ಸಂಪುಟ
azadi ka amrit mahotsav

ಸಮಗ್ರ ರೋಗ ನಿಯಂತ್ರಣ ಮತ್ತು ಸಾಂಕ್ರಾಮಿಕ ಸನ್ನದ್ಧತೆಗಾಗಿ ನ್ಯಾಶನಲ್ ಒನ್ ಹೆಲ್ತ್ ಮಿಷನ್ ಅನ್ನು ಮುನ್ನಡೆಸಲು ವಿಜ್ಞಾನಿ 'ಎಚ್' (ವೇತನ ಶ್ರೇಣಿ -15) ಮಟ್ಟದಲ್ಲಿ ನಾಗ್ಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್ ನ ನಿರ್ದೇಶಕರ ಹುದ್ದೆಯನ್ನು ರಚಿಸಲು ಸಚಿವ ಸಂಪುಟದ ಅನುಮೋದನೆ

Posted On: 29 FEB 2024 3:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್ನ ನಿರ್ದೇಶಕರಾಗಿ ವಿಜ್ಞಾನಿ ಎಚ್ (ವೇತನ ಶ್ರೇಣಿ 15 ) ಒಂದು ಹುದ್ದೆಯನ್ನು ರಚಿಸುವ ಪ್ರಸ್ತಾವನೆಯನ್ನು ಅನುಮೋದಿಸಿತು. ನಿರ್ದೇಶಕರಾದವರು ಮಾನವ, ಪ್ರಾಣಿ, ಸಸ್ಯ ಮತ್ತು ಪರಿಸರ ಕ್ಷೇತ್ರಗಳನ್ನು ಕ್ರೋಡೀಕರಿಸುವ ಮೂಲಕ ಸಮಗ್ರ ರೋಗ ನಿಯಂತ್ರಣ ಮತ್ತು ಸಾಂಕ್ರಾಮಿಕ ಸನ್ನದ್ಧತೆಗಾಗಿ ಬಹು-ಸಚಿವಾಲಯ ಮತ್ತು ಬಹು-ವಲಯ ನ್ಯಾಶನಲ್ ಒನ್ ಹೆಲ್ತ್   ಮಿಷನ್ನ ಮಿಷನ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಲಿದ್ದಾರೆ.

ಹಣಕಾಸು ವೆಚ್ಚ:

ವೇತನ ಶ್ರೇಣಿ 15 ರಲ್ಲಿ ವಿಜ್ಞಾನಿ 'ಎಚ್' ಮಟ್ಟದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್ನ ನಿರ್ದೇಶಕರ ಒಂದು ಹುದ್ದೆಯನ್ನು ರಚಿಸುವುದು (ರೂ.1,82,000 - ರೂ.2,24,100) ವಾರ್ಷಿಕ ಖರ್ಚು  ಸುಮಾರು 35.59 ಲಕ್ಷ ರೂಪಾಯಿಗಳಾಗುತ್ತವೆ.

ಅನುಷ್ಠಾನ ತಂತ್ರ ಮತ್ತು ಗುರಿಗಳು:

ನಾಗಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಒನ್ ಹೆಲ್ತ್ನ ನಿರ್ದೇಶಕರು ಮಾನವ, ಪ್ರಾಣಿ, ಸಸ್ಯ ಮತ್ತು ಪರಿಸರ ಕ್ಷೇತ್ರಗಳನ್ನು ಕ್ರೋಡೀಕರಿಸುವ ಮೂಲಕ ಸಮಗ್ರ ರೋಗ ನಿಯಂತ್ರಣ ಮತ್ತು ಸಾಂಕ್ರಾಮಿಕ ಸನ್ನದ್ಧತೆಗಾಗಿ ಬಹು-ಸಚಿವಾಲಯ ಮತ್ತು ಬಹು-ವಲಯ ನ್ಯಾಶನಲ್ ಒನ್ ಹೆಲ್ತ್ ಮಿಷನ್ಗೆ ಮಿಷನ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾರೆ. ನ್ಯಾಶನಲ್ ಒನ್ ಹೆಲ್ತ್ ಮಿಷನ್ ಗಾಗಿ ಸಮಗ್ರ ರೋಗಗಳ ಕೇಂದ್ರ ಮತ್ತು ಸಾಂಕ್ರಾಮಿಕ ಸನ್ನದ್ಧತೆಯ ಕಡೆಗೆ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಲಪಡಿಸುವ ಕಾರ್ಯಕ್ರಮವನ್ನು ಈಗಾಗಲೇ ಜನವರಿ 1, 2024 ರಂದು ಅನುಮೋದಿಸಲಾಗಿದೆ.
 
ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೇರಿದಂತೆ ಪ್ರಮುಖ ಪರಿಣಾಮ: ನ್ಯಾಶನಲ್ ಒನ್ ಹೆಲ್ತ್ ಮಿಷನ್ ಒಂದು ಆರೋಗ್ಯ ವ್ಯವಸ್ಥೆಯನ್ನು ಖಾಯಂ ಸಂಸ್ಥೆಯಾಗಿಸುವ ಮೂಲಕ ಸಮಗ್ರ ರೋಗ ನಿಯಂತ್ರಣ ಮತ್ತು ಸಾಂಕ್ರಾಮಿಕ ಸನ್ನದ್ಧತೆಯನ್ನು ಸಾಧಿಸಲು ದೇಶಕ್ಕೆ ಸಹಾಯ ಮಾಡುತ್ತದೆ. ಮಾನವರು, ಪ್ರಾಣಿಗಳು, ಸಸ್ಯಗಳು ಮತ್ತು ಪರಿಸರದ ಆರೋಗ್ಯವನ್ನು ಸಮಗ್ರವಾಗಿ ಮತ್ತು ಸುಸ್ಥಿರ ರೀತಿಯಲ್ಲಿ ಪರಿಹರಿಸಲು ಸಹಯೋಗಗಳನ್ನು ಬೆಳೆಸುವ ಮೂಲಕ ವಿವಿಧ ಸಚಿವಾಲಯಗಳು/ಇಲಾಖೆಗಳ ನಡೆಯುತ್ತಿರುವ/ಯೋಜಿತ ಕಾರ್ಯಕ್ರಮಗಳನ್ನು ಇದು ಹತೋಟಿಗೆ ತರುತ್ತದೆ.

ಹಿನ್ನೆಲೆ:

ಕಳೆದ ಕೆಲವು ದಶಕಗಳಲ್ಲಿ, ನಿಫಾ, ಎಚ್5ಎನ್1 ಏವಿಯನ್ ಇನ್ಫ್ಲುಯೆನ್ಸ, ಸಾರ್ಸ್-ಕೊವ್-2 ಮುಂತಾದ ಹಲವಾರು ಸಾಂಕ್ರಾಮಿಕ ರೋಗಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕಳವಳಕಾರಿಯಾಗಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಳಲ್ಲಿ ಹೆಚ್ಚಾಗಿವೆ. ಇದರ ಜೊತೆಗೆ, ಪ್ರಾಣಿಗಳ ರೋಗಗಳಾದ ಕಾಲು ಮತ್ತು ಬಾಯಿ ರೋಗ, ಜಾನುವಾರುಗಳಲ್ಲಿ ಚರ್ಮ ರೋಗ, ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಮುಂತಾದವುಗಳು ರೈತರ ಆರ್ಥಿಕ ಪರಿಸ್ಥಿತಿ ಮತ್ತು ದೇಶದ ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತಿವೆ. ಈ ರೋಗಗಳು ವನ್ಯಜೀವಿಗಳ ಮೇಲೂ ಪರಿಣಾಮ ಬೀರುತ್ತವೆ ಮತ್ತು ಅವುಗಳ ಸಂರಕ್ಷಣೆಗೆ ಅಡಚಣೆಯಾಗಿವೆ.

ಮಾನವರು, ಪ್ರಾಣಿಗಳು ಮತ್ತು ಸಸ್ಯಗಳು ಸೇರಿದಂತೆ ಜೊತೆಯಾಗಿರುವ ಪರಿಸರಕ್ಕೆ ಧಕ್ಕೆಯಾಗುವ ಸವಾಲುಗಳ ಸಂಕೀರ್ಣತೆಯನ್ನು ಎದುರಿಸಲು ಇರುವ  'ಎಲ್ಲರಿಗೂ ಆರೋಗ್ಯ ಮತ್ತು ಸ್ವಾಸ್ಥ್ಯ' ಗುರಿಯನ್ನು ಸಾಧಿಸಲು  ಅಮೂಲಾಗ್ರ 'ಒಂದು ಆರೋಗ್ಯ' ಆಧಾರಿತ ವಿಧಾನದ ಅಗತ್ಯವಿದೆ. ಇದನ್ನು ಪರಿಗಣಿಸಿ, 13 ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ "ನ್ಯಾಶನಲ್ ಒನ್ ಹೆಲ್ತ್ ಮಿಷನ್" ರೂಪದಲ್ಲಿ ಒಂದು ಸಂಯೋಜಿತ ಚೌಕಟ್ಟನ್ನು ರಚಿಸಲಾಗಿದೆ, ಇದು ಆರಂಭಿಕ ಪತ್ತೆಗಾಗಿ ವಲಯಗಳಾದ್ಯಂತ ಸಮಗ್ರ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳುವಂತಹ ವಲಯಗಳಾದ್ಯಂತ ಆದ್ಯತೆಯ ಚಟುವಟಿಕೆಗಳನ್ನು ಸಂಘಟಿಸುತ್ತದೆ ಮತ್ತು ಸಂಯೋಜಿಸುತ್ತದೆ. ಸಾಂಕ್ರಾಮಿಕ ರೋಗಗಳು/ ಹರಡುವ  ರೋಗಗಳು, 'ಒಂದು ಆರೋಗ್ಯ' ವಿಧಾನವನ್ನು ಅನುಸರಿಸುವುದು ಮತ್ತು ಲಸಿಕೆಗಳು, ಚಿಕಿತ್ಸಕಗಳು, ರೋಗನಿರ್ಣಯಗಳು, ಮೊನೊಕ್ಲೋನಲ್ಸ್ ಮತ್ತು ಇತರ ಜೀನೋಮಿಕ್ ಉಪಕರಣಗಳು ಇತ್ಯಾದಿಗಳಂತಹ ಶೀಘ್ರ ಟ್ರ್ಯಾಕಿಂಗ್ ವೈದ್ಯಕೀಯ ಪ್ರತಿ ಕ್ರಮಗಳಿಗಾಗಿ ಉದ್ದೇಶಿತ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವುದು.

***


(Release ID: 2010202) Visitor Counter : 102