ಹಣಕಾಸು ಸಚಿವಾಲಯ
ನಾರಿ ಶಕ್ತಿಗೆ ಮತ್ತಷ್ಟು ಶಕ್ತಿ(ಉತ್ತೇಜನ ಅಥವಾ ಆವೇಗ)
ಉದ್ಯಮಶೀಲತೆ, ಸುಲಭ ಜೀವನ ಮತ್ತು ಘನತೆಯ ಮೂಲಕ ಮಹಿಳೆಯರ ಸಬಲೀಕರಣವು ವೇಗ ಪಡೆದುಕೊಂಡಿದೆ: ಹಣಕಾಸು ಸಚಿವರು
ಮಹಿಳಾ ಉದ್ಯಮಿಗಳಿಗೆ 30 ಕೋಟಿ ರೂ. ಮುದ್ರಾ ಯೋಜನೆ ಸಾಲ ನೀಡಲಾಗಿದೆ.
ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲಾತಿಯು ಶೇಕಡ 28ರಷ್ಟು ಹೆಚ್ಚಾಗಿದೆ
ಸ್ಟೆಮ್ ಕೋರ್ಸ್‌ಗಳಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಶೇಕಡ 43ರಷ್ಟು ದಾಖಲಾತಿ ಹೊಂದಿದ್ದಾರೆ – ಇದು ವಿಶ್ವದಲ್ಲೇ ಗರಿಷ್ಠ
ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಳ
‘ಟ್ರಿಪಲ್ ತಲಾಖ್’ ಕಾನೂನುಬಾಹಿರ
ಲೋಕಸಭೆ ಮತ್ತು ರಾಜ್ಯ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಸ್ಥಾನಗಳ ಮೀಸಲಾತಿ
ಗ್ರಾಮೀಣ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ, ಶೇಕಡ 70ಕ್ಕಿಂತ ಹೆಚ್ಚು ಮನೆಗಳನ್ನು ಮಹಿಳೆಯರಿಗೆ ಏಕಮಾತ್ರ ಅಥವಾ ಜಂಟಿ ಮಾಲೀಕತ್ವ ನೀಡಲಾಗಿದೆ
Posted On:
01 FEB 2024 12:41PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು 2024-25ರ ಮಧ್ಯಂತರ ಬಜೆಟ್ ಮಂಡಿಸಿದರು. ಉದ್ಯಮಶೀಲತೆ, ಸುಲಭವಾಗಿ ಜೀವನ ನಿರ್ವಹಣೆ ಮತ್ತು ಘನತೆ ಕಾಪಾಡುವ ಮಹಿಳೆಯರ ಸಬಲೀಕರಣವು ಈ 10 ವರ್ಷಗಳಲ್ಲಿ ವೇಗ ಪಡೆದುಕೊಂಡಿದೆ ಎಂದು ಹೇಳಿದರು.
ಮಹಿಳಾ ಉದ್ಯಮಿಗಳಿಗೆ 30 ಕೋಟಿ ರೂ. ಮುದ್ರಾ ಯೋಜನೆಯ ಸಾಲ ನೀಡಲಾಗಿದೆ. 10 ವರ್ಷಗಳಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲಾತಿ ಶೇಕಡ 28ರಷ್ಟು ಹೆಚ್ಚಾಗಿದೆ. ಸ್ಟೆಮ್ ಕೋರ್ಸ್‌ಗಳಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ದಾಖಲಾತಿ ಶೇಕಡ 43ಕ್ಕೆ ಹೆಚ್ಚಾಗಿದೆ - ಇದು ವಿಶ್ವದಲ್ಲೇ ಅತಿ ಹೆಚ್ಚು. ಈ ಎಲ್ಲಾ ಕ್ರಮಗಳು ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆಯಲ್ಲಿ ಪ್ರತಿಫಲಿಸುತ್ತಿದೆ ಎಂದರು.
ತ್ರಿವಳಿ ತಲಾಖ್ ಕಾನೂನುಬಾಹಿರ ಎಂದ ಸಚಿವರು, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಶೇಕಡ 70ಕ್ಕಿಂತ ಹೆಚ್ಚಿನ ಮನೆಗಳನ್ನು ಮಹಿಳೆಯರಿಗೆ ಏಕಾಂಗಿಯಾಗಿ ಅಥವಾ ಜಂಟಿಯಾಗಿ ಮಾಲಿಕತ್ವ ನೀಡಲಾಗಿದೆ. ಇದರಿಂದ ಮಹಿಳೆಯಕ ಘನತೆ ಹೆಚ್ಚಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.
ನಾವು 4 ಪ್ರಮುಖ ಜನರ ಮೇಲೆ ಗಮನ ಕೇಂದ್ರೀಕರಿಸಬೇಕಾಗಿದೆ ಎಂದು ನಮ್ಮ ಪ್ರಧಾನ ಮಂತ್ರಿಗಳು ದೃಢವಾಗಿ ನಂಬಿದ್ದಾರೆ. “ಅವರೆಂದರೆ, ‘ಗರೀಬ್’ (ಬಡವರು), ‘ಮಹಿಳಾಯೇನ್’ (ಮಹಿಳೆಯರು), ‘ಯುವ’ (ಯುವಕರು) ಮತ್ತು ‘ಅನ್ನದಾತ’ (ರೈತರು). ಅವರ ಅಗತ್ಯತೆಗಳು, ಅವರ ಆಕಾಂಕ್ಷೆಗಳು ಮತ್ತು ಅವರ ಕಲ್ಯಾಣ ನಮ್ಮ ಹೆಚ್ಚಿನ ಆದ್ಯತೆಯಾಗಿದೆ. ಅವರು ಪ್ರಗತಿ ಹೊಂದಿದಾಗ ದೇಶವೂ ಪ್ರಗತಿ ಹೊಂದುತ್ತದೆ. ಈ ಎಲ್ಲಾ 4 ಜನರ ಜೀವನ ಉತ್ತಮಗೊಳಿಸುವ ಅನ್ವೇಷಣೆಯಲ್ಲಿ ಸರ್ಕಾರದ ಬೆಂಬಲದ ಅಗತ್ಯವಿದೆ ಮತ್ತು ಅವರು ಅದನ್ನು ಸ್ವೀಕರಿಸುತ್ತಾರೆ. ಅವರ ಸಬಲೀಕರಣ ಮತ್ತು ಯೋಗಕ್ಷೇಮವೇ ದೇಶವನ್ನು ಮುನ್ನಡೆಸುತ್ತದೆ ಎಂದು ಸಚಿವರು ಹೇಳಿದರು.
****
(Release ID: 2001430)
Visitor Counter : 155
Read this release in:
English
,
Urdu
,
Marathi
,
Hindi
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam