ಪ್ರಧಾನ ಮಂತ್ರಿಯವರ ಕಛೇರಿ
ದೆಹಲಿಯ ಕೆಂಪು ಕೋಟೆಯಲ್ಲಿ ಭಾಷಣ ವೇಳೆ ಮಾಡಿದ ಘೋಷಣೆಗಳನ್ನು ಪರಿಶೀಲಿಸಲು ಪ್ರಧಾನಿ ಮೋದಿ ಮಹತ್ವದ ಸಭೆ
ಪ್ರಕಟಣಾ ದಿನಾಂಕ:
07 OCT 2023 2:20PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ದೆಹಲಿಯ ಕೆಂಪುಕೋಟೆ ಭಾಷಣದಲ್ಲಿ ಮಾಡಿದ ಘೋಷಣೆಗಳನ್ನು ಪರಿಶೀಲಿಸಲು ಮಹತ್ವದ ಸಭೆ ನಡೆಸಿದರು.
ಪ್ರಧಾನಿ ಮೋದಿಯವರು ಕಳೆದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಕೈಗೆಟುಕುವ ರೀತಿಯಲ್ಲಿ ಸಾಲವನ್ನು ನೀಡುವ ಬಗ್ಗೆ ಖಾತರಿಪಡಿಸಿದ್ದರು. ಈ ಘೋಷಣೆಗೆ ಅನುಗುಣವಾಗಿ, ಯೋಜನೆಯನ್ನು ಕಾರ್ಯಗತಗೊಳಿಸುವ ಸಿದ್ಧತೆಗಳನ್ನು ಪ್ರಧಾನ ಮಂತ್ರಿ ಪರಿಶೀಲಿಸಿದರು.
ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿಯವರು ಮನೆಗಳಿಗೆ ಸೌರಶಕ್ತಿ ಸಂಪರ್ಕ ಒದಗಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಈ ಯೋಜನೆಯನ್ನು ಸಹ ಕಾರ್ಯಗತಗೊಳಿಸಲು ಸಿದ್ಧತೆಗಳನ್ನು ಪರಿಶೀಲಿಸಿದರು.
****
(ಪ್ರಕಟಣೆ ಐ.ಡಿ.: 1965489)
ವಿಸಿಟರ್ ಕೌಂಟರ್ : 120
ಪ್ರಕಟಣೆಯನ್ನು ಇದರಲ್ಲಿ ಓದಿ:
Bengali
,
English
,
Urdu
,
Marathi
,
हिन्दी
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam