ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಭೂತಾನ್ ಪ್ರಧಾನಿ

2024 ಫೆಬ್ರವರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ಮೊದಲ ವಿದೇಶ ಪ್ರವಾಸ ಕೈಗೊಂಡಿರುವ ಭೂತಾನ್ ಪ್ರಧಾನ ಮಂತ್ರಿ ಶೆರಿಂಗ್ ಟೋಬ್ಗೆ ಅವರನ್ನು ಸ್ವಾಗತಿಸಿದ ಪ್ರಧಾನಿ ಮೋದಿ

ವಿಶೇಷ ಮತ್ತು ವಿಶಿಷ್ಟ ದ್ವಿಪಕ್ಷೀಯ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬದ್ಧತೆ ಪುನರುಚ್ಚರಿಸಿದ ಉಭಯ ನಾಯಕರು

ಭೂತಾನ್ ಜನರ ಅಭಿವೃದ್ಧಿಯಲ್ಲಿ ಭಾರತವು ವಿಶ್ವಾಸಾರ್ಹ, ನಂಬಿಕಸ್ಥ ಮತ್ತು ಮೌಲ್ಯಯುತ ಪಾಲುದಾರ: ಪಿಎಂ ಶೆರಿಂಗ್ ಟೋಬ್ಗೆ ಬಣ್ಣನೆ

ಮುಂದಿನ ವಾರ ಭೂತಾನ್‌ಗೆ ಭೇಟಿ ನೀಡುವ ಆಹ್ವಾನ ಸ್ವೀಕರಿಸಿದ ಪ್ರಧಾನಿ ಮೋದಿ 

Posted On: 15 MAR 2024 10:22AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ನವದೆಹಲಿಯಲ್ಲಿ ಭೂತಾನ್ ಪ್ರಧಾನ ಮಂತ್ರಿ ಗೌರವಾನ್ವಿತ ದಾಶೋ ಶೆರಿಂಗ್ ಟೋಬ್ಗೆ ಅವರನ್ನು ಬರಮಾಡಿಕೊಂಡರು.

ಪ್ರಧಾನ ಮಂತ್ರಿ ಶೆರಿಂಗ್ ಟೋಬ್ಗೆ ಅವರು ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. 2024 ಫೆಬ್ರವರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ಸಾಗರೋತ್ತರ ಭೇಟಿ ಇದಾಗಿದೆ.

ಮೂಲಸೌಕರ್ಯ ಅಭಿವೃದ್ಧಿ, ಸಂಪರ್ಕ, ಇಂಧನ, ಜಲವಿದ್ಯುತ್ ಸಹಕಾರ, ಜನರಿಂದ ಜನರ ವಿನಿಮಯ ಮತ್ತು ಅಭಿವೃದ್ಧಿ ಸಹಕಾರ ಸೇರಿದಂತೆ ದ್ವಿಪಕ್ಷೀಯ ಪಾಲುದಾರಿಕೆಯ ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಇಬ್ಬರೂ ನಾಯಕರು ಪರಿಶೀಲಿಸಿದರು. ವಿಶೇಷ ಮತ್ತು ವಿಶಿಷ್ಟವಾದ ಭಾರತ-ಭೂತಾನ್ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಭೂತಾನ್‌ನ ಅಭಿವೃದ್ಧಿಯ ಆದ್ಯತೆಗಳಲ್ಲಿ ವಿಶ್ವಾಸಾರ್ಹ, ನಂಬಿಕಸ್ಥ ಮತ್ತು ಮೌಲ್ಯಯುತ ಪಾಲುದಾರನಾಗಿರುವ ಭಾರತಕ್ಕೆ ಭೂತಾನ್‌ನ ಪ್ರಧಾನಮಂತ್ರಿ ತಮ್ಮ ಆಳವಾದ ಮೆಚ್ಚುಗೆ ವ್ಯಕ್ತಪಡಿಸಿದರು.

ಗೌರವಾನ್ವಿತ ಭೂತಾನ್ ದೊರೆಯ ಪರವಾಗಿ, ಪ್ರಧಾನ ಮಂತ್ರಿ ಶೆರಿಂಗ್ ತೊಬ್ಗೆ ಅವರು ಮುಂದಿನ ವಾರ ಭೂತಾನ್‌ಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದರು. ಪ್ರಧಾನಿ ಮೋದಿ ಅವರು ಆಹ್ವಾನ ಸ್ವೀಕರಿಸಿದರು.
 

******



(Release ID: 2014881) Visitor Counter : 72