ಪ್ರಧಾನ ಮಂತ್ರಿಯವರ ಕಛೇರಿ

ಪುರುಷರ ಟ್ರ್ಯಾಪ್ ವೈಯಕ್ತಿಕ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಕಿನಾನ್ ಚೆನೈ ಅವರನ್ನು ಪ್ರಧಾನಿ ಅಭಿನಂದಿಸಿದರು

Posted On: 01 OCT 2023 8:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ಟ್ರ್ಯಾಪ್ ವೈಯಕ್ತಿಕ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಕಿನಾನ್ ಚೆನೈ ಅವರನ್ನು ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ  ಈ ಸಂಬಂಧ ಹಂಚಿಕೊಂಡಿದ್ದಾರೆ;

"@kynanchenai ಯಶಸ್ಸಿನಿಂದ ಸಂತೋಷವಾಗಿದೆ. ಅವರು ಪುರುಷರ ಟ್ರ್ಯಾಪ್ ವೈಯಕ್ತಿಕ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಅವರು ಅತ್ಯುತ್ತಮ ಕೌಶಲ್ಯ ಮತ್ತು ದೃಢನಿಶ್ಚಯವನ್ನು ತೋರಿಸಿದ್ದಾರೆ. ಅವರ ಯಶಸ್ಸಿನಿಂದಾಗಿ, ಮುಂಬರುವ ಅನೇಕ ಶೂಟರ್ ಗಳು ಪ್ರೇರೇಪಿಸಲ್ಪಡುತ್ತಾರೆ,’’ಎಂದು ತಿಳಿಸಿದ್ದಾರೆ.

 

***



(Release ID: 1963677) Visitor Counter : 62