ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

​​​​​​​ವಿಕಸಿತ ಭಾರತ ಸಂಕಲ್ಪ ಯಾತ್ರೆ: ಆರೋಗ್ಯ ಮತ್ತು ಸ್ವಾಸ್ಥ್ಯ ವೃದ್ಧಿಗೆ ಆದ್ಯತೆ 


26,000 ಸಾವಿರಕ್ಕೂ ಅಧಿಕ ಗ್ರಾಮ ಪಂಚಾಯ್ತಿಗಳಿಂದ ಶೇ.100 ರಷ್ಟು ಆಯುಷ್ಮಾನ್ ಕಾರ್ಡ್ ಗಳ ಸ್ಥಾನಮಾನ ಸಾಧನೆ

"ಪ್ರತಿಯೊಬ್ಬ ಬಡವರಿಗೂ ಉಚಿತ ಪಡಿತರ ಚೀಟಿ, ಉಜ್ವಲಾ ಯೋಜನೆಯಿಂದ ಅಡುಗೆ ಅನಿಲ ಸಂಪರ್ಕ, ಮನೆಗಳಿಗೆ ವಿದ್ಯುತ್ ಸರಬರಾಜು, ಕೊಳಾಯಿ ನೀರಿನ ಸಂಪರ್ಕ, ಆಯುಷ್ಮಾನ್ ಕಾರ್ಡ್ ಮತ್ತು ಪಕ್ಕಾ ಮನೆಗಳನ್ನು ಪಡೆಯುವ ದಿನವನ್ನು ನಾನು ಎದುರು ನೋಡುತ್ತಿದ್ದೇನೆ"

Posted On: 13 DEC 2023 2:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ನವೆಂಬರ್ 15ರಂದು ಚಾಲನೆ ನೀಡಿದ ವಿಕಸಿತ ಭಾರತ ಸಂಕಲ್ಪ ಯಾತ್ರೆ ತಳಮಟ್ಟದಲ್ಲಿರುವ ಜನರ ಆರೋಗ್ಯ ಉಪಕ್ರಮಗಳ ಪ್ರಯೋಜನಗಳನ್ನು ಉತ್ತೇಜಿಸುವ ಉತ್ಕೃಷ್ಟ ವೇದಿಕೆಯಾಗಿದೆ. ಐಇಸಿ ಸಂಚಾರಿ ವ್ಯಾನ್‌ಗಳು ತಮ್ಮೊಂದಿಗೆ ಅಭಿವೃದ್ಧಿಯ ಸಂದೇಶವನ್ನು ಕೊಂಡೊಯ್ಯುತ್ತಿರುವುದರ ಜತೆ ಜತೆಗೆ ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಉಚಿತ ಆರೋಗ್ಯ ತಪಾಸಣೆ, ಮತ್ತು ಕ್ಷಯ, ಅಧಿಕ ರಕ್ತದೊತ್ತಡ, ಮಧುಮೇಹ ಇತ್ಯಾದಿಗಳ ಪರೀಕ್ಷೆಗಳು ಈ ಶಿಬಿರಗಳ ಭಾಗವಾಗಿದೆ.

ಈವರೆಗೆ, 63 ಲಕ್ಷಕ್ಕೂ ಅಧಿಕ ಜನರು ಈ ಆರೋಗ್ಯ ಶಿಬಿರಗಳ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಯಾತ್ರೆಯ ಸಮಯದಲ್ಲಿ, 26,752ಕ್ಕೂ ಅಧಿಕ ಗ್ರಾಮ ಪಂಚಾಯತಿಗಳು ಶೇ. 100ರಷ್ಟು ಗರಿಷ್ಠ ಪ್ರಮಾಣದ ಆಯುಷ್ಮಾನ್ ಕಾರ್ಡ್‌ಗಳ ವಿತರಣೆ ಗುರಿಯನ್ನು ಸಾಧಿಸಿವೆ (2023ರ ಡಿಸೆಂಬರ್ 12ರ ಅಂಕಿ ಅಂಶದಂತೆ).

ವಿಬಿಎಸ್ ವೈ ಸ್ವಾಸ್ಥ್ಯ ಭಾರತ ಉಪಕ್ರಮದಡಿ ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ.

ಎಬಿ-ಪಿಎಂಜೆಎವೈ ಕಾರ್ಡ್ ಗಳಿಗೆ ನೋಂದಣಿ: ಸರ್ಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ರಕ್ಷಣಾ ಯೋಜನೆಯಡಿ, ಆಯುಷ್ಮಾನ್ ಆಪ್‌ ಬಳಸಿ ಆಯುಷ್ಮಾನ್ ಕಾರ್ಡ್ ಗಳನ್ನು ಸೃಷ್ಟಿಸಲಾಗುತ್ತಿದೆ ಮತ್ತು ಫಲಾನುಭವಿಗಳಿಗೆ ಭೌತಿಕ ಕಾರ್ಡ್ ಗಳನ್ನು ವಿತರಿಸಲಾಗುತ್ತಿದೆ. 2023ರ ಡಿಸೆಂಬರ್ 12ರವರೆಗೆ ವಿಬಿಎಸ್ ವೈ ಶಿಬಿರಗಳಲ್ಲಿ 9.69 ಲಕ್ಷ ಆಯುಷ್ಮಾನ್ ಕಾರ್ಡ್ ಗಳನ್ನು ವಿತರಿಸಲಾಗಿದೆ. 1.53 ಲಕ್ಷಕ್ಕೂ ಅಧಿಕ ಜನರು ಆಯುಷ್ಮಾನ್ ಕಾರ್ಡ್ ಶಿಬಿರಗಳಲ್ಲಿ ಸೇವೆಯನ್ನು ಪಡೆದಿದ್ದಾರೆ.

ಕ್ಷಯರೋಗ ತಪಾಸಣೆ: ವಿಬಿಎಸ್‌ವೈ ನಿಲುಗಡೆ ತಾಣಗಳಿಗೆ ಭೇಟಿ ನೀಡಿದವರಿಗೆ ಕ್ಷಯರೋಗ ತಪಾಸಣೆ ಮಾಡಲಾಗುತ್ತಿದೆ. ಟಿಬಿ ಇರುವ ಶಂಕಿತ ಜನರನ್ನು ಉನ್ನತ ವೈದ್ಯಕೀಯ ಸೌಲಭ್ಯಗಳಿಗೆ ಸೇರಿಸಲಾಗುತ್ತದೆ. ಈವರೆಗೆ, ವಿಬಿಎಸ್‌ವೈ ಶಿಬಿರಗಳಲ್ಲಿ 26.41 ಲಕ್ಷ ಜನರಿಗೆ ಟಿಬಿ ತಪಾಸಣೆ ಮಾಡಲಾಗಿದೆ.

ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ (ಪಿಎಂಟಿಬಿಎಂಎ) ಅಡಿಯಲ್ಲಿ ಟಿಬಿ ರೋಗಿಗಳಿಗೆ ಇತರೆ ನೆರವು ನೀಡಲಾಗುತ್ತಿದೆ ಮತ್ತು ಟಿಬಿ ರೋಗಿಗಳು ನಿಕ್ಷಯ ಮಿತ್ರರ ನೆರವು ಪಡೆಯಲು ಒಪ್ಪಿಗೆಯನ್ನು ಪಡೆಯಲಾಗುತ್ತಿದೆ. ಟಿಬಿ ರೋಗಿಗಳಿಗೆ ಸಹಾಯ ಮಾಡಲು ನಿಕ್ಷಯ್ ಮಿತ್ರರಾಗಿ ಸ್ವಯಂಸೇವಕರಾಗಿ ಭಾಗವಹಿಸಲು ಸಿದ್ಧರಿರುವವರ ಉತ್ಸಾಹವು ಹೃದಯ ಕಲಕುವ ದೃಶ್ಯವಾಗಿದೆ. ಅವರಿಗೆ ಸ್ಥಳದಲ್ಲೇ ದಾಖಲಾತಿ ನೀಡುವ ಮೂಲಕ ಅನುಕೂಲ ಮಾಡಿಕೊಡಲಾಗುತ್ತಿದೆ. ಟಿಬಿ ರೋಗಿಗಳಿಗೆ ಸಹಾಯ ಮಾಡುವ ಮತ್ತೊಂದು ಸರ್ಕಾರಿ ಉಪಕ್ರಮವೆಂದರೆ ನಿಕ್ಷಯ್ ಪೋಷಣ್ ಯೋಜನೆ (ಎನ್ ಪಿವೈ), ಅದರ ಅಡಿಯಲ್ಲಿ ನೇರ ನಗದು ವರ್ಗಾವಣೆಯ ಮೂಲಕ ಜನರಿಗೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.

ಸಿಕಲ್ ಸೆಲ್ ರೋಗದ ತಪಾಸಣೆ (ಎಸ್ ಸಿಡಿ): ವಿಬಿಎಸ್ ವೈ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸುವವರಿಗೆ ಸಿಕಲ್ ಸೆಲ್ ರೋಗದ ತಪಾಸಣೆಯನ್ನೂ ಮಾಡಲಾಗುತ್ತಿದೆ. ರೋಗ ಹೆಚ್ಚಾಗಿ ಬುಡಕಟ್ಟು ಜನರನ್ನು ಬಾಧಿಸುತ್ತರಿವುದರಿಂದ, ಆದಿವಾಸಿ ಜನರು ಹೆಚ್ಚಿರುವಂತಹ ಪ್ರದೇಶಗಳಲ್ಲಿ ತಪಾಸಣೆಗಳನ್ನು ಕೈಗೊಳ್ಳಲಾಗುತ್ತಿದೆ. ಅರ್ಹ ವ್ಯಕ್ತಿಗಳು (ಅಂದರೆ, 40 ವರ್ಷ ವಯಸ್ಸಿನ ಜನರು) ಎಸ್ ಡಿಸಿ ಗಾಗಿ ಪಾಯಿಂಟ್ ಆಫ್ ಕೇರ್ (ಪಿಒಸಿ) ಪರೀಕ್ಷೆಗಳ ಮೂಲಕ ಅಥವಾ ಸಾಲ್ಯುಬಿಲಿಟಿ ಟೆಸ್ಟ್ ಮೂಲಕ ತಪಾಸಣೆಗೆ ಒಳಗಾಗುತ್ತಿದ್ದಾರೆ. ಈವರೆಗೆ, ವಿಬಿಎಸ್ ವೈ ನಿಲುಗಡೆ ತಾಣಗಳಿಗೆ ಭೇಟಿ ನೀಡಿದ್ದ 6.12 ಲಕ್ಷ ಮಂದಿಯನ್ನು ಎಸ್ ಸಿಡಿಗಾಗಿ ಪರೀಕ್ಷಿಸಲಾಗಿದೆ.

ಅಸಾಂಕ್ರಾಮಿಕ ರೋಗಗಳ ತಪಾಸಣೆ: ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಇತರೆ ಸದ್ದಿಲ್ಲದೆ ಕೊಲ್ಲುವ ಕಾಯಿಲೆಗಳಿಗೂ ಸಹ ಜನರು ತಪಾಸಣೆಗೆ ಒಳಗಾಗಬಹುದು. 30 ವರ್ಷ ಮತ್ತು ಅದಕ್ಕಿಂತ ಅಧಿಕ ವಯಸ್ಸಿನವರಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ತಪಾಸಣೆ ಮಾಡಲಾಗುವುದು ಮತ್ತು ಪಾಸಿಟಿವ್  ಕಂಡುಬಂದಲ್ಲಿ ಪರಿಣಾಮಕಾರಿ ನಿರ್ವಹಣೆಗಾಗಿ ಉನ್ನತ ವೈದ್ಯಕೀಯ ಕೇಂದ್ರಗಳಿಗೆ ಸೇರಿಸಲಾಗುತ್ತದೆ

ಉಲ್ಲೇಖಗಳು

· https://pib.gov.in/PressReleaseIframePage.aspx?PRID=1977062

· https://pib.gov.in/PressReleaseIframePage.aspx?PRID=1980126

· https://twitter.com/HSVB2047/status/1732081624580489547?t=iSg-qdR2fRQBgN1n4jn98g&s=08

· https://viksitbharatsankalp.gov.in/dashboards/dashboard1

· https://twitter.com/mohfw_india/status/1734470978129043536?s=46

*******



 


(Release ID: 1985900) Visitor Counter : 144