ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಮಂಗಳಮುಖಿಯರ ಸಬಲೀಕರಣ: ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಪ್ರಮುಖ ಕಥೆಗಳು
PM ಸ್ವನಿಧಿ - ಕನಸುಗಳನ್ನು ನನಸು ಮಾಡುವುದು, ಉದ್ಯಮ ಶಕ್ತಿಯನ್ನು ಹೊರಹೊಮ್ಮಿಸುತ್ತಿದೆ.
Posted On:
21 DEC 2023 1:21PM by PIB Bengaluru
'ವಿಕಸಿತ ಭಾರತ ಸಂಕಲ್ಪ ಯಾತ್ರೆ' ಭಾರತದಾದ್ಯಂತ ಭರವಸೆಯ ಆಶಾಕಿರಣ ಹೊರಹೊಮ್ಮಿದೆ. ಲಕ್ಷಾಂತರ ಜನರನ್ನು ಸಂಪರ್ಕಿಸುತ್ತದೆ ಮತ್ತು ಅಭಿವೃದ್ಧಿಯ ಚೈತನ್ಯವನ್ನು ಪೋಷಿಸಿದೆ. ಇದು ಉಜ್ವಲ ಭವಿಷ್ಯದ ಸಾಮೂಹಿಕ ಕನಸನ್ನು ಬೆಳೆಸುವ ವೈವಿಧ್ಯಮಯ ಹಿನ್ನೆಲೆಗಳಿಂದ ಅಸಂಖ್ಯಾತ ವ್ಯಕ್ತಿಗಳನ್ನು ಸಂಪರ್ಕಿಸುತ್ತದೆ.
ಅಂಕಿಅಂಶಗಳು ಪ್ರಗತಿಯ ಚಿತ್ರಣವನ್ನು ಬಿಡಿಸಿವೆ. ಕೆಲವು ಕಥೆಗಳು ಅಸಂಖ್ಯ ಅನುಭವಗಳನ್ನು ನೀಡುತ್ತಿವೆ. ನಮ್ಮ ಭಾವನೆಗಳೊಂದಿಗೆ ಮಿಳಿತಗೊಂಡಿವೆ. ಅಂತಹ ಒಂದು ಕಥೆಯು ನೀಲೇಶ್ ಎಂಬ ಮಂಗಳಮುಖಿಯದ್ದು. ಅವರು ಕ್ಯಾಟರಿಂಗ್ ಜಗತ್ತಿನಲ್ಲಿ ಯಶಸ್ವಿ ಹಾದಿಯಲ್ಲಿ ಸಾಗಿದ್ದಾರೆ.
PM ಸ್ಟ್ರೀಟ್ ವೆಂಡರ್ಸ್ ಆತ್ಮ ನಿರ್ಭರ್ ನಿಧಿ (PM SVANIdhi) ಯೋಜನೆ ಮೂಲಕ, ಮಹಾರಾಷ್ಟ್ರದ ವಾರ್ಧಾ ನಿವಾಸಿ ನೀಲೇಶ್ ಅವರು 10,000 ರೂ ಸಾಲವನ್ನು ಪಡೆದರು, ಇದು ಉದ್ಯಮಶೀಲ ಪ್ರಯಾಣಕ್ಕೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಿತು. ನಿಲೇಶ್ ಅನೇಕ ಆರಂಭಿಕ ಸವಾಲುಗಳನ್ನು ಎದುರಿಸಿದರು, ಆದರೆ ಅಚಲವಾದ ನಿರ್ಣಯ ಮತ್ತು ಸಕಾರಾತ್ಮಕ ಮನೋಭಾವದಿಂದ ಅಡುಗೆ ವ್ಯಾಪಾರವನ್ನು ಸ್ಥಾಪಿಸಲು ಸಹಾಯ ಮಾಡಿತು. ನೀಲೇಶ್ ಕೇವಲ ಅಡುಗೆ ಉದ್ಯಮವನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ, 'ಮೋಹಿನಿ ಬಚತ್ ಗತ್' ಎಂಬ ಸ್ವ-ಸಹಾಯ ಗುಂಪನ್ನು ರಚಿಸುವ ಮೂಲಕ ಇತರರಿಗೆ ಸ್ಫೂರ್ತಿಯಾದರು. ಅಲ್ಲಿ ಇತರೆ ಮಂಗಳಮುಖಿಯರು ಮತ್ತು ಮಹಿಳೆಯರು ಆರ್ಥಿಕ ಸಬಲೀಕರಣಕ್ಕಾಗಿ ನೆರವು ಒದಗಿಸಲಾಯಿತು. ನೀಲೇಶ್ ಅವರ ಕಥೆಯು ಸಾಮಾಜಿಕ ಅಡೆತಡೆಗಳನ್ನು ನಿವಾರಿಸಲು ಮತ್ತು ಅವರ ಕನಸುಗಳನ್ನು ನನಸು ಮಾಡಲು ಪ್ರೇರೇಪಿಸಿತು. ನಿಲೇಶ್ ಅವರು PM SVANIdhi ಯೋಜನೆಯನ್ನು "ವರದಾನ" ಎಂದು ಅವರು ಹೇಳುತ್ತಾರೆ. ಇದು ಅವರ ಸಾಮರ್ಥ್ಯವನ್ನು ಅನಾವರಣಗೊಳಿಸಲು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಲು ಅನುವು ಮಾಡಿಕೊಟ್ಟಿದೆ.
ಈ ಯಶಸ್ಸಿನ ಅಧ್ಯಾಯದಲ್ಲಿ ಮತ್ತೊಂದು ಕಥೆ ಕೂಡ ಇದೆ. ತಮ್ಮ ಅನುಭವಗಳನ್ನು ಪ್ರಧಾನ ಮಂತ್ರಿಯಲ್ಲದೆ ಬೇರೆಯವರೊಂದಿಗೆ ಹಂಚಿಕೊಂಡ ಮಂಗಳಮುಖಿ ಉದ್ಯಮಿ ಶ್ರೀಮತಿ ಮೋನಾ ಅವರ ಯಶಸ್ಸಿನ ಪ್ರಯಾಣ ಇನ್ನೊಂದು ಪ್ರಮುಖ ಘಟ್ಟವಾಗಿದೆ.
ಮೋನಾ ಅವರ ಪ್ರಯಾಣವು ಚಂಡೀಗಢದಲ್ಲಿ ಪ್ರಾರಂಭವಾಯಿತು, ಅಲ್ಲಿ ಅವರು ಸಣ್ಣ ಟೀ ಸ್ಟಾಲ್‌ನೊಂದಿಗೆ ಸ್ಥಿತಿಸ್ಥಾಪಕತ್ವ ಮತ್ತು ಸ್ವಾವಲಂಬನೆ ಹೊಂದಲು ಮುಂದಾದರು. PM ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ (PM SVANIdhi) ಯೋಜನೆಯಿಂದ ರೂ 10,000 ಸಾಲದೊಂದಿಗೆ ಆರಂಭಿಸಿದರು. ಒಂದು ಸಣ್ಣ ಟೀ ಸ್ಟಾಲ್ ಆಕೆಗೆ ಆರ್ಥಿಕ ಸ್ವಾತಂತ್ರ್ಯದ ಹಾದಿಯನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿತು. ನಂತರ ಅವರು ಕ್ರಮವಾಗಿ ರೂ 20,000 ಮತ್ತು ರೂ 50,000 ಸಾಲ ಪಡೆದರು. ಅದು ಅವರ ಪ್ರಯಾಣವನ್ನು ಇನ್ನಷ್ಟು ಗಟ್ಟಿಗೊಳಿಸಿತು. PM SVANIdhi ಅವರು ಮೋನಾಗೆ ಸಾಮಾಜಿಕ ಪೂರ್ವಾಗ್ರಹಗಳಿಂದ ಪಾರಾಗಲು ಅವಕಾಶ ಮಾಡಿಕೊಟ್ಟಿತು. ಮಂಗಳಮುಖ ಸಮುದಾಯವನ್ನು ಹೆಚ್ಚಾಗಿ ಕಡೆಗಣಿಸುವ ಜಗತ್ತಿನಲ್ಲಿ ತನಗಾಗಿ ಒಂದು ಜಾಗವನ್ನು ರೂಪಿಸಿಕೊಳ್ಳಲು ಇದು ನೆರವಾಗಿದೆ.
ನೀಲೇಶ್ ಮತ್ತು ಮೋನಾ ಅವರ ಪರಿವರ್ತನೆಯ ಪ್ರಯಾಣಗಳು ಕೇವಲ ವೈಯಕ್ತಿಕ ವಿಜಯಗಳಲ್ಲ; ಅವರು ಪ್ರಗತಿ ಮತ್ತು ಸಬಲೀಕರಣದ ಸಂಕೇತವಾಗಿ ಹೊರಹೊಮ್ಮಿದ್ದಾರೆ. ಅವರ ಯಶಸ್ಸಿನ ಪ್ರಯಾಣದ ಅನುಭವಗಳ ಹಂಚಿಕೆಯೊಂದಿಗೆ ಇದು ವ್ಯಕ್ತವಾಗಿದೆ. ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯು ಬೀದಿ ವ್ಯಾಪಾರಿಗಳನ್ನು ಆರ್ಥಿಕ ತೆಕ್ಕೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ,
ಡಿಸೆಂಬರ್ 20 ರ ಹೊತ್ತಿಗೆ, 57 ಲಕ್ಷಕ್ಕೂ ಹೆಚ್ಚು ಜನರು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. ಪ್ರಗತಿಯು ಕೇವಲ ಸಂಖ್ಯಾತ್ಮಕ ಮೈಲಿಗಲ್ಲುಗಳು ಮಾತ್ರವಲ್ಲ ಸಂಪೂರ್ಣ ಸಾಮರ್ಥ್ಯವನ್ನು ಹೊರಹಾಕಲು ಅನುವು ಮಾಡಿಕೊಟ್ಟಿದೆ. ಇದೊಂದು ಗಣನೀಯ ಕೊಡುಗೆ ನೀಡಿದೆ ಎಂಬುದು ಇವರ ಯಶೋಗಾಥೆಗಳು ನೆನಪಿಸುತ್ತವೆ. ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯು ಸಂಪರ್ಕ ಮತ್ತು ಸಬಲೀಕರಣದ ಧ್ಯೇಯದಲ್ಲಿ ಮುಂದುವರಿದಂತೆ, ಅಂತಹ ಕಥೆಗಳು ಪ್ರತಿಯೊಬ್ಬರಿಗೂ ಉಜ್ವಲ ಭವಿಷ್ಯದತ್ತ ನಮ್ಮನ್ನು ಪ್ರೇರೇಪಿಸುವ ಮತ್ತು ಮುನ್ನಡೆಸುವಲ್ಲಿ ನಿರಂತರವಾಗಿರುತ್ತವೆ. ಈ ನಿಟ್ಟಿನಲ್ಲಿ ಎಲ್ಲರೂ ವಿಶ್ವಾಸದಿಂದ ನಿರೀಕ್ಷಿಸಬಹುದು.
References
******
(Release ID: 1989221)
Visitor Counter : 365
Read this release in:
Punjabi
,
English
,
Urdu
,
Hindi
,
Marathi
,
Assamese
,
Bengali
,
Bengali-TR
,
Gujarati
,
Odia
,
Tamil
,
Telugu