ಚುನಾವಣಾ ಆಯೋಗ

2024ರ ಲೋಕಸಭಾ ಚುನಾವಣೆಯ 2ನೇ ಹಂತದಲ್ಲಿ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 1,210 ಅಭ್ಯರ್ಥಿಗಳು ಸ್ಪರ್ಧೆ


2024ರ ಲೋಕಸಭೆ ಚುನಾವಣೆಯ 2ನೇ ಹಂತದಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 88 ಸ್ಥಾನಗಳಿಗೆ 2,633 ನಾಮಪತ್ರಗಳ ಸಲ್ಲಿಕೆ

Posted On: 09 APR 2024 11:27AM by PIB Bengaluru

2024ರ ಲೋಕಸಭೆ ಚುನಾವಣೆಯ 2ನೇ ಹಂತದ ಚುನಾವಣೆಗೆ ಔಟರ್ ಮಣಿಪುರ (ಹೊರವಲಯ ಕ್ಷೇತ್ರ)ದ ಸಂಸದೀಯ ಕ್ಷೇತ್ರಗಳಿಂದ 4 ಅಭ್ಯರ್ಥಿಗಳು ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 1,206 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಲೋಕಸಭೆ ಚುನಾವಣೆ 2024ರ 2ನೇ ಹಂತದಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಸ್ಥಾನಗಳಿಗೆ ಒಟ್ಟು 2,633 ನಾಮಪತ್ರಗಳು ಸಲ್ಲಿಕೆಯಾಗಿವೆ. ಎಲ್ಲಾ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 2ನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ 2024 ಏಪ್ರಿಲ್ 4 ಆಗಿತ್ತು. ಸಲ್ಲಿಕೆಯಾದ 2,633 ನಾಮಪತ್ರಗಳ ಪರಿಶೀಲನೆಯ ನಂತರ, 1,428 ನಾಮಪತ್ರಗಳು ಮಾನ್ಯವಾಗಿವೆ. ಎಲ್ಲಾ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ 2024 ಏಪ್ರಿಲ್ 08 ಆಗಿತ್ತು.

 

2ನೇ ಹಂತದಲ್ಲಿ ಕೇರಳವು 20 ಸಂಸದೀಯ ಕ್ಷೇತ್ರಗಳಿಂದ ಗರಿಷ್ಠ 500 ನಾಮಪತ್ರಗಳು ಸಲ್ಲಿಕೆಯಾಗಿವೆ. ನಂತರ ಕರ್ನಾಟಕದ 14 ಕ್ಷೇತ್ರಗಳಿಂದ 491 ನಾಮಪತ್ರಗಳು. ತ್ರಿಪುರಾದ ಒಂದು ಕ್ಷೇತ್ರದಿಂದ ಕನಿಷ್ಠ 14 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ. ಮಹಾರಾಷ್ಟ್ರದ 16-ನಾಂದೇಡ್ ಸಂಸದೀಯ ಕ್ಷೇತ್ರದಿಂದ ಗರಿಷ್ಠ 92 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ.

2024ರ ಲೋಕಸಭೆ ಚುನಾವಣೆಯ 2ನೇ ಹಂತದಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ವಿವರಗಳು:

 

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಕ್ಷೇತ್ರಗಳ ಸಂಖ್ಯೆ

ಸ್ವೀಕರಿಸಲಾದ ನಾಮಪತ್ರಗಳು

ಪರೀಶೀಲನೆ ನಂತರ ಮಾನ್ಯವಾದ ನಾಮಪತ್ರಗಳು

ಹಿಂಪಡೆದ ನಂತರ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳು

 

ಅಸ್ಸಾಂ

5

118

62

61

ಬಿಹಾರ

5

146

55

50

ಛತ್ತೀಸ್ ಗಢ

3

95

46

41

ಜಮ್ಮು-ಕಾಶ್ಮೀರ

1

37

23

22

ಕರ್ನಾಟಕ

14

491

300

247

ಕೇರಳ

20

500

204

194

ಮಧ್ಯ ಪ್ರದೇಶ

7

157

93

88

ಮಹಾರಾಷ್ಟ್ರ

8

477

299

204

ರಾಜಸ್ಥಾನ

13

304

191

152

ತ್ರಿಪುರ

1

14

14

9

ಉತ್ತರ ಪ್ರದೇಶ

8

226

94

91

ಪಶ್ಚಿಮ ಬಂಗಾಳ

3

68

47

47

ಒಟ್ಟು

88

2633

1428

1206

 

 

ಔಟರ್ ಮಣಿಪುರ ಸಂಸದೀಯ ಕ್ಷೇತ್ರಗಳ 15 ವಿಧಾನಸಭಾ ಕ್ಷೇತ್ರಗಳಲ್ಲಿ ACಗಳು 19.04.2024 ರಂದು (ಹಂತ 1) ಮತದಾನ ನಡೆಯಲಿದೆ. ಅಲ್ಲದೆ, ಈ ಸಂಸದೀಯ ಕ್ಷೇತ್ರಗಳ 13 ವಿಧಾನಸಭಾ ಕ್ಷೇತ್ರಗಳಲ್ಲಿ 26.04.2024 ರಂದು (ಹಂತ 2) ಮತದಾನ ನಡೆಯಲಿದೆ. 2024 ಏಪ್ರಿಲ್ 5ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆಯಂತೆ, ಔಟರ್ ಮಣಿಪುರ ಸಂಸದೀಯ ಕ್ಷಏತ್ರದಿಂದ 4 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಒಟ್ಟಾರೆ, 1ನೇ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,491 ಪುರುಷ ಅಭ್ಯರ್ಥಿಗಳು ಮತ್ತು 134 ಮಹಿಳಾ ಅಭ್ಯರ್ಥಿಗಳೊಂದಿಗೆ ಒಟ್ಟು 1,625 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

 

******

 



(Release ID: 2017630) Visitor Counter : 102