ಸಂಪುಟ

ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಈಕ್ವೆಡಾರ್ ದೇಶದ ನಡುವಿನ ತಿಳುವಳಿಕೆ ಒಪ್ಪಂದಕ್ಕೆ (ಎಂ.ಒ.ಯು) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

Posted On: 18 JAN 2024 12:58PM by PIB Bengaluru

07ನೇ ನವೆಂಬರ್ 2023 ರಂದು ಭಾರತ ಗಣರಾಜ್ಯ ಸರ್ಕಾರದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್  ಮತ್ತು ಏಜೆನ್ಸಿಯಾ ನ್ಯಾಶನಲ್ ಡಿ ರೆಗ್ಯುಲಕ್ಷನ್, ಕಂಟ್ರೋಲ್ ವೈ ವಿಜಿಲಾನ್ಸಿಯಾ ಸ್ಯಾನಿಟ್ರಿಯಾ – ಎ.ಆರ್.ಸಿ.ಎಸ್.ಎ., ಡಾಕ್ಟರ್ ಲಿಯೋಪೋಲ್ಡೊ ಇಜ್ಕ್ವಿಯೆಟಾ ಪೆರೆಜ್ ರಿಪಬ್ಲಿಕ್ ಆಫ್ ಈಕ್ವೆಡಾರ್ ನಡುವೆ ಸಹಿ ಮಾಡಿದ ತಿಳುವಳಿಕೆ ಪತ್ರದ ಬಗ್ಗೆ ಸಂಪುಟ ಸಭೆಗೆ ತಿಳಿಸಲಾಯಿತು.  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿ ಸಹಕಾರದ ಕುರಿತು ಭಾರತ ಮತ್ತು ರಿಪಬ್ಲಿಕ್ ಆಫ್ ಈಕ್ವೆಡಾರ್ ನಡುವಿನ ಈ ಮೇಲಿನ ತಿಳುವಳಿಕೆ ಒಪ್ಪಂದ (ಎಂ.ಒ.ಯು) ವನ್ನು ಅನುಮೋದಿಸಿದೆ

ಪ್ರಯೋಜನ:

ತಿಳುವಳಿಕೆ ಒಪ್ಪಂದವು ಎರಡು ದೇಶದ ನಡುವಿನ ನಿಯಂತ್ರಕ ಅಂಶಗಳ ಉತ್ತಮ ತಿಳುವಳಿಕೆಯನ್ನು ಸುಗಮಗೊಳಿಸುತ್ತದೆ ಮತ್ತು ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಉತ್ತಮ ಸಮನ್ವಯಕ್ಕೆ ಸಹಾಯ ಮಾಡುತ್ತದೆ.

ಉದ್ಯೋಗ ಸೃಷ್ಟಿ ಸಾಧ್ಯತೆ:

ತಿಳುವಳಿಕೆ ಒಪ್ಪಂದದ (ಎಂ.ಒ.ಯು) ಕಾರಣದಿಂದಾಗಿ ನಿಯಂತ್ರಕ ವ್ಯವಸ್ಥೆ ಮತ್ತು ಅಭ್ಯಾಸಗಳಲ್ಲಿ ಒಮ್ಮುಖವಾಗುವುದು, ಇದು  ಭಾರತದಿಂದ ರಿಪಬ್ಲಿಕ್ ಆಫ್ ಈಕ್ವೆಡಾರ್ ಗೆ ಔಷಧಿಗಳ ರಫ್ತುಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಇದರ ಪರಿಣಾಮವಾಗಿ ಔಷಧೀಯ ವಲಯದಲ್ಲಿ ವಿದ್ಯಾವಂತ ವೃತ್ತಿಪರರಿಗೆ ಉತ್ತಮ ಉದ್ಯೋಗಾವಕಾಶಗಳಿಗೆ ಸಹಾಯ ಮಾಡುತ್ತದೆ.

ಆತ್ಮನಿರ್ಭರ ಭಾರತ:

ವಿದೇಶಿ ವಿನಿಮಯ ಗಳಿಕೆಗೆ ಕಾರಣವಾಗುವ ವೈದ್ಯಕೀಯ ಉತ್ಪನ್ನಗಳ ರಫ್ತಿಗೆ ತಿಳುವಳಿಕೆ ಒಪ್ಪಂದವು (ಎಂ.ಒ.ಯು)  ಅನುಕೂಲ ಕಲ್ಪಿಸುತ್ತದೆ. ಇದು ಆತ್ಮನಿರ್ಭರ ಭಾರತಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಒಂದು ಪ್ರಧಾನ ಹೆಜ್ಜೆಯಾಗಿದೆ.

ಹಿನ್ನೆಲೆ:

ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್  ಸಂಸ್ಥೆಯು ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಡಿಯಲ್ಲಿರುವ (ಅಧೀನ) ಕಚೇರಿಯಾಗಿದೆ. ಇದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜೊತೆಯಲ್ಲಿ ರುವ ಕಚೇರಿಯಾಗಿದೆ. ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್  ಸಂಸ್ಥೆಯು ಭಾರತದಲ್ಲಿ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರವಾಗಿದೆ. ಏಜೆನ್ಸಿಯಾ ನ್ಯಾಶನಲ್ ಡಿ ರೆಗ್ಯುಲಕ್ಷನ್, ಕಂಟ್ರೋಲ್ ವೈ ವಿಜಿಲಾನ್ಸಿಯಾ ಸ್ಯಾನಿಟ್ರಿಯಾ – ಎ.ಆರ್.ಸಿ.ಎಸ್.ಎ., ಡಾಕ್ಟರ್ ಲಿಯೋಪೋಲ್ಡೊ ಇಜ್ಕ್ವಿಯೆಟಾ ಪೆರೆಜ್ ಸಂಸ್ಥೆಯು ರಿಪಬ್ಲಿಕ್ ಆಫ್ ಈಕ್ವೆಡಾರ್ ದೇಶದ ಔಷಧೀಯ ಉತ್ಪನ್ನಗಳನ್ನು ನಿಯಂತ್ರಿಸುವ ನಿಯಂತ್ರಕ ಸಂಸ್ಥೆಯಾಗಿದೆ.
 
*****



(Release ID: 1997279) Visitor Counter : 45