ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕುವೈತ್‌ ನ ನೂತನ ಎಮಿರ್‌ ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

Posted On: 20 DEC 2023 10:22PM by PIB Bengaluru

ಕುವೈತ್‌ ನ ನೂತನ ಎಮಿರ್ ಆಗಿ ಅಧಿಕಾರ ವಹಿಸಿಕೊಂಡ ಘನತೆವೆತ್ತ ಶ್ರೀ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು.

ಭವಿಷ್ಯದಲ್ಲಿ ಭಾರತ-ಕುವೈತ್ ಸಂಬಂಧಗಳು ಇನ್ನೂ ಬಲಗೊಳ್ಳಲಿದ್ದು, ಮಧ್ಯಪ್ರಾಚ್ಯ ದೇಶದಲ್ಲಿರುವ ಭಾರತೀಯ ಸಮುದಾಯವು ಪ್ರವರ್ಧಮಾನಕ್ಕೆ ಬರಲಿದೆ ಎಂದು ಪ್ರಧಾನಮಂತ್ರಿಯವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ನೀಡಿದ್ದಾರೆ:

"ಕುವೈತ್ ದೇಶದ ಅಮೀರ್ ಆಗಿ ಅಧಿಕಾರ ವಹಿಸಿಕೊಂಡ ಘನತೆವೆತ್ತ ಶ್ರೀ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರಿಗೆ ಶುಭಾಶಯಗಳು ಮತ್ತು ಅಭಿನಂದನೆಗಳು. ಮುಂಬರುವ ವರ್ಷಗಳಲ್ಲಿ ನಮ್ಮ ಸಂಬಂಧಗಳು ಮತ್ತಷ್ಟು ಬಲಗೊಳ್ಳುತ್ತವೆ ಮತ್ತು ಕುವೈತ್‌ ನಲ್ಲಿರುವ ಭಾರತೀಯ ಸಮುದಾಯದ ಏಳಿಗೆ ಸದಾ ಮುಂದುವರಿಯುತ್ತದೆ ಎಂಬ ವಿಶ್ವಾಸವಿದೆ."

***

 


(Release ID: 1989018) Visitor Counter : 76