ಚುನಾವಣಾ ಆಯೋಗ

ಲೋಕಸಭೆ 2024 ರ ಸಾರ್ವತ್ರಿಕ ಚುನಾವಣೆಯ 3 ನೇ ಹಂತದ ಗೆಜೆಟ್ ಅಧಿಸೂಚನೆಯನ್ನು ಏಪ್ರಿಲ್ 12, 2024 ರಂದು ಹೊರಡಿಸಲಾಗುವುದು


​​​​12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ 94 ಲೋಕಸಭಾ ಕ್ಷೇತ್ರಗಳು ಮತ್ತು ಮಧ್ಯಪ್ರದೇಶದ 29-ಬೆತುಲ್ ಪಿಸಿಯಲ್ಲಿ ಮತದಾನವು ಮೇ 7, 2024 ರಂದು ಮತದಾನಕ್ಕೆ ನಿಗದಿಯಾಗಿದೆ

ಎಲ್ಲಾ 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂತ 3 ರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಏಪ್ರಿಲ್ 19, 2024

Posted On: 11 APR 2024 2:04PM by PIB Bengaluru

2024 ರ ಸಾರ್ವತ್ರಿಕ ಚುನಾವಣೆಯ ಮೂರನೇ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಾಳೆ ಪ್ರಾರಂಭವಾಗಲಿವೆ. ಲೋಕಸಭೆ 2024 ರ ಸಾರ್ವತ್ರಿಕ ಚುನಾವಣೆಗಳಲ್ಲಿ 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 94 ಲೋಕಸಭಾ ಕ್ಷೇತ್ರಗಳಿಗೆ (PCs) ಗೆಜೆಟ್ ಅಧಿಸೂಚನೆಯನ್ನು ನಾಳೆ ಅಂದರೆ 12.04.2024 ರಂದು ಬಿಡುಗಡೆ ಮಾಡಲಾಗುತ್ತದೆ. ಪ್ರತ್ಯೇಕವಾಗಿ, ಮಧ್ಯಪ್ರದೇಶದ 29-ಬೆತುಲ್ (ಎಸ್‌ಟಿ) ಪಿಸಿಯಲ್ಲಿ ಮುಂದೂಡಲ್ಪಟ್ಟ ಚುನಾವಣೆಯ ಅಧಿಸೂಚನೆಯನ್ನು ಸಹ ನಾಳೆ ಹೊರಡಿಸಲಾಗುತ್ತದೆ.

ಮಧ್ಯಪ್ರದೇಶದ 29-ಬೆತುಲ್ (ST) PC ಯಲ್ಲಿ ಮುಂದೂಡಲ್ಪಟ್ಟ ಮತದಾನದ ಜೊತೆಗೆ ಈ 94 ಕ್ಷೇತ್ರಗಳಲ್ಲಿ ಗಳಲ್ಲಿ ಮತದಾನವು 07.05.2024 ರಂದು ನಡೆಯಲಿದೆ. 2ನೇ ಹಂತದಲ್ಲಿ ನಡೆಯಬೇಕಿದ್ದ ಮಧ್ಯಪ್ರದೇಶದ 29-ಬೆತುಲ್ (ಎಸ್‌ಟಿ) ಚುನಾವಣೆಯನ್ನು ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ನಿಧನದಿಂದಾಗಿ ಮುಂದೂಡಲಾಗಿದೆ.

ಹಂತ 3 ರಲ್ಲಿ ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು, ಗೋವಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆಯಲಿದೆ.

ಹಂತ 3 ರ ವೇಳಾಪಟ್ಟಿ ಹೀಗಿದೆ.

******



(Release ID: 2017724) Visitor Counter : 68