ಪ್ರಧಾನ ಮಂತ್ರಿಯವರ ಕಛೇರಿ

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವು ಒತ್ತಡವನ್ನು ಯಶಸ್ಸಿಗೆ ಪರಿವರ್ತಿಸುವ ಗುರಿ ಹೊಂದಿದೆ, ಪರೀಕ್ಷಾ ಯೋಧರು ನಗು ಮೊಗದಿಂದ ಪರೀಕ್ಷೆಗಳನ್ನು ಎದುರಿಸಲು ಅನುವು ಮಾಡಿಕೊಡುತ್ತದೆ: ಪ್ರಧಾನಿ

Posted On: 14 DEC 2023 9:50PM by PIB Bengaluru

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವು ವಿದ್ಯಾರ್ಥಿಗಳ ಒತ್ತಡವನ್ನು ಯಶಸ್ಸಿಗೆ ಪರಿವರ್ತಿಸುವ ಉದಾತ್ತ ಗುರಿ ಹೊಂದಿದೆ.  ಪರೀಕ್ಷಾ ಯೋಧರು ನಗು ಮೊಗದಿಂದ ಪರೀಕ್ಷೆಗಳನ್ನು ಎದುರಿಸಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು,

ಈ ಕುರಿತು X ನಲ್ಲಿ ಪೋಸ್ಟ್‌ ಮಾಡಿರುವ ಶಿಕ್ಷಣ ಸಚಿವಾಲಯವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಪರೀಕ್ಷಾ ಪೆ ಚರ್ಚಾ-2024 ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸಿದೆ ಎಂದರು.

ಕೆಳಗೆ ನೀಡಿರುವ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಯಾರಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಶಿಕ್ಷಣ ಸಚಿವಾಲಯದ ಪೋಸ್ಟ್‌ನ ಪ್ರಕಾರ, ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ವಿದ್ಯಾರ್ಥಿಗಳು ನೇರವಾಗಿ ಸಂವಾದ ನಡೆಸುವ ಅವಕಾಶ ಪಡೆಯಬಹುದು. ಲಿಂಕ್ ಕೆಳಗಿನಂತಿದೆ.

https://innovateindia.mygov.in/ppc-2024/

ಶಿಕ್ಷಣ ಸಚಿವಾಲಯದ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ;

“#ParikshaPeCharcha ಒತ್ತಡವನ್ನು ಯಶಸ್ಸಿನತ್ತ ಪರಿವರ್ತಿಸುವ ಗುರಿ ಹೊಂದಿದೆ, #ExamWarriors ನಗು ಮುಖದೊಂದಿಗೆ ಪರೀಕ್ಷೆಗಳನ್ನು ಎದುರಿಸಲು ಇದು ಅನುವು ಮಾಡಿಕೊಡುತ್ತದೆ. ಯಾರಿಗೆ ಗೊತ್ತು, ಮುಂದಿನ ದೊಡ್ಡ ಅಧ್ಯಯನದ ಮಾದರಿ ಅಥವಾ ಅನುಕರಣೀಯ ಸಲಹೆಯು ನಮ್ಮ ಸಂವಾದಾತ್ಮಕ ಅಧಿವೇಶನದಿಂದಲೇ ನೇರವಾಗಿ ಬರಬಹುದು ಎಂದಿದ್ದಾರೆ!

 

***

 



(Release ID: 1986595) Visitor Counter : 76