ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದಿದ್ದಕ್ಕಾಗಿ ಶಾಟ್ಪುಟ್ ಅಥ್ಲೀಟ್ ರವಿ ರೊಂಗಾಲಿ ಅವರಿಗೆ ಪ್ರಧಾನಿ ಅಭಿನಂದನೆ
प्रविष्टि तिथि:
24 OCT 2023 7:06PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪುರುಷರ ಶಾಟ್ಪುಟ್ F40 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಶಾಟ್ಪುಟ್ ಅಥ್ಲೀಟ್ ರವಿ ರೊಂಗಾಲಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ರವಿ ಅವರು ಸ್ಫೂರ್ತಿಯ ಚಿಲುಮೆ ಎಂದು ಪ್ರಧಾನಿ ಶ್ಲಾಘಿಸಿದರು.
ಈ ಕುರಿತು ಪ್ರಧಾನ ಮಂತ್ರಿ ಸಾಮಾಜಿಕ ಜಾಲತಾಣ X ನಲ್ಲಿ ಸಂದೇಶ ನೀಡಿದ್ದಾರೆ.
"ಪುರುಷರ ಶಾಟ್ಪುಟ್ F40 ಈವೆಂಟ್ನಲ್ಲಿ ಅದ್ಭುತ ಬೆಳ್ಳಿ ಪದಕಕ್ಕಾಗಿ ಪ್ರತಿಭಾವಂತ ರವಿ ರೊಂಗಾಲಿಗೆ ಹೃತ್ಪೂರ್ವಕ ಅಭಿನಂದನೆಗಳು. ರವಿ ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ, ಅವರ ಗಮನಾರ್ಹ ಸಾಧನೆಯು ಅವರ ಅಸಾಧಾರಣ ಶಕ್ತಿ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ" ಎಂದು ಪ್ರಧಾನಿ ತಿಳಿಸಿದ್ದಾರೆ.
***
(रिलीज़ आईडी: 1971551)
आगंतुक पटल : 96
इस विज्ञप्ति को इन भाषाओं में पढ़ें:
Assamese
,
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam