ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಪುರುಷರ ಜಾವೆಲಿನ್ ಎಫ್64 ಸ್ಪರ್ಧೆಯಲ್ಲಿ ಸುಮಿತ್ ಅಂತಿಲ್ ಅವರಿಂದ ಚಿನ್ನದ ಪದಕ ಗಳಿಕೆ ಮತ್ತು ವಿಶ್ವ ದಾಖಲೆ ಸೃಷ್ಟಿಗಾಗಿ  ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 25 OCT 2023 1:24PM by PIB Bengaluru

ಚೀನಾದ ಹ್ಯಾಂಗ್ ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಪುರುಷರ ಜಾವೆಲಿನ್ ಎಫ್64 2 ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದು ಪ್ಯಾರಾ ಏಷ್ಯನ್ ದಾಖಲೆ ಮತ್ತು ಗೇಮ್ಸ್ ಕ್ರೀಡಾಕೂಟದ ದಾಖಲೆಯನ್ನು ಸೃಷ್ಟಿಸಿದ್ದಕ್ಕಾಗಿ ಸುಮಿತ್ ಅಂತಿಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ;

“ಎಂತಹ ಅದ್ಭುತ ಸಾಧನೆ!

ಏಷ್ಯನ್ ಪ್ಯಾರಾ ಗೇಮ್ಸ್ ನ ಪುರುಷರ ಜಾವೆಲಿನ್ ಎಫ್64 ಸ್ಪರ್ಧೆಯಲ್ಲಿ ಸುಮಿತ್ ಅಂತಿಲ್ ಅವರು ಸಾಧಿಸಿ ಚಿನ್ನದ ಪದಕವನ್ನು ಪಡೆದಿದ್ದಾರೆ, ಮತ್ತು ವಿಶ್ವ ದಾಖಲೆ, ಪ್ಯಾರಾ ಏಷ್ಯನ್ ದಾಖಲೆ ಮತ್ತು ಗೇಮ್ಸ್ ಕ್ರೀಡಾಕೂಟದ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಸುಮಿತ್ ನಿಜವಾದ ಚಾಂಪಿಯನ್! ಅವರ ಅಸಾಧಾರಣ ಪ್ರದರ್ಶನವು ಅವರ ಅದಮ್ಯ ಮನೋಭಾವ ಮತ್ತು ಕೌಶಲ್ಯಕ್ಕೆ ಸಾಕ್ಷಿಯಾಗಿದೆ.

ಭಾರತವು ಈ ವಿಜಯವನ್ನು ಅಪಾರ ಹೆಮ್ಮೆಯಿಂದ ಸಂಭ್ರಮಿಸುತ್ತಿದೆ.


(ಪ್ರಕಟಣೆ ಐ.ಡಿ.: 1970960) ವಿಸಿಟರ್ ಕೌಂಟರ್ : 105