ಪ್ರಕಟಣಾ ದಿನಾಂಕ:
28 OCT 2023 11:26AM by PIB Bengaluru
ಹ್ಯಾಂಗ್ ಝೌ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪುರುಷರ ಜಾವೆಲಿನ್ ಥ್ರೋ-ಎಫ್ 55 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಶ್ರೀ ನೀರಜ್ ಯಾದವ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
"ಏಷ್ಯನ್ ಪ್ಯಾರಾ ಗೇಮ್ಸ್ ನ ಪುರುಷರ ಜಾವೆಲಿನ್ ಥ್ರೋ-ಎಫ್ 55 ಸ್ಪರ್ಧೆಯಲ್ಲಿ ಶ್ರೀ ನೀರಜ್ ಯಾದವ್ ಅವರ ಮಹತ್ತರ ಚಿನ್ನದ ಪದಕ ಜಯಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು.
ಶ್ರೀ ನೀರಜ್ ಅವರ ಈ ಎರಡನೇ ಚಿನ್ನದ ಪದಕ ಐತಿಹಾಸಿಕ ಸಾಧನೆಯಾಗಿದೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು."
****