ಪ್ರಧಾನ ಮಂತ್ರಿಯವರ ಕಛೇರಿ
ಭೂತಾನ್ ದೊರೆ ಜಿಗ್ಮೆ ಖೇಸರ್ ನಾಂಗೇಲ್ ವಾಂಗ್‌ಚುಕ್ ಅವರನ್ನು ಭೇಟಿಯಾದ ಪ್ರಧಾನಿ
Posted On:
06 NOV 2023 11:30PM by PIB Bengaluru
ಭಾರತಕ್ಕೆ ಭೇಟಿ ನೀಡಿರುವ ಭೂತಾನ್ ದೊರೆ ಜಿಗ್ಮೆ ಖೇಸರ್ ನಾಂಗೇಲ್ ವಾಂಗ್‌ಚುಕ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಸ್ವಾಗತ ಕೋರಿದ್ದಾರೆ.
ಈ ಸಂಬಂಧ "ಎಕ್ಸ್" ಜಾಲತಾಣದಲ್ಲಿ ಸಂದೇಶ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿಗಳು,
"ಗೌರವಾನ್ವಿತ ಭೂತಾನ್ ದೊರೆ ಜಿಗ್ಮೆ ಖೇಸರ್ ನಾಂಗೇಲ್ ವಾಂಗ್‌ಚುಕ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗಿದೆ. ಭಾರತ- ಭೂತಾನ್ ಬಾಂಧವ್ಯಕ್ಕೆ ಪೂರಕವಾಗಿ ನಾನಾ ಅಂಶಗಳ ಕುರಿತು ನಾವು ಅನನ್ಯ ಹಾಗೂ ಸಕಾರಾತ್ಮಕ ಚರ್ಚೆ ನಡೆಸಿದ್ದೇವೆ. ಭೂತಾನ್‌ನಲ್ಲಿ ಜನಪರ ಅಭಿವೃದ್ಧಿ ಹಾಗೂ ಜನರ ಯೋಗಕ್ಷೇಮಕ್ಕೆ ಪೂರಕವಾಗಿ ಭೂತನ್ ದೊರೆಯವರ ದೂರದೃಷ್ಟಿಯನ್ನು ಅತಿ ಹೆಚ್ಚು ಗೌರವದಿಂದ ಕಾಣಲಾಗುವುದು,ʼʼ ಎಂದು ಹೇಳಿದ್ದಾರೆ
*******
(Release ID: 1976082)
Visitor Counter : 86
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam
,
Malayalam