ಪ್ರಧಾನ ಮಂತ್ರಿಯವರ ಕಛೇರಿ
ಕಲ್ಪಕ್ಕಂ ಆರಂಭಕ್ಕೆ ಸಾಕ್ಷಿಯಾಗಲಿರುವ ಪ್ರಧಾನಿ ಮೋದಿ
प्रविष्टि तिथि:
04 MAR 2024 11:45PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಲ್ಪಕ್ಕಂನಲ್ಲಿ ಭಾರತದ ಮೊದಲ ಮತ್ತು ಸಂಪೂರ್ಣ ಸ್ವದೇಶಿ ಫಾಸ್ಟ್ ಬ್ರೀಡರ್ ರಿಯಾಕ್ಟರ್‌ನ "ಕೋರ್ ಲೋಡಿಂಗ್" ಪ್ರಾರಂಭಕ್ಕೆ ಇಂದು ಸಾಕ್ಷಿಯಾದರು.
ಬ್ರೀಡರ್ ರಿಯಾಕ್ಟರ್, ಇಂಧನದ ವೆಚ್ಚಕ್ಕಿಂತ ಹೆಚ್ಚು ಉತ್ಪಾದನೆ ಮಾಡಲಿದ್ದು, ಇದು ಭಾರತದ ವಿಶಾಲವಾದ ಥೋರಿಯಂ ನಿಕ್ಷೇಪಗಳ ಅಂತಿಮ ಬಳಕೆಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿಕೊಂಡಿರುವ ಪ್ರಧಾನ ಮಂತ್ರಿಗಳು,
"ಇಂದು ಬೆಳಗ್ಗೆ, ಕಲ್ಪಕ್ಕಂನಲ್ಲಿ ಭಾರತದ ಮೊದಲ ಮತ್ತು ಸಂಪೂರ್ಣ ಸ್ವದೇಶಿ ಫಾಸ್ಟ್ ಬ್ರೀಡರ್ ರಿಯಾಕ್ಟರ್‌ನ "ಕೋರ್ ಲೋಡಿಂಗ್" ಆರಂಭಕ್ಕೆ ಸಾಕ್ಷಿಯಾದೆ. ಇದು ಇಂಧನದ ವೆಚ್ಚಕ್ಕಿಂತ ಹೆಚ್ಚು ಉತ್ಪಾದನೆ ಮಾಡುತ್ತದೆ.
ಇದು ಭಾರತದ ವಿಶಾಲ ಥೋರಿಯಂ ನಿಕ್ಷೇಪಗಳ ಅಂತಿಮ ಬಳಕೆಗೆ ದಾರಿ ಮಾಡಿಕೊಡುತ್ತದೆ ಮತ್ತು ಇದರಿಂದಾಗಿ ಪರಮಾಣು ಇಂಧನ ಆಮದು ಅಗತ್ಯವನ್ನು ನಿವಾರಿಸುತ್ತದೆ.
ದೇಶದ ಇಂಧನ ಸ್ವಾವಲಂಬನೆ ಮತ್ತು ನಿವ್ವಳ ಶೂನ್ಯ ಗುರಿಯತ್ತ ಪ್ರಗತಿ ಸಾಧಿಸಲು ಭಾರತಕ್ಕೆ ಸಹಾಯ ಮಾಡುತ್ತದೆ.'' ಎಂದು ಬರೆದುಕೊಂಡಿದ್ದಾರೆ.
***
(रिलीज़ आईडी: 2012628)
आगंतुक पटल : 108
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam