ಪ್ರಕಟಣಾ ದಿನಾಂಕ:
24 OCT 2023 1:07PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಮಹಿಳೆಯರ ಪ್ಯಾರಾ ಕ್ಯಾನೋ ಕೆಎಲ್ 2 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಪ್ರಾಚಿ ಯಾದವ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನ ಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ:
“ಪ್ಯಾರಾ ಕ್ಯಾನೋ ಮಹಿಳೆಯರ ಕೆಎಲ್ 2 ಸ್ಪರ್ಧೆಯಲ್ಲಿ ಪ್ರತಿಷ್ಠಿತ ಚಿನ್ನದ ಪದಕವನ್ನು ಗೆದ್ದಿದ್ದಕ್ಕಾಗಿ ಪ್ರಾಚಿ ಯಾದವ್ಗೆ ಅಭಿನಂದನೆಗಳು. ಇದು ಅಸಾಧಾರಣ ಪ್ರದರ್ಶನವಾಗಿದ್ದು, ಇದು ಭಾರತಕ್ಕೆ ಹೆಮ್ಮೆ ತಂದಿದೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು’’
***