ಹಣಕಾಸು ಸಚಿವಾಲಯ
azadi ka amrit mahotsav

ಮಧ್ಯಂತರ ಬಜೆಟ್ 2024-25 ಕೃಷಿ ವಲಯದಲ್ಲಿ ಮೌಲ್ಯವರ್ಧನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಭರವಸೆ ನೀಡುತ್ತದೆ


ಕೊಯ್ಲಿನ ನಂತರದ ಕೃಷಿ ಚಟುವಟಿಕೆಗಳಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಸ್ಕರಣೆ ಮತ್ತು ಮಾರ್ಕೆಟಿಂಗ್ ಸೇರಿದಂತೆ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಯ ನಿಟ್ಟಿನಲ್ಲಿ ಹೆಚ್ಚಿನ ಪ್ರಚಾರವನ್ನು ಘೋಷಿಸಲಾಗಿದೆ

ಪ್ರಧಾನಮಂತ್ರಿ-ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 11.8 ಕೋಟಿ ರೈತರಿಗೆ ನೇರ ಆರ್ಥಿಕ ನೆರವು ನೀಡಲಾಗಿದೆ

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ 4 ಕೋಟಿ ರೈತರು ಬೆಳೆ ವಿಮೆ ರಕ್ಷಣೆ ಪಡೆದಿದ್ದಾರೆ

ಎಣ್ಣೆಕಾಳುಗಳಿಗಾಗಿ "ಆತ್ಮನಿರ್ಭರತೆ"ಯನ್ನು ಸಾಧಿಸಲು ಕಾರ್ಯತಂತ್ರ ರೂಪಿಸಲಾಗುವುದು

ಕೃಷಿ-ಹವಾಮಾನದ ಎಲ್ಲಾ ವಲಯಗಳಲ್ಲಿ ವಿಸ್ತರಿಸಲು ವಿವಿಧ ಬೆಳೆಗಳ ಮೇಲೆ ನ್ಯಾನೋ ಡಿಎಪಿಯ ಅಳವಡಿಕೆ

Posted On: 01 FEB 2024 12:49PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2024-25 ರ ಮಧ್ಯಂತರ ಬಜೆಟ್ ನ ಪ್ರಮುಖ ಮುಖ್ಯಾಂಶಗಳಲ್ಲಿ ರೈತರ ಕಲ್ಯಾಣ ಮತ್ತು ಗ್ರಾಮೀಣ ಬೇಡಿಕೆಯನ್ನು ಹೆಚ್ಚಿಸುವುದು ಒಂದಾಗಿದೆ. ರೈತರನ್ನು ನಮ್ಮ ‘ಅನ್ನದಾತ’ ಎಂದು ಕರೆದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ‘ಅನ್ನದಾತ’ ರೈತರ ಉತ್ಪನ್ನಗಳಿಗೆ ನಿಯತಕಾಲಿಕವಾಗಿ ಕನಿಷ್ಠ ಬೆಂಬಲ ಬೆಲೆಗಳನ್ನು ಸೂಕ್ತವಾಗಿ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು. ಪ್ರತಿ ವರ್ಷ, ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯಡಿ, ಕನಿಷ್ಠ ಮತ್ತು ಸಣ್ಣ ರೈತರು ಸೇರಿದಂತೆ 11.8 ಕೋಟಿ ರೈತರಿಗೆ ನೇರ ಆರ್ಥಿಕ ಸಹಾಯವನ್ನು ನೀಡಲಾಗುತ್ತಿದೆ ಮತ್ತು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 4 ಕೋಟಿ ರೈತರಿಗೆ ಬೆಳೆ ವಿಮೆಯನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹೇಳಿದರು. ಇವುಗಳು ಜೊತೆಗೆ ಇತರ ಹಲವಾರು ಕಾರ್ಯಕ್ರಮಗಳು ದೇಶಕ್ಕಾಗಿ ಮತ್ತು ಜಗತ್ತಿಗಾಗಿ ಆಹಾರ ವಸ್ತುಗಳನ್ನು ಉತ್ಪಾದಿಸುವಲ್ಲಿ ‘ಅನ್ನದಾತ’ರಿಗೆ ಸಹಾಯ ಮಾಡುತ್ತಿವೆ ಮತ್ತು ಈ ಮೂಲಕ 80 ಕೋಟಿ ಜನರಿಗೆ ಉಚಿತ ಪಡಿತರ ಮೂಲಕ ಆಹಾರದ ಬಗ್ಗೆ ಜನರ ಚಿಂತೆಗಳನ್ನು ನಿವಾರಿಸಲಾಗಿದೆ ಎಂದು ಅವರು ಹೇಳಿದರು.   

ಕೃಷಿ ವಲಯದಲ್ಲಿ ಮೌಲ್ಯವರ್ಧನೆ ಮತ್ತು ರೈತರ ಆದಾಯವನ್ನು ಹೆಚ್ಚಿಸಲು 2024-25ರ ಮಧ್ಯಂತರ ಆಯವ್ಯಯ ಭರವಸೆ ನೀಡಿದೆ. ಕೃಷಿ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರದ ವೇಗದ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಒಟ್ಟುಗೂಡಿಸುವಿಕೆ, ಆಧುನಿಕ ಸಂಗ್ರಹಣೆ ವ್ಯವಸ್ಥೆ ರೂಪಿಸುವಿಕೆ, ಸಮರ್ಥವಾದ ಪೂರೈಕೆ ಸರಪಳಿಗಳು, ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಸ್ಕರಣೆ ವ್ಯವಸ್ಥೆ ಮತ್ತು ಸೂಕ್ತ ಮಾರುಕಟ್ಟೆ ಹಾಗೂ ಬ್ರ್ಯಾಂಡಿಂಗ್ ಸೇರಿದಂತೆ ಸುಗ್ಗಿಯ ನಂತರದ ಕೃಷಿಯ ಚಟುವಟಿಕೆಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಯನ್ನು ಮತ್ತಷ್ಟು ಉತ್ತೇಜಿಸುವುದಾಗಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.

 "ಈ ವಲಯವು ಅಂತರ್ಗತ, ಸಮತೋಲಿತ, ಹೆಚ್ಚಿನ ಬೆಳವಣಿಗೆ ಮತ್ತು ಉತ್ಪಾದಕತೆಗೆ ಸಿದ್ಧವಾಗಿದೆ. ಇವುಗಳನ್ನು ರೈತ ಕೇಂದ್ರಿತ ನೀತಿಗಳು, ಆದಾಯ ಬೆಂಬಲ, ಬೆಲೆ ಬೆಂಬಲ ಮತ್ತು ವಿಮಾ ಬೆಂಬಲದ ಮೂಲಕ ಅಪಾಯಗಳ ವ್ಯಾಪ್ತಿ, ತಂತ್ರಜ್ಞಾನಗಳ ಪ್ರಚಾರ ಮತ್ತು ಸ್ಟಾರ್ಟ್ಅಪ್ಗಳ ಮೂಲಕ ನಾವೀನ್ಯತೆಗಳಿಂದ ಸುಗಮಗೊಳಿಸಲಾಗಿದೆ. ”, ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಭಾಷಣದಲ್ಲಿ ವ್ಯವಸ್ಥೆಗಳನ್ನು ಪ್ರಸ್ತಾಪಿಸಿದರು. 

ಪ್ರಧಾನ ಮಂತ್ರಿ ಔಪಚಾರಿಕೀಕರಣದ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್ ಯೋಜನೆಯು 2.4 ಲಕ್ಷ ಸ್ವಸಹಾಯ ಸಂಘಗಳು ಮತ್ತು ಅರವತ್ತು ಸಾವಿರ ವ್ಯಕ್ತಿಗಳಿಗೆ ಕ್ರೆಡಿಟ್ ಲಿಂಕ್ಗಳೊಂದಿಗೆ ಸಹಾಯ ಮಾಡಿದೆ. ಸುಗ್ಗಿಯ ನಂತರದ ನಷ್ಟವನ್ನು ಕಡಿಮೆ ಮಾಡಲು ಮತ್ತು ಉತ್ಪಾದಕತೆ ಮತ್ತು ಆದಾಯವನ್ನು ಸುಧಾರಿಸುವ ಪ್ರಯತ್ನಗಳಿಗೆ ಇತರ ಯೋಜನೆಗಳು ಪೂರಕವಾಗಿವೆ. ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆಯು 38 ಲಕ್ಷ ರೈತರಿಗೆ ಪ್ರಯೋಜನವನ್ನು ನೀಡಿದೆ ಮತ್ತು 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ.  ಎಂದು ಹಣಕಾಸು ಸಚಿವರು ಹೇಳಿದರು. ಶ್ರೀಮತಿ. ಎಂದು ಸೀತಾರಾಮನ್ ಉಲ್ಲೇಖಿಸಿದ್ದಾರೆ. ಎಲೆಕ್ಟ್ರಾನಿಕ್ ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್ 1361 ಮಂಡಿಗಳನ್ನು ಸಂಯೋಜಿಸಿದೆ ಮತ್ತು ರೂ. 3 ಲಕ್ಷ ಕೋಟಿ ವ್ಯವಹಾರದೊಂದಿಗೆ 1.8 ಕೋಟಿ ರೈತರಿಗೆ ಸೇವೆಗಳನ್ನು ಒದಗಿಸುತ್ತಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹೇಳಿದರು. 

"ಇವುಗಳು ಮತ್ತು ಜೊತೆಗೆ ಮೂಲಭೂತ ಅವಶ್ಯಕತೆಗಳ ಪೂರೈಕೆಯು ಗ್ರಾಮೀಣ ಪ್ರದೇಶಗಳಲ್ಲಿ ನೈಜ ಆದಾಯವನ್ನು ಹೆಚ್ಚಿಸಿದೆ. ರೈತರ ಆರ್ಥಿಕ ಅಗತ್ಯಗಳನ್ನು ಪರಿಹರಿಸಬಹುದು, ಹೀಗಾಗಿ ಬೆಳವಣಿಗೆಯನ್ನು ಉತ್ತೇಜಿಸಬಹುದು ಮತ್ತು ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಕೇಂದ್ರ ಹಣಕಾಸು ಸಚಿವರು ವಿವರಿಸಿದರು
 
ಆತ್ಮನಿರ್ಭರ ತೈಲ ಭಿಜ (ಆಯಿಲ್ ಸೀಡ್ಸ್) ಅಭಿಯಾನ

ಸಾಸಿವೆ, ನೆಲಗಡಲೆ, ಎಳ್ಳು, ಸೋಯಾಬೀನ್ ಮತ್ತು ಸೂರ್ಯಕಾಂತಿಗಳಂತಹ ಎಣ್ಣೆ ಬೀಜಗಳಿಗೆ 'ಆತ್ಮನಿರ್ಭರತೆ' ಸಾಧಿಸಲು ಕಾರ್ಯತಂತ್ರವನ್ನು ರೂಪಿಸಲಾಗುವುದು. ಇದು ಹೆಚ್ಚು ಇಳುವರಿ ನೀಡುವ ತಳಿಗಳ ಸಂಶೋಧನೆ, ಆಧುನಿಕ ಕೃಷಿ ತಂತ್ರಗಳ ವ್ಯಾಪಕ ಅಳವಡಿಕೆ, ಮಾರುಕಟ್ಟೆ ಸಂಪರ್ಕಗಳು, ಸಂಗ್ರಹಣೆ, ಮೌಲ್ಯವರ್ಧನೆ ಮತ್ತು ಬೆಳೆ ವಿಮೆಯನ್ನು ಒಳಗೊಂಡಿರುತ್ತದೆ” ಎಂದು ಮಧ್ಯಂತರ ಬಜೆಟ್ 2024-25 ಅನ್ನು ಮಂಡಿಸುತ್ತಾ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಭಾಷಣದಲ್ಲಿ 'ಆತ್ಮನಿರ್ಭರತೆ' ಯನ್ನು ಉಲ್ಲೇಖಿಸಿದ್ದಾರೆ. 

ನ್ಯಾನೋ ಡಿಎಪಿ

"ನ್ಯಾನೋ ಯೂರಿಯಾವನ್ನು ಯಶಸ್ವಿಯಾಗಿ ಅಳವಡಿಸಿಕೊಂಡ ನಂತರ, ಎಲ್ಲಾ ಕೃಷಿ-ಹವಾಮಾನ ವಲಯಗಳಲ್ಲಿ ವಿವಿಧ ಬೆಳೆಗಳ ಮೇಲೆ ನ್ಯಾನೋ ಡಿಎಪಿಯನ್ನು ಅಳವಡಿಸಿಕೆಯನ್ನು ಅನ್ವಯಗೊಳಿಸಲಾಗುವುದು ಮತ್ತು ಎಲ್ಲಡೆಗೆ ನ್ನು ವಿಸ್ತರಿಸಲಾಗುವುದು." ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಭಾಷಣದಲ್ಲಿ ನ್ಯಾನೋ ಡಿಎಪಿಯನ್ನು ಪ್ರಸ್ತಾಪಿಸಿದ್ದಾರೆ.

****


(Release ID: 2001385) Visitor Counter : 251