ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಕ್ರೀಡಾಕೂಟದ ಮಹಿಳೆಯರ 54 ಕೆಜಿ ವಿಭಾಗದಲ್ಲಿ ಕಂಚು ಪದಕ ಗೆದ್ದಿದ್ದಕ್ಕಾಗಿ ಪ್ಯೂಜಿಲಿಸ್ಟ್ ( ಬಾಕ್ಸರ್) ಪ್ರೀತಿ ಪವಾರ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
03 OCT 2023 9:34PM by PIB Bengaluru
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕಾಗಿ ಮಹಿಳೆಯರ 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಬಾಕ್ಸರ್ ಪ್ರೀತಿ ಪವಾರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
19ರ ಹರೆಯದ ಬಾಲಕಿಯ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಅವರ ಸ್ಥಿರತೆ, ಸಮರ್ಪಣಾ ಮನೋಭಾವ ಮತ್ತು ಎಂದಿಗೂ ಸೋಲದ ನಿಲುವುಗಳಿಗೆ ಸಾಕ್ಷಿಯಾಗಿದೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
" ಪ್ರತಿಭಾವಂತ ಪ್ಯೂಜಿಲಿಸ್ಟ್ ( ಬಾಕ್ಸರ್) ಅವರ ಕಠಿಣ ಪರಿಶ್ರಮದಿಂದಾಗಿ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಭಾರತ ಕಂಚಿನ ಪದಕ ಗಳಿಸಿದೆ.
ಪ್ರೀತಿ ಪವಾರ್ ಅವರ ಅದ್ಭುತ ಕ್ರೀಡಾ ಪ್ರದರ್ಶನಕ್ಕಾಗಿಹೆಮ್ಮೆಪಡುತ್ತೇನೆ. ಅವರ ಸ್ಥಿರತೆ, ಸಮರ್ಪಣಾ ಮನೋಭಾವ ಮತ್ತು ಎಂದಿಗೂ ಸೋಲದ ನಿಲುವುಗಳಿಗೆ ಸಾಕ್ಷಿಯಾಗಿದೆ.”
***
(ಪ್ರಕಟಣೆ ಐ.ಡಿ.: 1963985)
ವಿಸಿಟರ್ ಕೌಂಟರ್ : 125
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam