ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ ಡಿಸ್ಕಸ್ ಥ್ರೋನಲ್ಲಿ ಚಿನ್ನ ಗೆದ್ದ ನೀರಜ್ ಯಾದವ್ ಗೆ ಪ್ರಧಾನಿ ಅಭಿನಂದನೆ
ಪ್ರಕಟಣಾ ದಿನಾಂಕ:
24 OCT 2023 8:46PM by PIB Bengaluru
ಇಂದು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ ಡಿಸ್ಕಸ್ ಥ್ರೋ-ಎಫ್ 54/55/56 ರಲ್ಲಿ ಚಿನ್ನದ ಪದಕ ಗೆದ್ದ ಅಥ್ಲೀಟ್ ನೀರಜ್ ಯಾದವ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಅವರನ್ನು ನಿಜವಾದ ಚಾಂಪಿಯನ್ ಎಂದು ಕರೆದ ಅವರು, ಯಾದವ್ ಅವರ ಅಚಲ ಬದ್ಧತೆ ಮತ್ತು ಪ್ರಯತ್ನವನ್ನು ಶ್ಲಾಘಿಸಿದರು.
ಪ್ರಧಾನ ಮಂತ್ರಿಗಳು ಟ್ವೀಟ್ ಮೂಲಕ, "ನೀರಜ್ ಯಾದವ್ ನಿಜವಾದ ಚಾಂಪಿಯನ್!
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ ಡಿಸ್ಕಸ್ ಥ್ರೋ-ಎಫ್54/55/56 ರಲ್ಲಿ ಅದ್ಭುತ ಪ್ರದರ್ಶನ ತೋರಿಸಿ ಚಿನ್ನದ ಪದಕ ಗೆದ್ದ ನೀರಜ್ ಯಾದವ್ ಅವರಿಗೆ ಅಭಿನಂದನೆಗಳು. ಅವರ ಈ ಅಸಾಧಾರಣ ಯಶಸ್ಸು ಅವರ ಅಚಲವಾದ ಬದ್ಧತೆ ಮತ್ತು ಪ್ರಯತ್ನವನ್ನು ತೋರಿಸುತ್ತದೆ. ಈ ಸಾಧನೆಯಿಂದಾಗಿ ಭಾರತ ಹೆಮ್ಮೆಯಿಂದ ಬೀಗುತ್ತಿದೆ. ಎಂದು ಶ್ಲಾಘಿಸಿದ್ದಾರೆ.
***
(ಪ್ರಕಟಣೆ ಐ.ಡಿ.: 1971361)
ವಿಸಿಟರ್ ಕೌಂಟರ್ : 111
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam