ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ಪೂಜ್ಯ ಪಸುಂಪೊನ್ ಮುತ್ತುರಾಮಲಿಂಗ ತೇವರ್ ಅವರ ಪವಿತ್ರ ಗುರು ಪೂಜೆಯಂದು ಗೌರವ ಸಲ್ಲಿಸಿದ ಪ್ರಧಾನಮಂತ್ರಿ
                    
                    
                        
                    
                
                
                    Posted On:
                30 OCT 2023 8:47PM by PIB Bengaluru
                
                
                
                
                
                
                ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪೂಜ್ಯ ಪಸುಂಪೋನ್ ಮುತ್ತುರಾಮಲಿಂಗ ತೇವರ್ ಅವರ ಪವಿತ್ರ ಗುರು ಪೂಜೆಯಂದು ಅವರಿಗೆ ಗೌರವ ಸಲ್ಲಿಸಿದರು.
ಪಸುಂಪೊನ್ ಮುತ್ತುರಾಮಲಿಂಗ ಥೇವರ್ ಅವರ ಸಾರ್ವಕಾಲಿಕ ತತ್ವಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯ ದಾರಿದೀಪವಾಗಿ ಉಳಿದಿವೆ ಎಂದು ಶ್ರೀ ಮೋದಿ ಹೇಳಿದರು.
ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.
“ಪೂಜ್ಯ ಪಸುಂಪೊನ್ ಮುತ್ತುರಾಮಲಿಂಗ ತೇವರ್ ಅವರ ಪವಿತ್ರ ಗುರು ಪೂಜೆಯಂದು ನಾವು ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇವೆ. ಸಮಾಜದ ಉನ್ನತಿಯಲ್ಲಿ ಆಳವಾಗಿ ಬೇರೂರಿರುವ ಅವರ ಶ್ರೀಮಂತ ಕೆಲಸ, ಏಕತೆ, ರೈತರ ಏಳಿಗೆ ಮತ್ತು ಬಡತನದ ನಿರ್ಮೂಲನೆಯನ್ನು ಪ್ರತಿಪಾದಿಸುವ ಅವರ ಆಧ್ಯಾತ್ಮಿಕ ಮಾರ್ಗವು ರಾಷ್ಟ್ರೀಯ ಪ್ರಗತಿಯ ಹಾದಿಯನ್ನು ಬೆಳಗಿಸುತ್ತಲೇ ಇದೆ. ಅವರ ಕಾಲಾತೀತ ತತ್ವಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯ ದಾರಿದೀಪವಾಗಿ ಉಳಿಯುತ್ತವೆ" ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.
*******
                
                
                
                
                
                (Release ID: 1973584)
                Visitor Counter : 113
                
                
                
                    
                
                
                    
                
                Read this release in: 
                
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            Marathi 
                    
                        ,
                    
                        
                        
                            हिन्दी 
                    
                        ,
                    
                        
                        
                            Bengali 
                    
                        ,
                    
                        
                        
                            Assamese 
                    
                        ,
                    
                        
                        
                            Manipuri 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam