ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಪುರುಷರ ಜಾವೆಲಿನ್ ಥ್ರೋ-ಎಫ್ 37 ಸ್ಪರ್ಧೆಯಲ್ಲಿ ಹ್ಯಾನಿ ಚಿನ್ನದ ಪದಕ ಗೆದ್ದಿದಕ್ಕೆ ಪ್ರಧಾನಮಂತ್ರಿ ಸಂಭ್ರಮ
ಪ್ರಕಟಣಾ ದಿನಾಂಕ:
25 OCT 2023 4:42PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಚೀನಾದ ಹಾಂಗ್ ಝೌನಲ್ಲಿನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2022ರ ಪುರುಷರ ಜಾವೆಲಿನ್ ಥ್ರೋ-ಎಫ್ 37 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಹ್ಯಾನಿ ಅವರನ್ನು ಅಭಿನಂದಿಸಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
‘‘ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ ಜಾವೆಲಿನ್ ಥ್ರೋ-ಎಫ್ 37 ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದ ಹ್ಯಾನಿ ಅದ್ಭುತ ಸಾಧನೆ ಮಾಡಿದರು!
ಅವರ ಸಾಟಿಯಿಲ್ಲದ ಕೌಶಲ್ಯವು ಭಾರತಕ್ಕೆ ಅಪರಿಮಿತ ಸಂತಸ ಮತ್ತು ಹೆಮ್ಮೆಯನ್ನು ತಂದಿದೆ. ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು,’’ ಎಂದಿದ್ದಾರೆ.
***
(ಪ್ರಕಟಣೆ ಐ.ಡಿ.: 1971895)
ವಿಸಿಟರ್ ಕೌಂಟರ್ : 114
ಪ್ರಕಟಣೆಯನ್ನು ಇದರಲ್ಲಿ ಓದಿ:
Bengali
,
Malayalam
,
English
,
Urdu
,
Marathi
,
हिन्दी
,
Assamese
,
Manipuri
,
Punjabi
,
Gujarati
,
Odia
,
Tamil
,
Telugu