ಪ್ರಧಾನ ಮಂತ್ರಿಯವರ ಕಛೇರಿ

ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಮಹಿಳೆಯರ ಲಾಂಗ್ ಜಂಪ್ ಟಿ47 ಫೈನಲ್ ನಲ್ಲಿ ನಿಮಿಷಾ ಅವರು ಚಿನ್ನದ ಪದಕವನ್ನು  ಗೆದ್ದಿದ್ದಕ್ಕಾಗಿ ಪ್ರಧಾನಮಂತ್ರಿಯವರು ಅವರನ್ನು ಅಭಿನಂದಿಸಿದರು

Posted On: 25 OCT 2023 7:52PM by PIB Bengaluru

ಚೀನಾದ ಹ್ಯಾಂಗ್ಝೌನಲ್ಲಿ 2022 ರ ಏಷ್ಯನ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಮಹಿಳೆಯರ ಲಾಂಗ್ ಜಂಪ್ ಟಿ47 ಫೈನಲ್ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ನಿಮಿಷಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಭಿನಂದಿಸಿದರು.

ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ  ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:

“ಏಷ್ಯನ್ ಪ್ಯಾರಾ ಗೇಮ್ಸ್ನ ಮಹಿಳೆಯರ ಲಾಂಗ್ ಜಂಪ್ ಟಿ47   ಫೈನಲ್ ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ನಿಮಿಷಾ ಅವರಿಗೆ ಅನೇಕ ಅಭಿನಂದನೆಗಳು. ಈ ಗೆಲುವು ನಮಗೆ ಹೆಮ್ಮೆ ಮತ್ತು ಪ್ರೇರಣೆ ನೀಡಿದೆ. ಆಕೆಯ ಮುಂದಿನ ಪ್ರಯತ್ನಗಳಿಗೆ ಆಲ್ ದಿ ಬೆಸ್ಟ್.'

 

***



(Release ID: 1971254) Visitor Counter : 64