ಪ್ರಧಾನ ಮಂತ್ರಿಯವರ ಕಛೇರಿ

ಅತಿ ದೊಡ್ಡ ಬುಡಕಟ್ಟು ಹಬ್ಬವಾದ ಸಮ್ಮಕ್ಕ-ಸಾರಕ್ಕ ಮೇಡಾರಂ ಜಾಥಾರ ಆರಂಭದ ಶುಭಾಶಯ ಕೋರಿದ ಪ್ರಧಾನಮಂತ್ರಿ

Posted On: 21 FEB 2024 10:30AM by PIB Bengaluru

ಬುಡಕಟ್ಟು ಜನಾಂಗದವರ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ಸಮ್ಮಕ್ಕ-ಸಾರಕ್ಕ ಮೇಡಾರಂ ಜಾಥಾರ ಪ್ರಾರಂಭದ ಶುಭಾಶಯಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋರಿದ್ದಾರೆ. ಶ್ರೀ ಮೋದಿ ಅವರು ಸಮ್ಮಕ್ಕ-ಸಾರಕ್ಕ ಅವರಿಗೆ ಗೌರವ ವಂದನೆಗಳನ್ನು ಸಲ್ಲಿಸಿದರು ಮತ್ತು ಈ ಹಬ್ಬದ ಸಂಕೇತವಾದ ಏಕತೆ ಮತ್ತು ಶೌರ್ಯದ ಮನೋಭಾವವನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು.

ಪ್ರಧಾನಮಂತ್ರಿಯವರು ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

“ಅತಿದೊಡ್ಡ ಬುಡಕಟ್ಟು ಹಬ್ಬಗಳಲ್ಲಿ ಒಂದಾದ ಸಮ್ಮಕ್ಕ-ಸಾರಕ್ಕ ಮೇಡಾರಂ ಜಾಥಾರ ಪ್ರಾರಂಭದ ಶುಭಾಶಯಗಳು ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮನೋಭಾವದ ವೈವಿದ್ಯಮಯ ಅಭಿವ್ಯಕ್ತಿರೂಪವಾಗಿದೆ. ಈ ಜಾಥಾರವು ಭಕ್ತಿ, ಸಂಪ್ರದಾಯ ಮತ್ತು ಸಮುದಾಯಿಕ ಮನೋಭಾವದ ಮಹಾನ್ ಸಮ್ಮಿಲನವಾಗಿದೆ. ನಾವು ಸಮ್ಮಕ್ಕ-ಸಾರಕ್ಕ ಅವರಿಗೆ ನಮಸ್ಕರಿಸುತ್ತೇವೆ. ಈ ಹಬ್ಬ ಸಾಂಕೇತಿಸುವ ಏಕತೆ ಮತ್ತು ಶೌರ್ಯದ ಮನೋಭಾವವನ್ನು ನಾವು ನೆನಪಿಸಿಕೊಳ್ಳುತ್ತೇವೆ. ”

“గిరిజనుల అతిపెద్ద పండుగలలో ఒకటైన,మన సాంస్కృతిక వారసత్వానికి చిరకాల స్ఫూర్తిగా నిలిచే చైతన్యవంతమైన వ్యక్తీకరణ అయిన ఈ  సమ్మక్క-సారక్క మేడారం జాతర ప్రారంభోత్సవానికి శుభాకాంక్షలు. ఈ జాతర భక్తి, సంప్రదాయం, సమాజ స్ఫూర్తిల గొప్ప కలయిక. మనం సమ్మక్క-సారక్కలకు ప్రణమిల్లుదాం, వారు అభివ్యక్తీకరించిన ఐక్యతా స్ఫూర్తిని, పరాక్రమాన్ని గుర్తుచేసుకుందాం.”

***



(Release ID: 2007628) Visitor Counter : 47