ಪ್ರಧಾನ ಮಂತ್ರಿಯವರ ಕಛೇರಿ
‘ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೇ’ ಅಭಿಯಾನ: ಮೊದಲ ಬಾರಿ ಮತ ಚಲಾಯಿಸುವವರಿಗೆ ಸಂದೇಶ ಹರಡಲು ಪ್ರಧಾನಿ ಮೋದಿ ಕರೆ
प्रविष्टि तिथि:
27 FEB 2024 1:25PM by PIB Bengaluru
‘ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೇ’(ನನ್ನ ಮೊದಲ ಮತ ದೇಶಕ್ಕಾಗಿ) ಎಂಬ ಅಭಿಯಾನ ಕುರಿತು ಮೊದಲ ಬಾರಿ ಮತ ಚಲಾಯಿಸುವ ಯುವ ಮತದಾರರಲ್ಲಿ ಸಂದೇಶ ಹರಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾ ವರ್ಗಗಳ ಜನರನ್ನು ಒತ್ತಾಯಿಸಿದ್ದಾರೆ.
‘ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೇ’ ಎಂಬ ಶೀರ್ಷಿಕೆಯಡಿ ಮೊದಲ ಬಾರಿ ಮತ ಚಲಾಯಿಸುವ ಯುವ ಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಯುವ ಮತದಾರರು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸುವಂತೆ ಉತ್ತೇಜಿಸಲು ಈ ಅಭಿಯಾನ ಕೈಗೊಳ್ಳಲಾಗುತ್ತದೆ.
ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಅವರು 'ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೆ' ಗೀತೆಯನ್ನು ಹಂಚಿಕೊಂಡು ಪ್ರತಿಯೊಬ್ಬರೂ ಅದನ್ನು ಹಂಚಿಕೊಂಡು ಪ್ರಚಾರ ಮಾಡುವಂತೆ ಕೇಳಿಕೊಂಡರು.
ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿಗಳು, “ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಇನ್ನಷ್ಟು ಮಂದಿ ಭಾಗವಹಿಸುವಂತೆ ಮಾಡೋಣ. ಮೊದಲ ಬಾರಿ ಮತ ಚಲಾಯಿಸುವವರಿಗೆ ತಮ್ಮದೇ ಆದ ಶೈಲಿಯಲ್ಲಿ ಸಂದೇಶವನ್ನು ಹರಡಲು ನಾನು ಎಲ್ಲಾ ವರ್ಗದ ಜನರಿಗೆ ಕರೆ ನೀಡುತ್ತೇನೆ - #MeraPehlaVoteDeshKeLiye!” ಎಂದು ಬರೆದುಕೊಂಡಿದ್ದಾರೆ.
***
(रिलीज़ आईडी: 2009658)
आगंतुक पटल : 132
इस विज्ञप्ति को इन भाषाओं में पढ़ें:
Telugu
,
Tamil
,
Marathi
,
Malayalam
,
Khasi
,
English
,
Urdu
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia