ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಡಿ. ಬಿ. ಚಂದ್ರೇಗೌಡ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ 

प्रविष्टि तिथि: 07 NOV 2023 11:12AM by PIB Bengaluru

ಕರ್ನಾಟಕದಲ್ಲಿ ಸಂಸದ, ಶಾಸಕ ಮತ್ತು ಸಚಿವರಾಗಿದ್ದ ಶ್ರೀ ಡಿ ಬಿ ಚಂದ್ರೇಗೌಡ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

"ಶ್ರೀ ಡಿ.ಬಿ.ಚಂದ್ರೇಗೌಡ ಜೀ ಅವರ ನಿಧನದಿಂದ ದುಃಖವಾಗಿದೆ. ಸಾರ್ವಜನಿಕ ಸೇವೆಯ ದಿಗ್ಗಜ, ಕರ್ನಾಟಕದಲ್ಲಿ ಸಂಸದ, ಶಾಸಕ ಮತ್ತು ಸಚಿವರಾಗಿ ಅವರ ವ್ಯಾಪಕ ಅನುಭವವು ಅಳಿಸಲಾಗದ ಛಾಪು ಮೂಡಿಸಿದೆ. ನಮ್ಮ ಸಂವಿಧಾನದ ಬಗ್ಗೆ ಅವರ ಆಳವಾದ ತಿಳುವಳಿಕೆ ಮತ್ತು ಸಮಾಜ ಸೇವೆಯ ಅವರ ಬದ್ಧತೆ ಗಮನಾರ್ಹವಾಗಿದೆ. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು. ಓಂ ಶಾಂತಿ.

***


(रिलीज़ आईडी: 1975351) आगंतुक पटल : 161
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam