ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ 73 ಪದಕಗಳನ್ನು ಗೆದ್ದು, ಭಾರತ ದಾಖಲೆ: ಕ್ರೀಡಾಪಟುಗಳಿಗೆ ಪ್ರಧಾನಿ ಶ್ಲಾಘನೆ
Posted On:
26 OCT 2023 12:34PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ 73 ಪದಕಗಳ ಗೆಲ್ಲುವ ಮೂಲಕ ಭಾರತ ದಾಖಲೆ ಮಾಡಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಜಕಾರ್ತಾ 2018ರಲ್ಲಿ 72 ಪದಕಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಪ್ಯಾರಾ ಕ್ರೀಡಾಪಟುಗಳ ಬದ್ಧತೆ, ದೃಢತೆ ಮತ್ತು ಅಚಲ ವಿಶ್ವಾಸವನ್ನು ಶ್ರೀ ನರೇಂದ್ರ ಮೋದಿ ಶ್ಲಾಘಿಸಿದರು.
ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನ ಮಂತ್ರಿ ಸಂದೇಶ ನೀಡಿದ್ದಾರೆ.
ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತವು ಅಭೂತಪೂರ್ವ 73 ಪದಕಗಳನ್ನು ಗಳಿಸಿದೆ. ಇನ್ನೂ ಪ್ರಬಲವಾಗಿ ಮುಂದುವರಿಯುತ್ತಿದೆ. ಜಕಾರ್ತಾ, 2018ರ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ 72 ಪದಕಗಳ ದಾಖಲೆಯನ್ನು ಇದೀಗ ಭಾರತ ಮುರಿದಿರುವುದು ಐತಿಹಾಸಿಕ ಸಾಧನೆಯಾಗಿದೆ.
ಈ ಮಹತ್ವದ ಸಂದರ್ಭವು ನಮ್ಮ ಕ್ರೀಡಾಪಟುಗಳ ಅಚಲ ವಿಶ್ವಾಸವನ್ನು ಸಾಕಾರಗೊಳಿಸುತ್ತದೆ.
ಪ್ರತಿಯೊಬ್ಬ ಭಾರತೀಯರ ಹೃದಯದಲ್ಲಿ ಅಪಾರ ಸಂತೋಷವನ್ನು ತುಂಬುವ ಮೂಲಕ ಇತಿಹಾಸದಲ್ಲಿ ತಮ್ಮ ಹೆಸರನ್ನು ಕೆತ್ತಿರುವ ನಮ್ಮ ಅಸಾಧಾರಣ ಪ್ಯಾರಾ-ಕ್ರೀಡಾಪಟುಗಳಿಗೆ ಶ್ಲಾಘನೆ ವ್ಯಕ್ತಪಡಿಸೋಣ.
ಬದ್ಧತೆ, ದೃಢತೆ ಮತ್ತು ಉತ್ಕೃಷ್ಟತೆಗೆ ಅಚಲವಾದ ಉತ್ಸಾಹವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಈ ಹೆಗ್ಗುರುತಿನ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿರಲಿ” ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.
***
(Release ID: 1971474)
Visitor Counter : 83
Read this release in:
Marathi
,
Bengali
,
English
,
Urdu
,
Urdu
,
Hindi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam