ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ ಅಧ್ಯಕ್ಷರಾದ ಶ್ರೀಮತ್‌ ಸ್ವಾಮಿ ಸ್ಮರಣಾನಂದ ಜೀ ಮಹಾರಾಜ್‌ ಅವರ ಶೀಘ್ರ ಚೇತರಿಕೆಗೆ ಪ್ರಧಾನಿ ಹಾರೈಕೆ

ಪ್ರಕಟಣಾ ದಿನಾಂಕ: 04 MAR 2024 6:39PM by PIB Bengaluru

ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ ಅಧ್ಯಕ್ಷರಾದ ಶ್ರೀಮತ್‌ ಸ್ವಾಮಿ ಸ್ಮರಣಾನಂದ ಜೀ ಮಹಾರಾಜ್ ಅವರು ಶೀಘ್ರ ಗುಣಮುಖರಾಗಿ ಉತ್ತಮ ಆರೋಗ್ಯ ಪಡೆಯಲಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ  ಹಾರೈಸಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್‌ ಪೋಸ್ಟ್‌ ನಲ್ಲಿ ಹೀಗಿದೆ : 

“ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ ಅಧ್ಯಕ್ಷರಾದ ಶ್ರೀಮತ್‌ ಸ್ವಾಮಿ ಸ್ಮರಣಾನಂದ ಜೀ ಮಹಾರಾಜ್ ಅವರಿಗೆ ಉತ್ತಮ ಆರೋಗ್ಯಕ್ಕಾಗಿ ಮತ್ತು ಅವರ ಶೀಘ್ರ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ. ಅವರ ಬೋಧನೆಗಳು ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ, ಅನೇಕರಿಗೆ ಬೆಳಕನ್ನು ನೀಡಿದೆ ಮತ್ತು ನಮ್ಮ ಸಮಾಜದ ಆಧ್ಯಾತ್ಮಿಕ ಪ್ರಗತಿಗೆ ಹಾಗೂ ಕಲ್ಯಾಣಕ್ಕೆ ಅವರ ಕೊಡುಗೆಗಳನ್ನು ಕಡೆಗಣಿಸಲಾಗುವುದಿಲ್ಲ”

******


(ಪ್ರಕಟಣೆ ಐ.ಡಿ.: 2012617) ವಿಸಿಟರ್ ಕೌಂಟರ್ : 124