ಸಂಪುಟ

​​​​​​​ಡಿಜಿಟಲ್ ಪರಿವರ್ತನೆಗಾಗಿ ಜನಸಂಖ್ಯಾ ಪ್ರಮಾಣದಲ್ಲಿ ಅಳವಡಿಸಲಾಗಿರುವ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಕೀನ್ಯಾ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟದ  ಅನುಮೋದನೆ

Posted On: 18 JAN 2024 12:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟಕ್ಕೆ ಡಿಸೆಂಬರ್ 5, 2023 ರಂದು ಡಿಜಿಟಲ್ ಪರಿವರ್ತನೆಗಾಗಿ ಜನಸಂಖ್ಯಾ ಪ್ರಮಾಣದಲ್ಲಿ ಅಳವಡಿಸಲಾದ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಕ ಭಾರತ ಸರ್ಕಾರದ ನಡುವೆ ಮತ್ತು  ಕೀನ್ಯಾದ ಮಾಹಿತಿ, ಸಂವಹನ ಮತ್ತು ಡಿಜಿಟಲ್ ಆರ್ಥಿಕತೆಯ ಸಚಿವಾಲಯದ ಮೂಲಕ ಕೀನ್ಯಾದ ಸರ್ಕಾರದ ನಡುವೆ ಸಹಿ ಹಾಕಲಾದ ತಿಳುವಳಿಕೆ ಒಪ್ಪಂದದ (ಎಂಒಯು) ಬಗ್ಗೆ ತಿಳಿಸಲಾಯಿತು.   

ವಿವರಗಳು:

ಎರಡೂ ದೇಶದ ಡಿಜಿಟಲ್ ಪರಿವರ್ತನಾ ಉಪಕ್ರಮಗಳ ಅನುಷ್ಠಾನದಲ್ಲಿ ನಿಕಟ ಸಹಕಾರ ಮತ್ತು ಅನುಭವಗಳ ವಿನಿಮಯ ಮತ್ತು ಡಿಜಿಟಲ್ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಉತ್ತೇಜಿಸುವುದು ಒಪ್ಪಂದದ ಉದ್ದೇಶವಾಗಿದೆ.

ಅನುಷ್ಠಾನ ತಂತ್ರ ಮತ್ತು ಗುರಿಗಳು:

ಈ ಒಪ್ಪಂದವು  ಎರಡೂ ಸರ್ಕಾರಗಳು ಸಹಿ ಮಾಡಿದ ದಿನಾಂಕದಿಂದ ಜಾರಿಗೆ ಬರುತ್ತದೆ ಮತ್ತು 3 ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ.

ಪರಿಣಾಮ:

ಜಿ2ಜಿ ಮತ್ತು ಬಿ2ಜಿ ದ್ವಿಪಕ್ಷೀಯ ಸಹಕಾರವನ್ನು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಕ್ಷೇತ್ರದಲ್ಲಿ ಹೆಚ್ಚಿಸಲಾಗುವುದು.

ಫಲಾನುಭವಿಗಳ ಸಂಖ್ಯೆ:

ಒಪ್ಪಂದವು  ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿಗೆ ಕಾರಣವಾಗುವ ಸುಧಾರಿತ ಸಹಯೋಗವನ್ನು ಕಲ್ಪಿಸುತ್ತದೆ.

ಹಿನ್ನೆಲೆ:

ಐಸಿಟಿ ಕ್ಷೇತ್ರದಲ್ಲಿ  ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಉತ್ತೇಜಿಸಲು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹಲವಾರು ದೇಶಗಳು ಮತ್ತು ಬಹುಪಕ್ಷೀಯ ಏಜೆನ್ಸಿಗಳೊಂದಿಗೆ ಸಹಯೋಗವನ್ನು ಹೊಂದಿದೆ.  ಈ ಅವಧಿಯಲ್ಲಿ, ಸಚಿವಾಲಯವು ಐಸಿಟಿ ಕ್ಷೇತ್ರದಲ್ಲಿ ಸಹಕಾರ ಮತ್ತು ಮಾಹಿತಿಯ ವಿನಿಮಯವನ್ನು ಉತ್ತೇಜಿಸಲು ವಿವಿಧ ದೇಶಗಳ ತನ್ನ ಕ್ಷೇತ್ರದ  ಸಂಸ್ಥೆಗಳು /ಏಜೆನ್ಸಿಗಳೊಂದಿಗೆ ಎಂಒಯುಗಳು/ಎಂಒಸಿಗಳು/ಒಪ್ಪಂದಗಳನ್ನು ಮಾಡಿಕೊಂಡಿದೆ. ಇದು ಡಿಜಿಟಲ್ ಇಂಡಿಯಾ, ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಮುಂತಾದ ಭಾರತ ಸರ್ಕಾರವು ದೇಶವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನದ ಆರ್ಥಿಕತೆಯಾಗಿ ಪರಿವರ್ತಿಸಲು ಕೈಗೊಂಡಿರುವ ವಿವಿಧ ಉಪಕ್ರಮಗಳಿಗೆ ಅನುಗುಣವಾಗಿದೆ. ಬದಲಾಗುತ್ತಿರುವ ಈ  ಸಂದರ್ಭದಲ್ಲಿ, ಪರಸ್ಪರ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವ, ಉತ್ತಮ ಅಭ್ಯಾಸಗಳ ಹಂಚಿಕೆ ಮತ್ತು ಡಿಜಿಟಲ್ ವಲಯದಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ತಕ್ಷಣದ ಅವಶ್ಯಕತೆಯಿದೆ.

ಕಳೆದ ಕೆಲವು ವರ್ಷಗಳಿಂದ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ (ಡಿಪಿ) ಅನುಷ್ಠಾನದಲ್ಲಿ ಭಾರತವು ತನ್ನ ಮುಂದಾಳತ್ವವನ್ನು ಪ್ರದರ್ಶಿಸಿದೆ ಮತ್ತು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿಯೂ ಸಾರ್ವಜನಿಕರಿಗೆ ಸೇವೆಗಳನ್ನು ಯಶಸ್ವಿಯಾಗಿ ತಲುಪಿಸಿದೆ. ಇದರ ಪರಿಣಾಮವಾಗಿ, ಅನೇಕ ದೇಶಗಳು ಭಾರತದ ಅನುಭವಗಳಿಂದ ಕಲಿಯಲು ಮತ್ತು ಭಾರತದೊಂದಿಗೆ  ಒಪ್ಪಂದಗಳನ್ನು  ಮಾಡಿಕೊಳ್ಳಲು ಆಸಕ್ತಿಯನ್ನು ತೋರಿಸಿವೆ.

ಇಂಡಿಯಾ ಸ್ಟಾಕ್ ಸೊಲ್ಯೂಷನ್ಗಳು ಸಾರ್ವಜನಿಕ ಸೇವೆಗಳ ಪ್ರವೇಶ ಮತ್ತು ವಿತರಣೆಯನ್ನು ಒದಗಿಸಲು ಜನಸಂಖ್ಯೆಯ ಪ್ರಮಾಣದಲ್ಲಿ ಭಾರತವು ಅಭಿವೃದ್ಧಿಪಡಿಸಿದ ಮತ್ತು ಜಾರಿಗೊಳಿಸಿದ ಡಿಪಿಐIಗಳಾಗಿವೆ. ಇದು ಸಂಪರ್ಕವನ್ನು ಹೆಚ್ಚಿಸಲು, ಡಿಜಿಟಲ್ ಸೇರ್ಪಡೆಯನ್ನು ಉತ್ತೇಜಿಸಲು ಮತ್ತು ಸಾರ್ವಜನಿಕ ಸೇವೆಗೆ ತಡೆರಹಿತ  ಲಭ್ಯತೆಯನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ. ಇವುಗಳನ್ನು ಮುಕ್ತ ತಂತ್ರಜ್ಞಾನಗಳ ಮೇಲೆ ನಿರ್ಮಿಸಲಾಗಿದೆ, ಪರಸ್ಪರ ಕಾರ್ಯಸಾಧ್ಯವಾಗಿದೆ ಮತ್ತು ನವೀನ ಮತ್ತು ಅಂತರ್ಗತ ಪರಿಹಾರಗಳನ್ನು ಉತ್ತೇಜಿಸುವ ಉದ್ಯಮ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಬಳಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.  ಪ್ರತಿ ದೇಶವು ಡಿಪಿಐ ಅನ್ನು ನಿರ್ಮಿಸುವಲ್ಲಿ ಅವುಗಳದೇ ಆದ ನಿರ್ದಿಷ್ಟ ಅಗತ್ಯಗಳು ಮತ್ತು ಸವಾಲುಗಳನ್ನು ಹೊಂದಿದ್ದರೂ, ಮೂಲಭೂತ ಕಾರ್ಯವು ಒಂದೇ ಆಗಿರುತ್ತದೆ, ಇದು ಜಾಗತಿಕ ಸಹಯೋಗಕ್ಕೆ ಅವಕಾಶ ನೀಡುತ್ತದೆ.


****



(Release ID: 1997287) Visitor Counter : 69