ಹಣಕಾಸು ಸಚಿವಾಲಯ
ಲಕ್ಷಪತಿ ದೀದಿಯ ಗುರಿಯನ್ನು 2 ಕೋಟಿಯಿಂದ 3 ಕೋಟಿಗೆ ಹೆಚ್ಚಿಸುವ ನಿರ್ಧಾರ : ಹಣಕಾಸು ಸಚಿವರು
ಲಕ್ಷಪತಿ ದೀದಿ ಆಗಲು ಸುಮಾರು 1 ಕೋಟಿ ಮಹಿಳೆಯರು ಸಹಾಯ ಮಾಡಿದ್ದಾರೆ
9 ಕೋಟಿ ಮಹಿಳೆಯರೊಂದಿಗೆ 83 ಲಕ್ಷ ಸ್ವ ಸಹಾಯ ಗುಂಪುಗಳು ಗ್ರಾಮೀಣ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಸಬಲೀಕರಣ ಮತ್ತು ಸ್ವಾವಲಂಬನೆಯೊಂದಿಗೆ ಪರಿವರ್ತಿಸುತ್ತಿವೆ
Posted On:
01 FEB 2024 12:45PM by PIB Bengaluru
ಇಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ 2024-25 ಅನ್ನು ಮಂಡಿಸುವಾಗ ಲಕ್ ಪತಿ ದೀದಿ ಗುರಿಯನ್ನು 2 ಕೋಟಿಯಿಂದ 3 ಕೋಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಒಂಬತ್ತು ಕೋಟಿ ಮಹಿಳೆಯರನ್ನು ಹೊಂದಿರುವ ಎಂಬತ್ತ ಮೂರು ಲಕ್ಷ ಸ್ವಸಹಾಯ ಗುಂಪುಗಳು ಸಬಲೀಕರಣ ಮತ್ತು ಸ್ವಾವಲಂಬನೆಯೊಂದಿಗೆ ಗ್ರಾಮೀಣ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಪರಿವರ್ತಿಸುತ್ತಿವೆ ಎಂದು ಕೇಂದ್ರ ಸಚಿವರು ಹೇಳಿದರು. ಅವರ ಯಶಸ್ಸು ಸುಮಾರು ಒಂದು ಕೋಟಿ ಮಹಿಳೆಯರಿಗೆ ಈಗಾಗಲೇ ಲಕ್ ಪತಿ ದೀದಿಯಾಗಲು ಸಹಾಯ ಮಾಡಿದೆ. ಅವರು ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಅವರನ್ನು ಸನ್ಮಾನಿಸುವ ಮೂಲಕ ಅವರ ಸಾಧನೆಗಳನ್ನು ಗುರುತಿಸಲಾಗುವುದು. ಯಶಸ್ಸಿನಿಂದ ಉತ್ತೇಜಿತರಾಗಿ, ಲಕ್ ಪತಿ ದೀದಿ ಅವರ ಗುರಿಯನ್ನು ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.
ನಾವು ನಾಲ್ಕು ಪ್ರಮುಖ ವಿಭಾಗಗಳ ಮೇಲೆ ಕೇಂದ್ರೀಕರಿಸಬೇಕಾಗಿದೆ ಎಂದು ನಮ್ಮ ಪ್ರಧಾನ ಮಂತ್ರಿಗಳು ದೃಢವಾಗಿ ನಂಬುತ್ತಾರೆ ಎಂದು ಹಣಕಾಸು ಸಚಿವರು ಹೇಳಿದರು. ಅವುಗಳೆಂದರೆ, ‘ಗರೀಬ್’ (ಬಡವರು), ‘ಮಹಿಳೆʼ (ಮಹಿಳೆ), ‘ಯುವ’ (ಯುವಜನತೆ) ಮತ್ತು ‘ಅನ್ನದಾತ’ (ರೈತ). "ಅವರ ಅಗತ್ಯತೆಗಳು, ಆಕಾಂಕ್ಷೆಗಳು ಮತ್ತು ಅವರ ಕಲ್ಯಾಣ ನಮ್ಮ ಆದ್ಯತೆಯಾಗಿದೆ. ಅವರು ಪ್ರಗತಿ ಹೊಂದಿದಾಗ, ದೇಶವು ಪ್ರಗತಿ ಹೊಂದುತ್ತದೆ”. ಈ ಎಲ್ಲಾ ನಾಲ್ವರಿಗೂ ತಮ್ಮ ಜೀವನವನ್ನು ಉತ್ತಮಗೊಳಿಸುವ ಅನ್ವೇಷಣೆಯಲ್ಲಿ ಸರ್ಕಾರದ ಬೆಂಬಲದ ಅಗತ್ಯವಿದೆ ಮತ್ತು ಅದನ್ನು ಪಡೆಯುತ್ತಾರೆ ಹಾಗು ಅವರ ಸಬಲೀಕರಣ ಮತ್ತು ಯೋಗಕ್ಷೇಮವು ದೇಶವನ್ನು ಮುನ್ನಡೆಸುತ್ತದೆ ಎಂದು ಅವರು ಹೇಳಿದರು.
ಸರ್ವಾಂಗೀಣ, ಸರ್ವಸ್ಪರ್ಶಿ ಮತ್ತು ಸರ್ವಸಮಾವೇಶಿ ಅಭಿವೃದ್ಧಿಯ ವಿಧಾನದೊಂದಿಗೆ ಸರ್ಕಾರವು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಇದು ಎಲ್ಲಾ ಜಾತಿಗಳು ಮತ್ತು ಎಲ್ಲಾ ಹಂತಗಳಲ್ಲಿ ಜನರನ್ನು ಒಳಗೊಳ್ಳುತ್ತದೆ. 2047 ರ ವೇಳೆಗೆ ಭಾರತವನ್ನು ವಿಕಸಿತ ಭಾರತವನ್ನಾಗಿ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ. ಆ ಗುರಿಯನ್ನು ಸಾಧಿಸಲು, ನಾವು ಜನರ ಸಾಮರ್ಥ್ಯವನ್ನು ಸುಧಾರಿಸಬೇಕು ಮತ್ತು ಅವರನ್ನು ಸಬಲೀಕರಣಗೊಳಿಸಬೇಕು ಎಂದು ಅವರು ಹೇಳಿದರು.
****
(Release ID: 2001418)
Visitor Counter : 129
Read this release in:
Punjabi
,
English
,
Urdu
,
Hindi
,
Marathi
,
Bengali-TR
,
Manipuri
,
Bengali
,
Assamese
,
Gujarati
,
Odia
,
Tamil
,
Telugu
,
Malayalam