ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವರಾತ್ರಿಯ ಶುಭ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ


ಶೈಲಾಪುರ ದೇವಿಯನ್ನು ಸಹ ಪ್ರಾರ್ಥಿಸಿದರು

Posted On: 15 OCT 2023 8:44AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಶುಭ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಪ್ರಧಾನಮಂತ್ರಿ ಅವರು ದುರ್ಗಾ ಮಾತೆಯನ್ನು ಪ್ರಾರ್ಥಿಸಿದರು.

ಇದಲ್ಲದೆ, ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಮೊದಲ ದಿನದಂದು ತಾಯಿ ಶೈಲಪುತ್ರಿಯ ಪಾದಗಳಿಗೆ ನಮಸ್ಕರಿಸಿ, ದೇಶದ ನಾಗರಿಕರಿಗೆ ಶಕ್ತಿ ಮತ್ತು ಸಮೃದ್ಧಿಯನ್ನು ಕೋರಿದ್ದಾರೆ.

ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಸರಣಿಯಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;

"ದೇಶವಾಸಿಗಳಿಗೆ ನವರಾತ್ರಿಯ ಶುಭಾಶಯಗಳು. ದುರ್ಗಾ ದೇವಿಯು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ತರಲಿ. ಜೈ ಮಾತಾ ದಿ!" ಎಂದಿದ್ದಾರೆ.

 


(Release ID: 1967910)