ಪ್ರಧಾನ ಮಂತ್ರಿಯವರ ಕಛೇರಿ

ಮೇರಿ ಮಾಟಿ ಮೇರಾ ದೇಶ್ ಉಪಕ್ರಮವನ್ನು ಉತ್ತೇಜಿಸಲು ಭಾಗಿಯಾಗಿರುವ ಎಲ್ಲರ ಪ್ರಯತ್ನ ಶ್ಲಾಘನೀಯ: ಪ್ರಧಾನಮಂತ್ರಿ

Posted On: 10 NOV 2023 8:10PM by PIB Bengaluru

ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯವು ಮೇರಿ ಮಾಟಿ ಮೇರಾ ದೇಶ್ ಉಪಕ್ರಮದ ಅಡಿಯಲ್ಲಿ ಸೆಲ್ಫಿ ವಿತ್ ಮೇರಿ ಮಾಟಿ ಅಭಿಯಾನವನ್ನು ಆಯೋಜಿಸಿದೆ.

ಮೇರಿ ಮಾಟಿ ಮೇರಾ ದೇಶ್ ಉಪಕ್ರಮವನ್ನು ಉತ್ತೇಜಿಸಲು ಭಾಗಿಯಾಗಿರುವ ಎಲ್ಲರ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು.

ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯವು ಮೇರಿ ಮಾಟಿ ಮೇರಾ ದೇಶ್ ಉಪಕ್ರಮದ ಅಡಿಯಲ್ಲಿ ಸೆಲ್ಫಿ ವಿತ್ ಮೇರಿ ಮಾಟಿ ಅಭಿಯಾನವನ್ನು ಆಯೋಜಿಸಿದೆ.

ಈ ಅಭಿಯಾನದಲ್ಲಿ 40 ವಿಶ್ವವಿದ್ಯಾನಿಲಯಗಳ 7000 ಕಾಲೇಜುಗಳಿಂದ 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು ಈ ಅಭಿಯಾನವು ಅಪಾರ ಭಾಗವಹಿಸುವಿಕೆಯಿಂದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ನಲ್ಲಿ  ದಾಖಲಾಗಿದೆ.

ಈ ಅಭಿಯಾನದ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಸಿಂದೆ ಅವರ ಸಾಮಾಜಿಕ ಜಾಲತಾಣ ಎಕ್ಸ್ ಥ್ರೆಡ್‌ಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಎಕ್ಸ್‌ನಲ್ಲಿ ಸಂದೇಶ ನೀಡಿದ್ದಾರೆ.

#MeriMaatiMeraDesh ಆಂದೋಲನಕ್ಕೆ ಬೃಹತ್ ಉತ್ತೇಜನವನ್ನು ನೀಡಿದ ಮತ್ತು ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯ ಪ್ರಜ್ಞೆಯನ್ನು ಉತ್ತೇಜಿಸಿದ ಮತ್ತು ಈ ಪ್ರಯತ್ನದಲ್ಲಿ ಸಹಭಾಗಿಗಳಾಗಿರುವ  ಎಲ್ಲರನ್ನು ನಾನು ಪ್ರಶಂಸಿಸುತ್ತೇನೆ" ಎಂದು ಸಂದೇಶ ನೀಡಲಾಗಿದೆ.



(Release ID: 1976446) Visitor Counter : 83