ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಿಎಂಡಿಕೆ ಸಂಸ್ಥಾಪಕ ವಿಜಯಕಾಂತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ 

Posted On: 28 DEC 2023 11:06AM by PIB Bengaluru

ಡಿಎಂಡಿಕೆ ಸಂಸ್ಥಾಪಕರಾದ ಶ್ರೀ ವಿಜಯಕಾಂತ್‌ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.  

ಶ್ರೀ ವಿಜಯಕಾಂತ್‌ ಅವರು ತಮಿಳುನಾಡಿನ ಸಾರ್ವಜನಿಕ ಸೇವೆ, ರಾಜಕೀಯ ಕ್ಷೇತ್ರದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ನೆನಪು ಮಾಡಿಕೊಂಡಿದ್ದಾರೆ. 

ಪ್ರಧಾನಮಂತ್ರಿಯವರು ಎಕ್ಸ್‌ ನಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ:

“ತಿರು ವಿಜಯಕಾಂತ್‌ ಜೀ ಅವರ ಹಠಾತ್ ನಿಧನ ತೀವ್ರ ದುಃಖ ತರಿಸಿದೆ. ತಮಿಳು ಸಿನೆಮಾ ಕ್ಷೇತ್ರದ ದಂತಕಥೆ, ಅವರ ವರ್ಚಸ್ವಿ ಪ್ರದರ್ಶನ ಲಕ್ಷಾಂತರ ಹೃದಯಗಳನ್ನು ಗೆದ್ದಿವೆ. ರಾಜಕೀಯ ನೇತಾರರಾಗಿ ಅವರು ಸಾರ್ವಜನಿಕ ಸೇವೆಗಾಗಿ ತೀವ್ರ ಬದ್ಧತೆ ಹೊಂದಿದ್ದರು. ತಮಿಳುನಾಡಿನ ರಾಜಕೀಯ ಭೂ ಸದೃಶ್ಯದಲ್ಲಿ ಅಚ್ಚಳಿಯದ ಪ್ರಭಾವ ಬೀರಿದ್ದಾರೆ. ಅವರ ನಿರ್ಗಮನದಿಂದ ತುಂಬಲು ಅಸಾಧ್ಯವಾದ ಶೂನ್ಯ ಆವರಿಸಿದಂತಾಗಿದೆ. ಅವರು ನನ್ನ ಅತ್ಮೀಯ ಸ್ನೇಹಿತರಾಗಿದ್ದರು ಮತ್ತು ಅವರೊಂದಿಗೆ ವರ್ಷಗಳಿಂದ ನಡೆಸಿದ ಸಂವಾದವನ್ನು ಸ್ಮರಿಸಿಕೊಳ್ಳುತ್ತೇನೆ. ಇದು ದುಃಖದ ಸಮಯವಾಗಿದ್ದು, ಅವರ ಕುಟುಂಬ, ಅಭಿಮಾನಿಗಳು ಮತ್ತು ಅಸಂಖ್ಯಾತ ಹಿಂಬಾಲಕರೊಂದಿಗೆ ನನ್ನ ಆಲೋಚನೆಗಳಿವೆ. ಓಂ ಶಾಂತಿ.”

*****


(Release ID: 1991183) Visitor Counter : 76