ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತಿ ಹೊಸ ವರ್ಷಕ್ಕೆ ಶುಭ ಕೋರಿದ ಪ್ರಧಾನಮಂತ್ರಿ
Posted On:
14 NOV 2023 10:57AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿ ಹೊಸ ವರ್ಷದ ಅಂಗವಾಗಿ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.
ಜಗತ್ತಿನೆಲ್ಲೆಡೆ ಹೊಸ ವರ್ಷವನ್ನು ಆಚರಿಸುತ್ತಿರುವವರಿಗೆ ಶುಭ ಕೋರಿರುವ ಪ್ರಧಾನಮಂತ್ರಿ ಅವರು “ಈ ವರ್ಷವು ವಿಶೇಷ ವರ್ಷವಾಗಿದೆ, ಏಕೆಂದರೆ ನೀವೆಲ್ಲರೂ ವೋಕಲ್ ಫಾರ್ ಲೋಕಲ್ ಅಭಿಯಾನವನ್ನು ಅದ್ಭುತವಾಗಿ ಯಶಸ್ವಿಗೊಳಿಸಿದ್ದೀರಿ.
ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ, ಹೊಸ ವರ್ಷವು ತನ್ನ ಹೊಸ ಬೆಳಕನ್ನು ಹರಡಿದೆ.
ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಮುಂಬರುವ ವರ್ಷಗಳಲ್ಲಿ ಅದೇ ಉತ್ಸಾಹದಿಂದ ಸ್ಥಳೀಯ ಉತ್ಪನ್ನಗಳಿಗೆ ಮತ್ತಷ್ಟು ಧ್ವನಿಯಾಗಲು ನಾವೆಲ್ಲರೂ ಬದ್ಧರಾಗೋಣ.’’
ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ.
“ವಿಶ್ವದಾದ್ಯಂತ ಹೊಸ ವರ್ಷವನ್ನು ಆಚರಿಸುತ್ತಿರುವ ನನ್ನ ಎಲ್ಲಾ ಕುಟುಂಬದ ಸದಸ್ಯರಿಗೆ ಹೊಸ ವರ್ಷದ ಶುಭಾಶಯಗಳು. ಈ ವರ್ಷವು ವಿಶೇಷ ವರ್ಷವಾಗಿದೆ, ಏಕೆಂದರೆ ನೀವೆಲ್ಲರೂ ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗುವ ವೋಕಲ್ ಫಾರ್ ಲೋಕಲ್ ಅಭಿಯಾನವನ್ನು ಅದ್ಭುತವಾಗಿ ಯಶಸ್ವಿಗೊಳಿಸಿದ್ದೀರಿ. ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ, ಹೊಸ ವರ್ಷವು ಹೊಸ ಬೆಳಕನ್ನು ಮೂಡಿಸಿದೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕಾಗಿ ಮುಂಬರುವ ವರ್ಷಗಳಲ್ಲಿ ಅದೇ ಉತ್ಸಾಹದಿಂದ ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಲು ನಾವೆಲ್ಲರೂ ಬದ್ಧರಾಗೋಣ’’
******
(Release ID: 1976862)
Visitor Counter : 101
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam