ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಲಕ್ಷದ್ವೀಪದ ತಮ್ಮ ಅನುಭವಗಳನ್ನು ಪ್ರಧಾನಿಯವರು ಹಂಚಿಕೊಂಡಿದ್ದಾರೆ

Posted On: 04 JAN 2024 3:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಕ್ಷದ್ವೀಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಅತ್ಯುತ್ತಮ ಆತಿಥ್ಯ ನೀಡಿದ ದ್ವೀಪದ ಜನರಿಗೆ ಧನ್ಯವಾದ ಅರ್ಪಿಸಿದರು.

ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನ ಮಂತ್ರಿ  ಪೋಸ್ಟ್ ಮಾಡಿದ್ದಾರೆ.

"ಇತ್ತೀಚೆಗೆ, ಲಕ್ಷದ್ವೀಪದಲ್ಲಿ ವಾಸ್ತವ್ಯ ಹೂಡುವ ಹಾಗೂ ಜನರ ನಡುವೆ ಇರಲು ನನಗೆ ಅವಕಾಶ ಸಿಕ್ಕಿತು. ದ್ವೀಪಗಳ ಅದ್ಭುತ ಸೌಂದರ್ಯ ಮತ್ತು ಜನರ ಆತ್ಮೀಯತೆ ನಾನು ವಿಸ್ಮಯಗೊಂಡಿದ್ದೇನೆ. ಅಗತ್ತಿ, ಬಂಗಾರಮ್ ಮತ್ತು ಕವರಟ್ಟಿಯಲ್ಲಿ ಜನರೊಂದಿಗೆ ಸಂವಹನ ನಡೆಸಲು ನನಗೆ ಅವಕಾಶ ಸಿಕ್ಕಿತು. ದ್ವೀಪದ ಜನರಿಗೆ ಅವರ ಆತಿಥ್ಯಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಲಕ್ಷದ್ವೀಪ ಪ್ರವಾಸದ ಪ್ರಮುಖ ಆತ್ಮೀಯ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ" ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.

***


(Release ID: 1993115) Visitor Counter : 100