮತದಾನ ಕೇಂದ್ರಗಳನ್ನು ಭದ್ರತಾ ಸಿಬ್ಬಂದಿ ಸೇರಿದಂತೆ ಮಹಿಳೆಯರು ಮತ್ತು 1000 ಕ್ಕೂ ಹೆಚ್ಚು ಮತದಾನ ಕೇಂದ್ರಗಳನ್ನು  ವಿಶೇಷಚೇತನರು (PwDs) ಸಂಪೂರ್ಣವಾಗಿ ನಿರ್ವಹಿಸುತ್ತಾರೆ.

          16. ಮತದಾರರ ಮಾಹಿತಿ ಚೀಟಿ ಗಳನ್ನು ಎಲ್ಲಾ ನೋಂದಾಯಿತ ಮತದಾರರಿಗೆ ವಿತರಿಸಲಾಗಿದೆ. ಈ ಚೀಟಿಗಳು ಮತದಾನ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಮಾತ್ರವಲ್ಲದೆ ಆಯೋಗಕ್ಕೆ ಬಂದು ಮತ ಚಲಾಯಿಸಲು ಆಹ್ವಾನವಾಗಿಯೂ ಕಾರ್ಯನಿರ್ವಹಿಸುತ್ತವೆ.

          17. ಮತದಾರರು ತಮ್ಮ ಮತದಾನ ಕೇಂದ್ರದ ವಿವರಗಳನ್ನು ಮತ್ತು ಮತದಾನದ ದಿನಾಂಕವನ್ನು ಈ ಲಿಂಕ್ ಮೂಲಕ ಪರಿಶೀಲಿಸಬಹುದು https://electoralsearch.eci.gov.in/
      18. ಆಯೋಗವು ಮತದಾನ ಕೇಂದ್ರಗಳಲ್ಲಿ ಗುರುತಿನ ಪರಿಶೀಲನೆಗಾಗಿ ಮತದಾರರ ಗುರುತಿನ ಚೀಟಿ (EPIC) ಹೊರತುಪಡಿಸಿ 12 ಪರ್ಯಾಯ ದಾಖಲೆಗಳನ್ನು ಒದಗಿಸಿದೆ. ಮತದಾರರ ಪಟ್ಟಿಯಲ್ಲಿ ಮತದಾರರು ಹೆಸರು ನೋಂದಾಯಿಸಿದ್ದರೆ, ಈ ದಾಖಲೆಗಳಲ್ಲಿ ಯಾವುದಾದರೂ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು.

ಮತದಾರರಿಗೆ ಮಾಹಿತಿ

         19. ಮತದಾರರು ತಮ್ಮ ಮೇಲೆ ಪ್ರಭಾವ ಬೀರುವ ಅಥವಾ ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡುವ ಸುಳ್ಳು ಮಾಹಿತಿ ಮತ್ತು ನಕಲಿ ಸುದ್ದಿಗಳ ಬಗ್ಗೆ ಜಾಗರೂಕರಾಗಿರಬೇಕು, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಮಾಹಿತಿಗಳ ಬಗ್ಗೆ  ಎಚ್ಚರಿಕೆ ವಹಿಸಬೇಕು. https://mythvsreality.eci.gov.in/ ನಲ್ಲಿ ಲಭ್ಯವಿರುವ ಆಯೋಗದ ʼಮಿಥ್ ವರ್ಸಸ್ ರಿಯಾಲಿಟಿ ರಿಜಿಸ್ಟರ್ʼ ನಲ್ಲಿ ಎಲ್ಲಾ ಪ್ರಶ್ನೆಗಳು, ಸ್ಪಷ್ಟೀಕರಣಗಳು ಮತ್ತು ತಪ್ಪುಗ್ರಹಿಕೆಗಳನ್ನು ವಿವರಿಸಲಾಗಿದೆ.   ಮತದಾರರು ಈ ಪ್ರಮಾಣೀಕೃತ ಮತ್ತು ವಿಶ್ವಾಸಾರ್ಹ ಸಂಪನ್ಮೂಲಗಳನ್ನು ಮತದಾನದ ಮೊದಲು ಪರಿಶೀಲಿಸಲು ವಿನಂತಿ.
      20. ಇಸಿಐ ಕೆಐಸಿ ಅಪ್ಲಿಕೇಶನ್ ಮತ್ತು ಅಭ್ಯರ್ಥಿ ಅಫಿಡವಿಟ್ ಪೋರ್ಟಲ್  http://(https://affidavit.eci.gov.in/) ಮತದಾರರ ಮಾಹಿತಿಗಾಗಿ ಅವರ ಆಸ್ತಿಗಳು, ಹೊಣೆಗಾರಿಕೆಗಳು, ಶೈಕ್ಷಣಿಕ ಹಿನ್ನೆಲೆ ಮತ್ತು ಅಪರಾಧದ ಪೂರ್ವಾಪರಗಳು ಸೇರಿದಂತೆ ಸ್ಪರ್ಧಿಸುವ ಅಭ್ಯರ್ಥಿಗಳ ಎಲ್ಲಾ ವಿವರಗಳನ್ನು ಒದಗಿಸುತ್ತದೆ.

ಮಾಧ್ಯಮದವರಿಗೆ ಸೌಲಭ್ಯಗಳು

      21. ಆಯೋಗವು ಈ 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 47,000 ಅಧಿಕೃತ ಪತ್ರಗಳನ್ನು ನೀಡುವುದರೊಂದಿಗೆ ಮತಗಟ್ಟೆಗಳಲ್ಲಿ ಮತದಾನದ ಪ್ರಸಾರಕ್ಕಾಗಿ ಮಾಧ್ಯಮದವರಿಗೆ ಅನುಕೂಲ ಕಲ್ಪಿಸಿದೆ. ಅಂತರಾಷ್ಟ್ರೀಯ ಮಾಧ್ಯಮಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.
     22. ಮಾಧ್ಯಮಗಳು ಮತ್ತು ಎಲ್ಲಾ ಮಧ್ಯಸ್ಥಗಾರರು ಮತದಾನದ ದಿನದಂದು ಇಸಿಐ  ವೋಟರ್ ಟರ್ನ್ಔಟ್ ಅಪ್ಲಿಕೇಶನ್ ಮೂಲಕ ಮತದಾರರ ಮತದಾನವನ್ನು ಪರಿಶೀಲಿಸಬಹುದು, ಅದನ್ನು ನಿಯಮಿತವಾಗಿ ನವೀಕರಿಸಲಾಗುತ್ತದೆ.
   23. 2024 ರ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದ ಎಲ್ಲಾ ಸಂಬಂಧಿತ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಒದಗಿಸಲು ಆಯೋಗವು 2024 ರ ಚುನಾವಣೆಗಳಿಗಾಗಿ ಮೀಸಲಾದ ಜಾಲತಾಣವನ್ನು ಪ್ರಾರಂಭಿಸಿದೆ  - https://elections24.eci.gov.in/

ಹಿನ್ನೆಲೆ

    24. ಕಳೆದ ಎರಡು ವರ್ಷಗಳಲ್ಲಿ, ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಲು ಆಯೋಗವು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡಿದೆ. ಆಯೋಗವು ರಾಜಕೀಯ ಪಕ್ಷಗಳು, ಜಾರಿ ಸಂಸ್ಥೆಗಳು, ಎಲ್ಲಾ ಜಿಲ್ಲಾ ಅಧಿಕಾರಿಗಳು, ಎಸ್ಎಸ್ಪಿಗಳು/ಎಸ್ಪಿಗಳು, ವಿಭಾಗೀಯ ಆಯುಕ್ತರು, ರೇಂಜ್ ಐಜಿಗಳು, ಸಿಎಸ್/ಡಿಜಿಪಿಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಇತರ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದೆ.
    25. ಮುಖ್ಯ ಚುನಾವಣಾ ಅಧಿಕಾರಿಗಳು ಮತ್ತು ಅವರ ತಂಡಗಳೊಂದಿಗೆ ಅನೇಕ ಸಮ್ಮೇಳನಗಳು ಮತ್ತು ಪರಿಶೀಲನಾ ಸಭೆಗಳು ಯಾವುದೇ ಅಂತರವನ್ನು ಕಂಡು ಹಿಡಿಯಲು ಮತ್ತು ಅವುಗಳನ್ನು ತುಂಬುವ ಮಾರ್ಗಗಳನ್ನು ಕಂಡುಹಿಡಿಯಲು ನಡೆದಿವೆ. ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ, ನಿರ್ದಿಷ್ಟ ಸೂಕ್ಷ್ಮ  ಕ್ಷೇತ್ರಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಅಗತ್ಯತೆಗಳ ಪ್ರಮಾಣ ಸೇರಿದಂತೆ ಚುನಾವಣಾ ವ್ಯವಸ್ಥೆಯ ಒಟ್ಟಾರೆ ಸಿದ್ಧತೆಯನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳ ತಂಡವು ವಿವಿಧ ರಾಜ್ಯಗಳಿಗೆ ಭೇಟಿ ನೀಡಿತು.
    26. 2024 ರ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಮತ್ತು ಪ್ರಚೋದನಾ ಮುಕ್ತ ಚುನಾವಣೆ ನಡೆಸಲು ಪರಿಶೀಲನೆಯ ಭಾಗವಾಗಿ, ಕಾನೂನು ಸುವ್ಯವಸ್ಥೆ, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ, ವಶಪಡಿಸಿಕೊಳ್ಳುವಿಕೆ ಮತ್ತು ಅಂತರ ರಾಜ್ಯ ಮತ್ತು ಅಂತರಾಷ್ಟ್ರೀಯ ಗಡಿಗಳಲ್ಲಿ ಕಟ್ಟುನಿಟ್ಟಾದ ಜಾಗರೂಕತೆಯನ್ನು ಪರಿಶೀಲಿಸಲು ಮತ್ತು ನಿರ್ಣಯಿಸಲು ಭಾರತದ ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರ್ಣಾಯಕ ಸಭೆಯನ್ನು ಕರೆದಿತ್ತು.  ಸಂಯೋಜಿತ ಪರಿಶೀಲನೆಯ ಉದ್ದೇಶವು ಗಡಿಗಳನ್ನು ಕಾಪಾಡುವ ಕೇಂದ್ರ ಏಜೆನ್ಸಿಗಳ ಜೊತೆಗೆ ನೆರೆಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ  ಅಧಿಕಾರಿಗಳ ನಡುವೆ ತಡೆರಹಿತ ಸಮನ್ವಯ ಮತ್ತು ಸಹಕಾರಕ್ಕಾಗಿ ಎಲ್ಲಾ ಸಂಬಂಧಿತ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ತರುವುದಾಗಿತ್ತು. ಆಯೋಗವು ವಿವರವಾಗಿ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಪರಿಶೀಲಿಸಿದೆ.
    27. ಸಾರ್ವತ್ರಿಕ ಚುನಾವಣೆಗಳ ಘೋಷಣೆಗೆ ಮುಂಚಿತವಾಗಿ, ಆಯೋಗವು 2100 ಕ್ಕೂ ಹೆಚ್ಚು ಸಾಮಾನ್ಯ, ಪೊಲೀಸ್ ಮತ್ತು ವೆಚ್ಚ ವೀಕ್ಷಕರಿಗೆ ಸಾರ್ವತ್ರಿಕ ಚುನಾವಣೆಗಳ ಬಗ್ಗೆ  ವಿವರಿಸಿದೆ.

   28.  ಪ್ರಸ್ತುತ 2024 ರ ಸಾರ್ವತ್ರಿಕ ಚುನಾವಣೆಗಳ ಮತದಾನಕ್ಕೆ ಮುಂಚಿತವಾಗಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಗುರಿಯೊಂದಿಗೆ, ಭಾರತದ ಚುನಾವಣಾ ಆಯೋಗವು (ECI) ಹಿಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಕಡಿಮೆ ಮತದಾನದ ಭಾಗವಹಿಸುವಿಕೆಯನ್ನು  ಕಂಡಿದ್ದ ಸಂಸದೀಯ ಕ್ಷೇತ್ರಗಳ  ಮೇಲೆ ಕೇಂದ್ರೀಕರಿಸುವ ಮೂಲಕ ಕಡಿಮೆ ಮತದಾನದ ಮತದಾರರ ಕುರಿತು ಸಮಾವೇಶವನ್ನು ನಡೆಸಿತು. 
    29. ಚುನಾವಣಾ ನಿರ್ವಹಣೆಯ ಎಲ್ಲಾ ಅಂಶಗಳ ಬಗ್ಗೆ ಸಂಪೂರ್ಣ ಚುನಾವಣಾ ವ್ಯವಸ್ಥೆಯ ಸಂಬಂಧಪಟ್ಟವರಿಗೆ   ತರಬೇತಿ ನೀಡಲಾಗಿದೆ. ಎಲ್ಲಾ ಸೂಚನೆಗಳು / ಕೈಪಿಡಿಗಳನ್ನು ಸಮಗ್ರವಾಗಿ ನವೀಕರಿಸಲಾಗಿದೆ ಮತ್ತು ಅವು ಇಸಿಐ ಜಾಲತಾಣದಲ್ಲಿ   ಲಭ್ಯವಿದೆ.

*****


(Release ID: 2018230) Visitor Counter : 232