ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯು 2 ಕೋಟಿ ದಾಟಿದೆ; 1 ಕೋಟಿಗೂ ಹೆಚ್ಚು ಜನರು ಯಾತ್ರೆಯಲ್ಲಿ ಸೇರಿ ಭಾಗವಹಿಸುವವರ ಸಂಖ್ಯೆಯ ಕೇವಲ 7 ದಿನಗಳಲ್ಲಿ ದ್ವಿಗುಣ.
Posted On:
14 DEC 2023 3:22PM by PIB Bengaluru
ಸಾರ್ವಜನಿಕ ಬೆಂಬಲದ ಗಮನಾರ್ಹ ಪ್ರದರ್ಶನದಲ್ಲಿ, ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಒಂದು ಮೈಲಿಗಲ್ಲನ್ನು ತಲುಪಿ, ಒಂದು ತಿಂಗಳೊಳಗೆ 2 ಕೋಟಿ ಭಾಗವಹಿಸುವವರನ್ನು ಮೀರಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆಯಲ್ಲಿನ ಈ ಅಭೂತಪೂರ್ವ ಏರಿಕೆಯು ಯಾತ್ರೆಯ ಆಳವಾದ ಪ್ರಭಾವ ಮತ್ತು ಅಭಿವೃದ್ಧಿಯ ಸಾಮೂಹಿಕ ಅನ್ವೇಷಣೆಯಲ್ಲಿ ಲಕ್ಷಾಂತರ ಜನರನ್ನು ಒಂದುಗೂಡಿಸುವ ಅದರ ಅದ್ಭುತ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.
ಮೊದಲನೆಯ ಕೋಟಿಯನ್ನು 22 ದಿನಗಳಲ್ಲಿ ಮುಟ್ಟಿದರೆ, ಎರಡನೆಯ ಕೋಟಿ ತಲುಪಲು ಕೇವಲ 7 ದಿನಗಳು ಬೇಕಾಯಿತು ಎನ್ನುವ ಅಂಶದಿಂದ ಯಾತ್ರೆಯ ಬೆಳವಣಿಗೆಯ ವೇಗವನ್ನು ಅಳೆಯಬಹುದು. ಹಾದುಹೋಗುವ ಪ್ರತಿ ದಿನದೊಂದಿಗೆ, ಯಾತ್ರೆಯ ವ್ಯಾಪ್ತಿಯು ವಿಸ್ತರಿಸುತ್ತಿದೆ ಮತ್ತು ಸಾರ್ವಜನಿಕರಿಂದ ಅಗಾಧವಾದ ಧನಾತ್ಮಕ ಪ್ರತಿಕ್ರಿಯೆಯನ್ನು ಪಡೆಯುವುದನ್ನು ಮುಂದುವರೆಸುತ್ತಿದೆ, ಹಾಗೂ ಅದರ ಬಲವಾದ ಆವೇಗವನ್ನು ಉಳಿಸಿಕೊಂಡಿದೆ.
ಯಾತ್ರೆಯು ಸುಮಾರು 60,000 ಗ್ರಾಮ ಪಂಚಾಯತಿಗಳನ್ನು ತಲುಪಿದ್ದು, ದೇಶದ ಮೂಲೆ ಮೂಲೆಗಳಲ್ಲಿ ಪ್ರಗತಿ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 2047 ರ ವೇಳೆಗೆ ವಿಕಸಿತ ಭಾರತಕ್ಕಾಗಿ ಶ್ರಮಿಸುವ ನಿಟ್ಟಿನಲ್ಲಿ ಸಂಕಲ್ಪವನ್ನು ತೊಡುವ 1.6 ಕೋಟಿಗೂ ಹೆಚ್ಚು ನಾಗರಿಕರೊಂದಿಗೆ ಯಾತ್ರೆಯು ತನ್ನ ಪರಿಣಾಮವನ್ನು ಕಡಿಮೆ ಅವಧಿಯಲ್ಲಿ ಬೀರಿದೆ. ಯಾತ್ರೆಯ "ಮೇರಿ ಕಹಾನಿ, ಮೇರಿ ಜುಬಾನಿ" (ನನ್ನ ಕಥೆ ನನ್ನ ಮಾತುಗಳಲ್ಲಿ) ಉಪಕ್ರಮದ ಭಾಗವಾಗಿ, 1.30 ಕೋಟಿಗೂ ಹೆಚ್ಚು ಜನರು ತಮ್ಮ ವೈಯಕ್ತಿಕ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ದೇಶದಾದ್ಯಂತ ನಾಗರಿಕರು ವೈವಿಧ್ಯಮಯ ಅನುಭವಗಳು ಮತ್ತು ಆಕಾಂಕ್ಷೆಗಳನ್ನು ಪ್ರದರ್ಶಿಸಿದರು.
ಯಾತ್ರೆಯ ಪ್ರಮುಖ ವಿಷಯಗಳಲ್ಲಿ ಒಂದಾಗಿರುವ ನಾಗರಿಕರ ಯೋಗಕ್ಷೇಮದೊಂದಿಗೆ, ದೇಶದಾದ್ಯಂತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಮತ್ತು ಇಲ್ಲಿಯವರೆಗೆ, 42 ಲಕ್ಷಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ.
ಒಂದು ರಾಷ್ಟ್ರ, ಒಂದು ಪ್ರಯಾಣ
ಯಾತ್ರೆಯನ್ನು ಎಲ್ಲಾ ಪ್ರದೇಶಗಳಲ್ಲಿ ತುಂಬು ಹೃದಯದಿಂದ ಸ್ವೀಕರಿಸಲಾಗಿದ್ದು, ಯಾತ್ರೆಯು ಸರ್ಕಾರಿ ಸೇವೆಗಳು ಮತ್ತು ಬೆಂಬಲವನ್ನು ತಲುಪಿಸಲು ನೇರವಾದ ಮಾರ್ಗವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅತ್ಯಂತ ದೂರದ ಪ್ರದೇಶಗಳನ್ನು ಸಹ ತಲುಪುತ್ತದೆ. ಭಾಗವಹಿಸುವಿಕೆಯ ವಿಷಯದಲ್ಲಿ, ಉತ್ತರ ಪ್ರದೇಶವು ಸುಮಾರು 80 ಲಕ್ಷ ಭಾಗವಹಿಸುವವರೊಂದಿಗೆ ಮುಂಚೂಣಿಯಲ್ಲಿದೆ, 29 ಲಕ್ಷಕ್ಕೂ ಹೆಚ್ಚು ಭಾಗವಹಿಸುವವರೊಂದಿಗೆ ಮಹಾರಾಷ್ಟ್ರ ನಂತರದ ಸ್ಥಾನದಲ್ಲಿದೆ ಮತ್ತು 23 ಲಕ್ಷಕ್ಕೂ ಹೆಚ್ಚು ಭಾಗವಹಿಸುವವರೊಂದಿಗೆ ಗುಜರಾತ್ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇಲ್ಲಿಯವರೆಗೆ ಉತ್ತೇಜಕ ಪ್ರತಿಕ್ರಿಯೆಯೊಂದಿಗೆ 16 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. 11 ಲಕ್ಷಕ್ಕೂ ಹೆಚ್ಚು ಭಾಗವಹಿಸುವವರೊಂದಿಗೆ ಆಂಧ್ರ ಪ್ರದೇಶವು ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ.
ಸರ್ಕಾರಿ ಯೋಜನೆಗಳ 100% ಜಾರಿಗೊಳಿಸುವಿಕೆ
ವಿಕಸಿತ ಭಾರತ ಸಂಕಲ್ಪ ಯಾತ್ರೆಯು ದೇಶ ವ್ಯಾಪಿಯ ಪ್ರಯತ್ನವಾಗಿದ್ದು, ಸರ್ಕಾರದ ಪ್ರಮುಖ ಉಪಕ್ರಮಗಳ 100% ಜಾರಿಗೊಳಿಸುವಿಕೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ, ಅವುಗಳ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳನ್ನು ತಲುಪುವುದನ್ನು ಖಚಿತಪಡಿಸುತ್ತದೆ.
(ಹೊಸದಿಲ್ಲಿಯ ಬಾರಾ ಹಿಂದೂ ರಾವ್ ನಲ್ಲಿ ' ವಿಕಸಿತ ಭಾರತ ಸಂಕಲ್ಪ ಯಾತ್ರೆ'ಯ ಸಂದರ್ಭದಲ್ಲಿ ಸ್ಥಾಪಿಸಲಾದ ಸೆಲ್ಫಿ ಪಾಯಿಂಟ್ ನಲ್ಲಿ ಮಹಿಳೆಯೊಬ್ಬರು ಫೋಟೋಗಾಗಿ ನಿಂತಿದ್ದಾರೆ)
ಯಾತ್ರೆಯ ಸಮಯದಲ್ಲಿ ಸಾಧಿಸಿದ ಮೈಲಿಗಲ್ಲುಗಳು ಗಮನಾರ್ಹವಾಗಿವೆ: 29,000 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ಸಂಪೂರ್ಣ ವ್ಯಾಪ್ತಿಯನ್ನು ಸಾಧಿಸಿವೆ, ಆಯುಷ್ಮಾನ್ ಕಾರ್ಡ್ ಗಳ 100% ವಿತರಣೆ; 18,000 ಕ್ಕೂ ಹೆಚ್ಚು ಗ್ರಾಮ ಪಂಚಾಯತಗಳು 'ಹರ್ ಘರ್ ಜಲ್' (ಪ್ರತಿ ಮನೆಯಲ್ಲಿ ನೀರು)ಯೋಜನೆ 100% ತಲುಪಿವೆ; 34,000 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣವನ್ನು ಸಾಧಿಸಿವೆ; ಮತ್ತು ಸ್ವಚ್ಛ ಭಾರತ ಉಪಕ್ರಮಕ್ಕೆ ಬೆಂಬಲವಾಗಿ, 9,000 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ಒಡಿಎಫ್ ಪ್ಲಸ್ ಮಾದರಿಯೊಂದಿಗೆ 100% ಅನುಸರಣೆಗಾಗಿ ಮಾನದಂಡಗಳನ್ನು ಪೂರೈಸುತ್ತವೆ.
ಪರಿವರ್ತನಾ ಯಾತ್ರೆಯಲ್ಲಿ ತೊಡಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನವೆಂಬರ 15 ರಂದು ಜಾರ್ಖಂಡ್ ನ ಖುಂಟಿಯಿಂದ ಪ್ರಾರಂಭಿಸಿದ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಭಾರತದಾದ್ಯಂತ ನಾಗರಿಕರೊಂದಿಗೆ ಗಾಢವಾದ ಸಂಪರ್ಕವನ್ನು ಬೆಳೆಸುತ್ತಿದೆ. ಈ ಮಹತ್ವಾಕಾಂಕ್ಷೆಯ ಉಪಕ್ರಮವು ಸರ್ಕಾರ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ಸಮುದಾಯಗಳನ್ನು ಸಬಲೀಕರಣಗೊಳಿಸುತ್ತದೆ ಮತ್ತು ಅಂತರ್ಗತ ಮತ್ತು ವಿಕಸಿತ ಭಾರತಕ್ಕೆ ಅಡಿಪಾಯವನ್ನು ಹಾಕುತ್ತದೆ.
****
(Release ID: 1986553)
Visitor Counter : 83
Read this release in:
English
,
Urdu
,
Marathi
,
Hindi
,
Nepali
,
Bengali-TR
,
Bengali
,
Assamese
,
Punjabi
,
Gujarati
,
Odia
,
Tamil
,
Malayalam