ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ತಮ್ಮ ಇತ್ತೀಚಿನ ಭಾರತಕ್ಕೆ ನೀಡಿದ ಭೇಟಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಇದು ಖಂಡಿತವಾಗಿಯೂ ಭಾರತ  ಫ್ರಾನ್ಸ್ ಸ್ನೇಹವನ್ನು ವೃದ್ಧಿಸುವುದು '

प्रविष्टि तिथि: 04 FEB 2024 11:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಭಾರತಕ್ಕೆ ನೀಡಿದ ಭೇಟಿಗೆ ಕೃತಜ್ಞತೆ ಸಲ್ಲಿಸಿದರು. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಎಕ್ಸ್ ಪೋಸ್ಟ್ ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಶ್ರೀ ಮೋದಿ ಅವರು ಇದರಲ್ಲಿ ಮ್ಯಾಕ್ರನ್ ಅವರು ತಮ್ಮ ಇತ್ತೀಚಿನ ಭಾರತಕ್ಕೆ ನೀಡಿದ ಭೇಟಿಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಸಂದರ್ಭದಲ್ಲಿನ ತಮ್ಮ ಇತ್ತೀಚಿನ ಪ್ರವಾಸದ  ಅನುಭವದ  ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಪ್ರಧಾನಮಂತ್ರಿವರು ಹೀಗೆ ಹೇಳಿದ್ದಾರೆ;

"ಅಧ್ಯಕ್ಷರಾದ ಇಮ್ಯಾನುಯೆಲ್ ಮ್ಯಾಕ್ರೋನ್ ( @EmmanuelMacron.), ನೀವು ಭಾರತಕ್ಕೆ ಭೇಟಿ ನೀಡಿರುವುದು ನಮಗೆ ಗೌರವವಾಗಿದೆ. ನಿಮ್ಮ ಭೇಟಿ ಮತ್ತು ಗಣರಾಜ್ಯೋತ್ಸವದಲ್ಲಿನ ಭಾಗವಹಿಸುವಿಕೆ ಭಾರತ ಫ್ರಾನ್ಸ್ ಸ್ನೇಹವನ್ನು ಖಂಡಿತವಾಗಿಯೂ ವೃದ್ಧಿಸುತ್ತದೆ.”

***

 


(रिलीज़ आईडी: 2002613) आगंतुक पटल : 108
इस विज्ञप्ति को इन भाषाओं में पढ़ें: Malayalam , Telugu , English , Urdu , Marathi , हिन्दी , Manipuri , Bengali , Bengali-TR , Assamese , Punjabi , Gujarati , Odia , Tamil